Home ಜಿಲ್ಲೆ ಬೆಂಗಳೂರು ನಮ್ಮ ಸಂಸ್ಥೆ ವಿರುದ್ಧ ಮಾಡಲಾಗಿರುವ ಆರೋಪ ನಿರಾಧಾರ

ನಮ್ಮ ಸಂಸ್ಥೆ ವಿರುದ್ಧ ಮಾಡಲಾಗಿರುವ ಆರೋಪ ನಿರಾಧಾರ

oplus_0

ಕೆಜಿಎಫ್.ಸೆ.೬ -೨೦೧೮ ರಲ್ಲಿ ಪ್ರಾರಂಭಿಸಲಾದ ಸಂಸ್ಥೆಯು ಇಂದು ಉತ್ತಮವಾಗಿ ನಡೆಯುತ್ತಿದ್ದು ೩೦೦೦ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸದಸ್ಯರು ಸದಸ್ಯತ್ವನ್ನು ಪಡೆದಿದ್ದಾರೆ.ನಮ್ಮ ಫೆಡರೇಷನ್ ನಲ್ಲಿ ಜನರಿಗೆ ಉತ್ತಮ ಸೇವೆ ನಿಡಲಾಗುತ್ತಿದೆ ಎಂಬ ಕಾರಣಕ್ಕೆ ಪ್ರಶಸ್ತಿಯನ್ನು ಪಡೆದಿದ್ದೇವೆ ಆದರೆ ಸುಖಾಸುಮ್ಮನೆ ನಮ್ಮ ಸಂಸ್ಥೆಯ ಹೆಸರು ಕೆಡಿಸಲು ಆರೋಪವನ್ನು ಮಾಡಲಾಗುತ್ತಿದೆ.ಯಾರು ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದು ಬೇಡ ನಂಬುವುದು ಬೇಡವೆಂದು ಸ್ವರ್ಣ ವಿಲಾಸ ಸೌಹಾರ್ಧ ಕ್ರೆಡಿಟ್ ಕೋ ಅಪರೇಟಿವ್ ಲಿಮಿಟಡ್ ಸಂಸ್ಥೆಯ ಸಿಇಒ ಬಸವರಾಜ್ ಹೇಳಿದರು.


ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ನಮ್ಮ ಸಂಸ್ಥೆಯನ್ನು ೨೦೧೮ ರಲ್ಲಿ ಪ್ರಾರಂಭಿಸಿದ್ದು ಶೇರುದಾರರ ಬಂಡವಾಳ ೧೭೩ ಲಕ್ಷ ಠೇವಣಿ ಇದೆ ಠೇವಣಿ ೨೮. ೭೪ ಲಕ್ಷ ಇದ್ದು ೨೫ ಕೋಟಿ ೧೦ ಲಕ್ಷ ವಿತರಣೆ ಮಾಡಲಾಗಿದ್ದು ಸಂಸ್ಥೆಯು ಸಹಕಾರ ಇಲಾಖೆಯ ನಿಭಂದನೆಗಳನ್ನು ಪಾಲನೆ ಮಾಡುತ್ತ ಸಂಸ್ಥೆಯನ್ನು ನಗರವು ಸೇರಿದಂತೆ ಬಂಗಾರಪೇಟೆ ಬೇತಮಂಗಲದಲ್ಲಿ ಶಾಖೆಗಳನ್ನು ಹೊಂದಿದ್ದೇವೆ ಎಂದರು.


ನಮ್ಮ ಸಂಸ್ಥೆಯ ಬೆಳವಣಿಗೆಯಲ್ಲಿ ನಿಧೇರ್ಶಕರು ತಮ್ಮ ಸಹಕಾರವನ್ನು ಉತ್ತಮವಾಗಿ ನೀಡುತ್ತಿದ್ದಾರೆ ಮತ್ತು ೨೦೧೯ ರಲ್ಲಿ ಇಸಿ ಮನಿ ಎಂಬ ಸ್ಕೀಂ ಪ್ರಾರಂಭಿಸಿದೇವು ಅದರಲ್ಲಿ ೩೦೦೦ ಸಾವಿರ ಸದಸ್ಯರು ಸದಸ್ಯತ್ವನ್ನು ಪಡೆದಿದ್ದರು ಇದೀಗ ಪ್ರತಿ ತಿಂಗಳು ೧ ಕೋಟಿ ೧೦ ಲಕ್ಷ ಹಣ ಸಂಗ್ರಹವಾಗುತ್ತಿದೆ ಕರ್ನಾಟಕದಲ್ಲಿ ೨೦೦ ಸೌಹಾರ್ಧ ಸಂಸ್ಥೆಗಳು ಇಸಿ ಮನಿ ಸ್ಕೀಂ ನಡೆಸುತ್ತಿದ್ದಾರೆ ಎಂದು ತಿಳಿಸಿದರು.


ಇಸಿ ಮನಿ ನಡೆಸಲು ಯಾವುದೇ ಇಲಾಖೆಯಿಂದ ಅನುಮತಿ ಅಗತ್ಯವಿಲ್ಲ ಮತ್ತು ಇದು ಚಿಟ್ ಕಾಯ್ದೆ ಅಡಿ ಬರುವುದಿಲ್ಲ ನಮ್ಮ ಸಂಸ್ಥೆಯ ಬೈಲಾ ವನ್ನು ಸರ್ಕಾರ ಒಪ್ಪಿಗೆ ನೀಡಿದೆ ಬೈಲಾ ಪ್ರಕಾರ ಯಾವುದೇ ಒಂದು ಸಂಸ್ಥೆಯೊಂದಿಗೆ ಒಡಂಒಡಿಕೆ ಹೊಂದುವ ಮೂಲಕ ಜನರಿಗೆ ಹಣದ ವ್ಯಾಹಾರ ನಡೆಸುವ ಸೇವೆಯನ್ನು ಮಾಡಬಹುದು ಎಂದು ಆದೇಶದಲ್ಲಿ ಇದೆ ಮತ್ತು ಇಸಿ ಮನಿಯನ್ನು ಪ್ರತಿ ವರ್ಷ ನಡೆಯುವ ಅಡಿಟ್ ರಿಪೋರ್ಟ್‌ನಲ್ಲಿ ತೊರಿಸಿದ್ದೇವೆ ಪೆಡರೇಷನ್ ವತಿಯಿಂದ ೨ ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋಗಿದ್ದಾರೆ ನಾವು ಯಾವುದೇ ಕಾನೂಹು ಭಾಹಿರವಾದ ಕೆಲಸವನ್ನು ಮಾಡಿಲ್ಲ ಕಾನೂನು ವ್ಯಾಪ್ತಿಯಲ್ಲಿ ವ್ಯವಾಹಾರವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.