Home ಕ್ರೈಂ ಸುದ್ದಿಗಳು ಯಾದಗಿರಿಯಲ್ಲಿ 24 ವರ್ಷದ ವಿವಾಹಿತೆ ಅನುಮಾನಾಸ್ಪದ ಸಾವು: ಗಂಡ ಮತ್ತು ಅತ್ತೆ ವಿರುದ್ಧ ಕೊಲೆ ಆರೋಪ

ಯಾದಗಿರಿಯಲ್ಲಿ 24 ವರ್ಷದ ವಿವಾಹಿತೆ ಅನುಮಾನಾಸ್ಪದ ಸಾವು: ಗಂಡ ಮತ್ತು ಅತ್ತೆ ವಿರುದ್ಧ ಕೊಲೆ ಆರೋಪ

ಯಾದಗಿರಿ: ಯಾದಗಿರಿ ನಗರದ ಲಾಡ್ಜ್ ಗಲ್ಲಿ, ಸ್ಟೇಷನ್ ಏರಿಯಾ ನಿವಾಸಿಯಾಗಿದ್ದ 24 ವರ್ಷದ ವಿವಾಹಿತೆ ನಫೀಸಾ (ಪತಿ: ಮೊಹಮ್ಮದ್ ನಸುರುದ್ದೀನ್ ಚೌದರಿ) ಮೃತಪಟ್ಟಿರುವ ಘಟನೆ ನಗರದಲ್ಲಿ ಸಂಚಲನ ಮೂಡಿಸಿದೆ.

ಪೆÇಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ನಫೀಸಾ ಮೂಲತಃ ಶಹಾಪುರ ನಿವಾಸಿಯಾಗಿದ್ದು, ಸುಮಾರು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಮೂರು ವರ್ಷದ ಮಗು ಇದೆ.

ಮಗುವಿಗೆ ಹೊಡೆದ ವಿಚಾರವಾಗಿ ನಫೀಸಾ, ಆಕೆಯ ಪತಿ ಹಾಗೂ ಅತ್ತೆಯ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಪತಿ ಮತ್ತು ಅತ್ತೆ ಸೇರಿ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಆದರೆ, ಘಟನೆಯ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಎಲ್ಲ ಆರೋಪಗಳ ಕುರಿತು ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಯಾದಗಿರಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.

ಪ್ರಕರಣ ಸಂಬಂಧ ಮಹಿಳೆಯ ಪತಿ ಹಾಗೂ ಅತ್ತೆಯನ್ನು ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸುದ್ದಿ ಸಿದ್ಧಪಡಿಸುವ ವೇಳೆಗೆ ಅಧಿಕೃತ ಎಫ್‍ಐಆರ್ ದಾಖಲಾಗಿರಲಿಲ್ಲ. ಪ್ರಕರಣ ದಾಖಲಾದ ಬಳಿಕ ತನಿಖೆಯ ಆಧಾರದ ಮೇಲೆ ಹೆಚ್ಚಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.

ಪೆÇಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಇತರೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.