
ಬೆಂಗಳೂರು,ಸೆ ೧೨-ಜಾರಿ ನಿರ್ದೇಶನಾಲಯ ತಮಗೆ ನೋಟಿಸ್ ನೀಡಿದರೆ ಅದಕ್ಕೆ ಕಾನೂನು ಬದ್ಧವಾಗಿ ಉತ್ತರ ನೀಡುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಕಳೆದ ಎರಡು ದಿನಗಳು ಹಿಂದೆ ಇಡಿ ದಾಳಿ ನಡೆಸಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಗೆ ಬೆಂಗಳೂರಿನಲ್ಲಿಂದು ಪ್ರತಿಕ್ರಿಯೆ ನೀಡಿದ ಅವರು,ಇಡಿ ನನ್ನನ್ನು ಹೂಡಿಕೆದಾರ ಎಂದು ಹೇಳಿಲ್ಲ, ಅನುಮಾನ ವ್ಯಕ್ತಪಡಿಸಿದೆ ಅಷ್ಟೇ ಎಂದರು.
ನಾನು ನೇರವಾಗಿ ಹೂಡಿಕೆ ಮಾಡಿದ್ದೇನೆ ಎಂದು ಹೇಳಿಲ್ಲ. ಅವರ ಪ್ರಶ್ನೆಗೆ ಉತ್ತರ ಅಲ್ಲೇ ಇದೆ. ನೋಟಿಸ್ ಕೊಟ್ಟು ಕರೆದರೆ ಹೋಗಿ ಸಾಕ್ಷಿ ಸಮೇತ ಸ್ಪಷ್ಟನೆ ನೀಡುತ್ತೇನೆ ಎಂದರು.
ತಮ್ಮ ವಿರುದ್ಧ ಶೇ.೪೦ರಷ್ಟು ಷೇರು ಹೊಂದಿರುವ ಆರೋಪ ಕುರಿತು ಮಾತನಾಡಿದ ಅವರು,ಯಾರಾದರೂ ನನ್ನ ಹೆಸರಲ್ಲಿ ಶೇ.೪೦ರಷ್ಟು ಇರುವ ದಾಖಲೆ ತೋರಿಸಲಿ.ಅದು ನನ್ನದಾಗಿದ್ದರೆ ಒಪ್ಪಿಕೊಳ್ಳುತ್ತೇನೆ. ಆದರೆ ನನಗೆ ಸ್ಪಷ್ಟತೆ ಇದೆ. ಇಲ್ಲಿ ಸಾಬೀತು ಮಾಡಲು ಆಗದು, ಇಡಿ ಕಚೇರಿಯಲ್ಲಿ ಸಾಬೀತು ಮಾಡುತ್ತೇನೆ ಎಂದು ಸವಾಲು ಹಾಕಿದರು.
ದೂರುದಾರರ ಬಗ್ಗೆ ತನಗೆ ಮಾಹಿತಿ ಇದೆ ಎಂದು ಹೇಳಿದ ಸತೀಶ್, “ಯಾರು ದೂರು ಕೊಟ್ಟಿದ್ದಾರೆ ಎಂದು ಹೇಳುವುದಿಲ್ಲ. ಆದರೆ ಅದನ್ನು ಸಿಎಂ ಗಮನಕ್ಕೆ ತಂದಿದ್ದೇನೆ. ದೂರು ಕೊಡುವುದು ತಪ್ಪು ಎಂದು ನಾನು ಹೇಳುತ್ತಿಲ್ಲ. ಪಕ್ಷದವರೇ ದೂರು ಕೊಟ್ಟಿರಬಹುದು, ಇಲ್ಲದೆಯೂ ಇರಬಹುದು. ಸಿಎಂ ಅದನ್ನು ನೋಡಿಕೊಳ್ಳುತ್ತಾರೆ ಎಂದರು
ಅಂತಿಮವಾಗಿ, “ಇದು ಕೇವಲ ಆರೋಪ. ಅದು ಸಾಬೀತಾಗಬೇಕು. ಇಡಿ ತನಿಖೆ ಮಾಡುತ್ತಿದೆ. ಅಂತಿಮ ವರದಿ ಬರಲಿ, ಎಲ್ಲವೂ ಗೊತ್ತಾಗುತ್ತದೆ. ರಾಜಕೀಯ ಉದ್ದೇಶ ಇದ್ದೇ ಇರುತ್ತದೆ. ಅದನ್ನು ಮೀರಿ ನಾವು ಬೆಳೆಯಬೇಕು” ಎಂದು ಎಂದು ಹೇಳಿದರು ಜಾರಕಿಹೊಳಿಯನ್ನ ವಿಜಯ್ ಮಲ್ಯ ಬೆಂಬಲಿಸಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ ಥ್ಯಾಂಕ್ಸ್ ಅಂತ ಹೇಳಿ ನಕ್ಕು ಅವರೂ ನಮ್ಮ ಫ್ಯಾನ್ಸ್ ಕ್ಲಬ್ ಗೆ ಸೇರಿದರು ಹಾಗಾದರೆ ಎಂದು ಹಾಸ್ಯ ಚಟಾಕಿ ಹಾರಿಸಿದರು


































