ಕಮಲನಗರ:ಜು.೨: ತಾಲೂಕಿನ ಎಲ್ಲಾ ಅರ್ಹ ಮತದಾರರು ಎಸ್‌ಐಆರ್-೨೦೨೬ರ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಬೂತ್ ಮಟ್ಟದ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ತಮ್ಮ ಮತ್ತು ತಮ್ಮ ಕುಟುಂಬದ ಎಲ್ಲ ಅರ್ಹ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ ತಿಳಿಸಿದರು.
ಭಾರತ ಚುನಾವಣಾ ಆಯೋಗನಿರ್ದೇಶನದಂತೆ ಮತದಾರರ ಪಟ್ಟಿಯನ್ನು ಸಮಗ್ರ, ನಿಖರ ಹಾಗೂ ದೋಷರಹಿತಗೊಳಿಸುವ ಉದ್ದೇಶದಿಂದ ವಿಶೇಷ ತೀವ್ರ ಪರಿಷ್ಕರಣೆ-೨೦೨೬ರ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಕೈಗೊಳ್ಳಲಾಗಿದೆ. ಜೂ.೩೦ ರಿಂದ ಜುನ್ ೨೯ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಎನುಮರೇಷನ್ ಫಾರಂ ವಿತರಿಸಿ, ನಮೂನೆ ಭರ್ತಿ ಮಾಡುವ ಕುರಿತು ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ. ಈ ಪರಿಷ್ಸರಣೆಯ ಅರ್ಹತಾ ದಿನಾಂಕ ಅ.೧ ಆಗಿರುತ್ತದೆ.
ಈ ಕಾರ್ಯಕ್ರಮದ ಅಂಗವಾಗಿ ಜೂ.೩೦ ರಿಂದ ಜು.೨೯ರವರೆಗೆ ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಎನುಮರೇಷನ್ ಫಾರಂ ವಿತರಿಸಿ, ಭರ್ತಿ ಮಾಡುವ ಕುರಿತು ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ.ಹಾಗೂ ಭರ್ತಿ ಮಾಡಿದ ನಮೂನೆಗಳನ್ನು ಸ್ವೀಕರಿಸಿ ಸ್ವೀಕೃತಿ ರಸೀದಿ ನೀಡಲಿದ್ದಾರೆ ಎಂದು ತಿಳಿಸಿದರು.
ಠಾಣಾಕುಶನೂರು ಉಪತಹಶೀಲ್ದಾರ್ ಶಿವಾನಂದ ನವಾಡೆ, ಶಿವಲಿಂಗ, ಶಿವಕುಮಾರ, ಸತೀಷ, ಪ್ರವೀಣ ಬಿರಾದಾರ, ಮಹೇಶ ಕಳಸೆ ಸೇರಿದಂತೆ ಪ್ರಮುಖರು ಇದ್ದರು.































