Home ಜಿಲ್ಲೆ ಬೆಂಗಳೂರು ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ: ಜಿ.ಶ್ರೀನಿವಾಸ್

ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ: ಜಿ.ಶ್ರೀನಿವಾಸ್

ಕೋಲಾರ,ಸೆ.೭- ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಜಿ ಶ್ರೀನಿವಾಸ್ ತಿಳಿಸಿದರು.


ನಗರದ ಅಮರ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಶಿಕ್ಷಕರು ಮಾರ್ಗದರ್ಶಕರಾಗಿ ವಿದ್ಯಾರ್ಥಿಗಳನ್ನು ಭವಿಷ್ಯದ ನಾಯಕರನ್ನಾಗಿ ರೂಪಿಸಬಹುದು, ಹಾಗಾಗಿ ಶಿಕ್ಷಕರು ರಾಷ್ಟ್ರದೇಗುಲದ ಸುಸಂಸ್ಕೃತ ವಿಗ್ರಹ ಶಿಲ್ಪಿಗಳು ಎಂದು ಹೇಳಿದರು.


ವಿದ್ಯಾರ್ಥಿಗಳು ಕಲಿಯುವ ಹಸಿವನ್ನು ಹೊಂದಿರಬೇಕು ಆಗ ಮಾತ್ರ ತಾವು ಇಚ್ಚಿಸುವ ಕೆಲಸದಲ್ಲಿ ಯಶಸ್ವಿ ಕಾಣಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.


ಸನ್ಮಾನಿತ ನಿಕಟ ಪೂರ್ವ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ ಎಂ ನಾರಾಯಣಸ್ವಾಮಿ ಮಾತನಾಡಿ ವಿದ್ಯಾರ್ಥಿಯ ಪ್ರಗತಿಯಲ್ಲಿ ಶಿಕ್ಷಕರ ಜೊತೆ ಪೋಷಕರ ಪಾತ್ರ ಇರಿದಾಗಿದ್ದು ಪೋಷಕರು ವಿದ್ಯಾರ್ಥಿಯ ಮನೋಭಾವವನ್ನು ಅರಿತು ವಿದ್ಯಾಭ್ಯಾಸ ನೀಡಬೇಕೆಂದು ಈ ದೆಸೆಯಲ್ಲಿ ಹಣಕ್ಕಿಂತ ವಿದ್ಯೆಯೇ ಸರ್ವಶ್ರೇಷ್ಠ ಎಂದು ಬಣ್ಣಿಸಿದರು.


ಅಮರ ಜ್ಯೋತಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಡಿ ಮುನಿಯಪ್ಪ ಮಾತನಾಡಿ ಶಿಕ್ಷಕರು ಮತ್ತು ಪೋಷಕರು ತಮ್ಮ ಮೇಲೆ ಇರಿಸಿರುವ ನಂಬಿಕೆಯನ್ನು ಉಳಿಸಿ ಗೊಳಿಸದೆ ಸಮಾಜದಲ್ಲಿ ಅಂಕಗಳಿಗಿಂತ ಮೌಲ್ಯ ಶಿಕ್ಷಣ ಕಲಿಕೆ ಆಗಬೇಕು, ಪೋಷಕರು ಆಗಿದ್ದಾಗ ವಿದ್ಯಾರ್ಥಿಗಳ ಮೇಲೆ ಗಮನ ಹರಿಸಿ ಅವರಿಗೆ ಆಸಕ್ತಿಯುತವಾದ ಶಿಕ್ಷಣ ನೀಡಲು ತನ್ನದ್ದರಾಗುವ ಅಗತ್ಯವಿದೆ ಎಂದರು.