
ಸೈದಾಪುರ:ಶಿಕ್ಷಕರ ಸೇವೆ ಅಮೋಘವಾದದು. ಉತ್ತಮ ನಾಗರಿಕರನ್ನು ನಿರ್ಮಾಣ ಮಾಡುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ ಎಂದು ಕನ್ಸ್ಲ್ಟಿಂಗ ಯಾದಗಿರಿ ಸಿವಿಲ್ ಇಂಜಿನಿರ‍್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಇಂಜಿನೀಯರ ಭೀಮಣ್ಣಗೌಡ ಪಾಟೀಲ ಕ್ಯಾತ್ನಾಳ ಅಭಿಪ್ರಾಯಪಟ್ಟರು.
ಯಾದಗಿರಿ ನಗರದಲ್ಲಿ ಕನ್ಸ್ಲ್ಟಿಂಗ ಸಿವಿಲ್ ಇಂಜಿನಿರ‍್ಸ್ ಅಸೋಸಿಯೇಷನ್ ವತಿಯಿಂದ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡ ಇಂಜಿನಿರ‍್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಸೈದಾಪುರ ಸಮೀಪದ ಮುನಗಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಲಿಂಗಣ್ಣಗೌಡ ಪಾಟೀಲ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಸೇವೆಯನ್ನು ಮಾಡಿದ ಬಸವರಾಜ ಮನಗನಾಳ, ಮುಕುಂದರಾವ್ ಅವರನ್ನು ಸನ್ಮಾನಿಸಿ ಮಾತನಾಡಿದರು. ಇನ್ನೂ ಹೆಚ್ಚಿನ ಸೇವೆ ನಿಮ್ಮದಾಗಲಿ ಆ ಮೂಲಕ ಶೈಕ್ಷಣಿಕ ಅಭಿವೃದ್ಧಿ ನಮ್ಮ ಜಿಲ್ಲೆಯದಾಗಲಿ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮುಖ್ಯಗುರು ಲಿಂಗಣ್ಣಗೌಡ ಮಾತನಾಡಿ, ಇಂಜಿನಿರ‍್ಸ್ ಕೆವಲ ಕಟ್ಟಡವನ್ನು ಕಟ್ಟುವ ಕೆಲಸ ಮಾಡದೆ. ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧಕರಿಗೆ ಸನ್ಮಾನಿಸಿ ಉತ್ತಮ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿರುವುದು ಇತರರಿಗೆ ಮಾದಿರಿಯಾಗಿದೆ. ಇನ್ನೂ ಹೆಚ್ಚಿನ ಸೇವೆ ಮಾಡುವ ಶಕ್ತಿ ಇವರದಾಗಲಿ ಎಂದು ಹಾರೈಸಿದರು. ಪಿಆರ್‌ಇ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಗಿರೀಶಕುಮಾರ ಗುಡ್ಡಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಡ್ಲೂರು, ಅಸೋಸಿಯೇಷನ್ ಅಧ್ಯಕ್ಷ ಭೀಮಣ್ಣಗೌಡ ಕ್ಯಾತ್ನಾಳ, ಕಾರ್ಯದರ್ಶಿ ಇರ್ಫಾನ್ ಬಾದಲ್, ಸದಸ್ಯರು, ನಿವೃತ್ತ ಮುಖ್ಯಗುರುಗಳು, ಶಿಕ್ಷಕರು ಸೇರಿದಂತೆ ಇತರರಿದ್ದರು.































