
ಕಲಬುರಗಿ ; ಅಖಿಲ ಕರ್ನಾಟಕ ದಲಿತ ಸೇನೆಯ ರಾಜ್ಯಾಧ್ಯಕ್ಷ ದತ್ತಾತ್ತೇಯ ಕುಡಕಿ ನೇತೃತ್ವದಲ್ಲಿ ಸೆಂಟ್ರಲ್ ರೈಲ್ವೆಯ ಜನರಲ್ ಮ್ಯಾನೇಜರ್ ರಾಜೀವ್ ಶ್ರೀವಾಸ್ತವ ಮುಂಬಯಿ ಸ್ಟೇಷನ ಗಾಣಗಾಪೂರ ರೈಲ್ವೆ ನಿಲ್ದಾಣದಲ್ಲಿ ಬೇಟಿಯಾಗಿ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳ ಕುರಿತು ಮನವರಿಕೆ ಮಾಡಿಕೊಡಲಾಯಿತು.
ಸೆಂಟ್ರಲ್ ರೈಲ್ವೆ ಈ ಪ್ರದೇಶದ ಅತಿದೊಡ್ಡ ರೈಲ್ವೆ ಜಾಲವಾಗಿದೆ. ಸಾರ್ವಜನಿಕರು ಮತ್ತು ಕೂಲಿ
ಕಾರ್ಮಿಕರು, ರೈತರು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಮತ್ತು ಕರ್ನಾಟಕ ರಾಜ್ಯದ ಕುಲಾಲಿ, ಗೌಡಗಾಂವ, ಹುಣಸಿಹಡಗಿಲ, ಸಾವಳಗಿ, ಬಬಲಾದ, ನಂದೂರ, ಮರತೂರ ಹಾಗೂ ಮಹಾರಾಷ್ಟ್ರದ ರಾಜ್ಯದ ಬೋರಟಿ, ನಾಗಣಸೂರ, ತಿಲಾಟಿ, ಟೀಕೆಕರ್ ವಾಡಿ ಜನರಿಗೆ ಅತ್ಯಂತ ಉಪಯುಕ್ತವಾದ ಸೇವೆ ಮತ್ತು ಸೌಲಭ್ಯಗಳನ್ನು ಈ ಹಿಂದೆ ತಮ್ಮ ಇಲಾಖೆಯು ನೀಡಿದೆ.
ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ರಾಯಚೂರಿನಿಂದ ಸೋಲಾಪುರ ವಿಜಯಪುರ,ಗುಂತಕಲ್, ಫಲಕನಾಮ, ಇನ್ನಿತರ ನಗರಗಳಿಗೆ ಹಲವಾರು ಪ್ರಯಾಣಿಕ ಪ್ಯಾಸೆಂಜರ್ ರೈಲುಗಳು ಓಡುತ್ತಿದ್ದವು ಮತ್ತು ಈ ಪ್ರದೇಶದ ಜನರು ತಮ್ಮ ದಿನನಿತ್ಯದ ತುರ್ತು ಕೆಲಸಗಳಿಗಾಗಿ
ಪ್ರಯಾಣಿಸುತಿದ್ದರು. ವಾಸ್ತವವೆಂದರೆ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣಗಳಿಂದಾಗಿ ಕೇಂದ್ರ ರೈಲ್ವೆ ಈ ರೈಲುಗಳನ್ನು ನಿಲ್ಲಿಸಿತ್ತು.
ಇಲ್ಲಿಯವರೆಗೆ ಪೂರ್ಣ ಪ್ರಮಾಣದಲ್ಲಿ ಪ್ಯಾಸೆಂಜರ್ ರೈಲುಗಳು ಪ್ರಾರಂಭವಾಗದಿರುವುದು ರೈಲ್ವೆ ಇಲಾಖೆಯ ವೈಫಲ್ಯವಾಗಿರುತ್ತದೆ. ರೈಲ್ವೆ ಇಲಾಖೆಯು ಕೆಲವು ಫಾಸ್ಟ್ ಪ್ಯಾಸೆಂಜರ್ ರೈಲುಗಳನ್ನು ಪ್ರಾರಂಭಿಸಿದೆ. ಆದರೆ ಪ್ರಾರಂಭಿಸಲಾದ ರೈಲುಗಳು ಕುಲಾಲಿ,ಗೌಡಗಾಂವ, ಹುಣಸಿಹಡಗಿಲ, ಸಾವಳಗಿ, ಬಬಲಾದ,ನಂದೂರ, ಮರತೂರ ಹಾಗೂ ಮಹಾರಾಷ್ಟ್ರದ ರಾಜ್ಯದ ಬೋರಟಿ, ನಾಗಣಸೂರ,ತಿಲಾಟಿ,ಟೀಕೆಕರ್ ವಾಡಿ ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತಿಲ್ಲ. ಇಲಾಖೆಯ ತಪ್ಪಿನಿಂದ ವಿದ್ಯಾರ್ಥಿಗಳು, ಕೂಲಿಕಾರ್ಮಿಕರು, ರೈತರು
ತೊಂದರೆ ಅನುಭವಿಸುತಿದ್ದಾರೆ. ಬಡಜನರಿಗೆ, ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ ಆರ್ಥಿಕ ಹೊರೆ ಬೀಳುತ್ತಿದೆ.
ಸೋಲಾಪುರದಿಂದ ಫಲಕ್‍ನಾಮ ಪ್ಯಾಸೆಂಜರ್
ಫಲಕ್‍ನಾಮ -ಕಲಬುರಗಿ, ಸೋಲಾಪುರ -ಗುಂತಕಲ್,
ಕಲಬುರಗಿ- ಸೋಲಾಪುರ, ಹೈದ್ರಾಬಾದ್ -ಕಲಬುರಗಿ ಈ ಪ್ಯಾಸೆಂಜರ್ ರೈಲುಗಳು ಪುನರ್ ಆರಂಭವಾಗಲಿಲ್ಲ.
ಆದ್ದರಿಂದ ಕಲ್ಯಾಣ ಕರ್ನಾಟಕ ಭಾಗದ ಜನರು ಅನುಭವಿಸುತ್ತಿರುವ ತೊಂದರೆಗಳಿಗೆ ಬೆಲೆ ಕೊಟ್ಟು ಕೋವಿಡ ಸಮಯದಲ್ಲಿ ನಿಲ್ಲಿಸಿದ ಪ್ಯಾಸೇಜರ್ ರೈಲುಗಳು ಪ್ರಾರಂಭಿಸಬೇಕು. ಸ್ಟೇಷನ ಗಾಣಗಾಪೂರ ನಿಲ್ದಾಣದಲ್ಲಿ, ಐಖಿಖಿ-ವಿಶಾಖಪಟ್ಟಣ, ಹೈದ್ರಾಬಾದ-ಪುಣೆ ,ಸೋಲಾಪುರ-ಹಾಸನ, ಸಾಯಿನಗರ-ಶಿರ್ಡಿ,ವಮುಂಬಯಿ-ಕೋನಾರ್ಕ ಈ ಎಲ್ಲಾ ಎಕ್ಸಪ್ರೇಸ್ ಟ್ರೇನಗಳು ನಿಲ್ಲಿಸಲು ಸೇಷನ ಗಾಣಗಾಪೂರ, ಗೂಡುರ, ನೀಲೂರ, ಕೋಗನೂರ, ಗೌಡಗಾಂವ, ನಿಂಬರ್ಗಾ, ಬೊಮ್ಮನಳ್ಳಿ, ವೈಜಾಪುರ, ಕುಡಕಿ ಗ್ರಾಮಸ್ಥರ ಜನರೊಂದಿಗೆ ಮನವಿ ಸಲ್ಲಿಸಲಾಯಿತು
ಈ ನಮ್ಮ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿ ಈ ಎಲ್ಲಾ ಟ್ರೇನಗಳ ನಿಲುಗಡಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಹಾಗೂ ಹೊಸದಾಗಿ ಮುಂಬಯಿದಿಂದ-ಬೆಂಗಳೂರು ವರೆಗೆ ಒಂದೇ ಭಾರತ ಎಕ್ಸಪ್ರೆಸ್ ಬೇಗನೆ ಪ್ರಾರಂಭಿಸಬೇಕು. ಕಲಬುರಗಿಯಿಂದ ದೆಹಲಿಗೆ ನೂತನ ಸೂಪರ್ ಫಾಸ್ಟ್ ಎಕ್ಸಪ್ರೆಸ್ ಪ್ರಾರಂಭಿಸಬೇಕೆಂದು ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷರಾದ ದತ್ತಾತ್ತೇಯ ಕುಡಕಿಯವರು ಶ್ರೀ ರಾಜೀವ್ ಶ್ರೀವಾಸ್ತವ ಸೆಂಟ್ರಲ್ ರೈಲ್ವೆಯ ಜನರಲ್ ಮ್ಯಾನೇಜರ್ ಮುಂಬಯಿ ರವರಿಗೆ ಒತ್ತಾಯಿಸಲಾಯಿತು.
ಈಸಂದರ್ಭದಲ್ಲಿ ಡಾ.ಹಣಮಂತರಾವ ಹೊಳಕುಂದಿ, ಸ್ಷೇಷನ ಗಾಣಗಾಪೂರ ವೀರಯ್ಯ ಸ್ವಾಮಿ,
ದಸ್ತಯ್ಯ ಗುತ್ತೇದಾರ, ನೀಲೂರ ಗ್ರಾಮದ ಪ್ರಕಾಶ ಹಡಪಾದ, ಶರಣುನೀಲೂರ, ಶರೀಪ ಚೌದರಿ, ಮಹಿಬೂಬ ಶೇಕ ಮಹಿಬೂಬಗೌಸ, ಮಹೇಶ ಗುತ್ತೇದಾರ, ಬಾಬು ಸಿಂಗೆ, ಸಿದ್ಧಪ್ಪ ನಾಡಗಿರಿ, ರಮೇಶ ನಾಡಗಿರಿ, ಶರಣು ಮೇಲಿನಕೇರಿ, ಕೃಷ್ಣ ಕಾನಳ್ಳಿ,ಹಾಗೂ ರಾಜ್ಯ ಗೌರವಾಧ್ಯಕ್ಷರಾದ ಆನಂದರಾಯ ಗಾಯಕವಾಡ ಆಳಂದ ತಾಲೂಕಾಧ್ಯಕ್ಷರಾದ ಭೋಜರಾಜ ಜುಭ್ರೆ ಸೇರಿದಂತೆ ಇನ್ನಿತರರು ಉಪಸ್ಥಿದ್ದರು.





























