
ಸೈದಾಪುರ:ಮೇ.೨೦:ಶಿಕ್ಷಕರ ವೃತ್ತಿ ಅಂತ್ಯAತ ಶ್ರೇಷ್ಠವಾದದು. ಸಮಾಜದಲ್ಲಿ ನಿಮ್ಮನ್ನು ಗೌವರದಿಂದ ಕಾಣುತ್ತಾರೆ. ಈ ಸಾಧನೆಗೆ ಉತ್ತಮ ಸ್ನೇಹಿತರನ್ನು ಬೆಳಸಿಕೊಂಡು. ಸತತ ಅಧ್ಯಯನದೊಂದಿಗೆ ಸಮಯಕ್ಕೆ ಮಹತ್ವ ನೀಡಿ ಪ್ರಯತ್ನ ಮಾಡಿದಾಗ ಆದರ್ಶ ಗುರುಗಳಾಗಬಹದು ಎಂದು ವಿದ್ಯಾ ವರ್ಧಕ ಸಂಘದ ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಡಿ.ಎಲ್.ಎಡ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡ ಬೀಳ್ಕೊಡಿಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಏಕಾಗ್ರತೆ, ಆಸಕ್ತಿಯೊಂದಿಗೆ ಪ್ರಯತ್ನ ಮಾಡಬೇಕು. ಬದಲಾದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಯಶಸ್ಸು ನಮ್ಮದಾಗಲು ಸ್ಪರ್ದಾತ್ಮಕ ಮನೋಭಾನೆಯನ್ನು ಕಂಡು ಕೊಳ್ಳಬೇಕು. ಇದಕ್ಕೆ ಉಪನ್ಯಾಸಕರ ಮಾರ್ಗದರ್ಶನ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯರಾದ ಸುರೇಶ ಆನಂಪಲ್ಲಿ, ಚನ್ನರೆಡ್ಡಿ ಹುಣೆಸೆಮರ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಹಂಪಣ್ಣ ಸಜ್ಜನಶೆಟ್ಟಿ, ಜಿ.ಎಂ.ಗುರುಪ್ರಸಾದ, ಉಪನ್ಯಾಸಕರಾದ ಹಣಮರೆಡ್ಡಿ ಮೋಟ್ನಳ್ಳಿ, ಶ್ವೇತಾ ರಾಘವೇಂದ್ರ ಪೂರಿ, ಆನಂದ ಪಾಟೀಲ ಕೊಂಡಾಪುರ, ಮೀನಾಕ್ಷಿ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಇತರರಿದ್ದರು. ಪ್ರಶಿಕ್ಷಣಾರ್ಥಿ ಜಯಮ್ಮ, ಜ್ಞಾನೇಶ್ವರಿಸಿ ಪ್ರಾರ್ಥಾನಾಗೀತೆ ಹಾಡಿದರು. ಸಂತೋಷಿ ಸ್ವಾಗತಿಸಿದಳು. ಮಹಾಲಕ್ಷಿö್ಮÃ ನಿರೂಪಿಸಿದಳು. ಅಕ್ಷತ ವಂದಿಸಿದಳು.
ಇತ್ತಿಚಿಗೆ ಡಿ.ಎಲ್.ಎಡ್ ಕಾಲೇಜುಗಳ ಮಹತ್ವ ಹೆಚ್ಚಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ೧ ರಿಂದ ೫ನೇ ತರಗತಿ ಶಿಕ್ಷಕರ ಕೊರತೆ ಇದ್ದೂ. ಇಗಾಗಲೇ ಭರ್ತಿ ಮಾಡಲು ಸರಕಾರ ಮುಂದಾಗಿದ್ದೂ. ಇದಕ್ಕೆ ಡಿ.ಎಲ್.ಇಡಿ ಅರ್ಹತೆ ಮುಖ್ಯವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಪಡೆಯುತ್ತಿರುವುದು ಉತ್ತಮ ಬೆಳಣಿಗೆಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ವೆಚ್ಚದಲ್ಲಿ ವೃತ್ತಿ ಶಿಕ್ಷಣ ಪಡೆಯುವ ಅವಕಾಶ ಈ ಕೋರ್ಸದಲ್ಲಿದೆ.
ಕರಬಸಯ್ಯ ದಂಡಿಗಿಮಠ ಪ್ರಾಂಶುಪಾಲರು ಡಿ.ಎಲ್.ಇಡಿ ಕಾಲೇಜ ಸೈದಾಪುರ





















