
ಚನ್ನಮ್ಮನ ಕಿತ್ತೂರು,ಅ೧: ಬೇಸಿಗೆ ಹಾಗೂ ಬರಗಾಲದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದAತೆ ಮುನ್ನೆಚ್ಚರಿಕೆವಹಿಸಿ ಎಂದು ಶಾಸಕ ಬಾಬಾಸಾಹೇಬ್ ಪಾಟೀಲ್ ಸೂಚಿಸಿದರು.
ಸ್ಥಳೀಯ ತಾಪಂ ಸಭಾಂಗಣದಲ್ಲಿ ಆಡಳಿತಾಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಯೋಗದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ. ತಾಲೂಕಿನ ಗ್ರಾಪಂ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿನ ಲಭ್ಯತೆ, ನೀರಿನ ಮೂಲಗಳು ಹಾಗೂ ಬೇಸಿಗೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ಮುಂಚಿತವಾಗಿ ಪರಿಶೀಲನೆ ನಡೆಸಬೇಕು. ನೀರಿನ ಮೂಲಗಳು ಬತ್ತುವ ಸಾಧ್ಯತೆ ಇರುವ ಗ್ರಾಮಗಳನ್ನು ಗುರುತಿಸಿ, ಕೊಳವೆಬಾವಿ ಕೊರೆಯಿಸಿ. ವಾಟರ್ಮನ್ಗಳು ಸರಿಯಾಗಿ ಗ್ರಾಮಗಳಲ್ಲಿ ನೀರು ಸರಬರಾಜು ಮಾಡದಿದ್ದರೆ ಅಂತಹವರ ಮೇಲೆ ಕಾನುನಾತ್ಮಕವಾಗಿ ನೋಟಿಸ್ ನೀಡಿ ಮತ್ತು ಜೆಜೆಎಂ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆÀ ಬಿಲ್ ಪಾವತಿಸಬೇಡಿ. ಮತ್ತು ಕಸ ವಿಲೇವಾರಿ, ಕೆರೆಗಳಲ್ಲಿ, ಗ್ರಾಮದ ಪಕ್ಕದಲ್ಲಿ ಕಸ ಹಾಕಿದರೆ ಪಿಡಿಓಗಳೇ ಕಾರಣ ಮುಲಾಜಿಲ್ಲದೇ ಅಂತವರಿಗೆ ನೋಟಿಸ್ ನೀಡಲಾಗುವುದು. ವಿಬಿ-ಜಿ ರಾಮ್ ಜಿ ಪ್ರತಿ ಪಂಚಾಯತಿಯಲ್ಲಿ ಪ್ರಾರಂಭಿಸಬೇಕು. ಕೂಲಿ ಇಲ್ಲವೆಂದು ಯಾರು ಗೂಳೆ ಹೋಗಬಾರದು. ನಿರಂತರವಾಗಿ ಕೂಲಿ ಒದಗಿಸಬೇಕು. ಕ್ಷೇತ್ರದ ಒಂದಿಷ್ಟು ಗ್ರಾಪಂಗಳ ವ್ಯಾಪ್ತಿ ಗ್ರಾಮಗಲ್ಲಿ ನೀರಿನ ಕೊರತೆಯಿದ್ದು ಅವುಗಳನ್ನು ತಕ್ಷಣವೇ ಬಗೆಹರಿಸಬೇಕು. ಮತ್ತು ಸಾರ್ವಜನಿಕವಾಗಿ ಗ್ರಾಪಂದಲ್ಲಿ ಏನೇ ಬಂದರೂ ಅಹವಾಲುಗಳನ್ನು ಸ್ವೀಕರಿಸಿ ನಿಮ್ಮ ಗ್ರಾಒಂದಲ್ಲಿ ಬಗೆಹರಿಸಿಕೊಳ್ಳಬೇಂದು ಶಾಸಕರು ಅಧಿಕಾರಿಗಳಿಗೆ ಖಡಕ್ಕಾಗಿ ಹೇಳಿದರು.
ನಂತರ ಚ.ಕಿತ್ತೂರು ತಾಲೂಕು ಹಾಗೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಗ್ರಾಮ ಪಂಚಾಯತಿವಾರು ವಿಬಿ-ಜಿ,ರಾಮ್ಜಿಯೋಜನೆಯ ಪ್ರಗತಿಯನ್ನು ಪರಿಶೀಲಿಸಲಾಯಿತು. ಕೈಗೊಂಡಿರುವ ಹಾಗೂ ಕಾಮಗಾರಿ ಪ್ರಗತಿಯಲ್ಲಿರುವ ಕೂಲಿಕಾರ್ಮಿಕರಿಗೆ ಒದಗಿಸಿರುವ ಉದ್ಯೋಗ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಿರುವ ಕಾಮಗಾರಿಗಳು ಸೇರಿದಂತೆ ಯೋಜನೆಯ ವಿವಿಧ ಅಂಶಗಳ ಕುರಿತು ಗ್ರಾಪಂವಾರು ಮಾಹಿತಿ ಪಡೆದುಕೊಳ್ಳಲಾಯಿತು.
ಇದೇ ವೇಳೆ ಗ್ರಾಪಂಗಳ ವ್ಯಾಪ್ತಿಯಲ್ಲಿ ಅನು?Á್ಠನಗೊಳ್ಳುತ್ತಿರುವ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಲಾಯಿತು. ಗ್ರಾಮ ಪಂಚಾಯತಿವಾರು ಪ್ರಗತಿ ಬಾಕಿ ಇರುವ ಕಾರ್ಯಗಳು ಹಾಗೂ ಮುಂದಿನ ಕ್ರಮಗಳ ಕುರಿತು ಚರ್ಚಿಸಿ, ಸರ್ಕಾರದ ಯೋಜನೆಗಳ ಅನು?Á್ಠನದಲ್ಲಿ ಯಾವುದೇ ವಿಳಂಬವಾಗದAತೆ ಕಾರ್ಯನಿರ್ವಹಿಸಲು ಆಡಳಿತಾಧಿಕಾರಿಗಳು ಹಾಗೂ ಪಿಡಿಒಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ಪ್ರಬಾರಿ ತಾಪಂ ಇಓ ಮಹೇಶ್ ಹೂಲಿ, ಬೈಲಹೊಂಗಲ ತಾಪಂ ಇಓ ಸಂಜೀವ ಜುನ್ನೂರ, ಸಹಾಯಕ ನಿರ್ದೇಶಕ ವಿಜಯ್ ಪಾಟೀಲ್, ಸಂಗನಗೌಡ ಹಂದ್ರಾಳ, ಆಡಳಿತಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಬAಧಿಸಿದ ಸಿಬ್ಬಂದಿಗಳು ಉಪಸ್ಥಿತರಿದ್ದರು.























