
ಕಲಬುರಗಿ,ಜು 31: ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಸಾಂಸ್ಕøತಿಕ ಕಲಾಸಂಸ್ಥೆಯಿಂದ ಸುಗಮ ಸಂಗೀತೋತ್ಸವ ಕಾರ್ಯಕ್ರಮ ಕಲಬುರಗಿಯ ಸೊಗಸನಗೇರಿ ಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿತು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಚಂದನಕೇರದ ರಾಚೋಟೇಶ್ವರ ಶಿವಾಚಾರ್ಯರು ಕಲಾವಿದರು ಸಂಗೀತ ಸಾಹಿತ್ಯಕ್ಕಾಗಿ ತಮ್ಮನ್ನೇ ತಾವು ತೊಡಗಿಕೊಂಡವರು ಎಂದರು. ಸಾನಿಧ್ಯ ವಹಿಸಿದ ಸುಲೇಪೇಟೆಯ ಪೂಜ್ಯ ಪಂಪಾಪತಿ ದೇವರು ಮಾತನಾಡಿ ಸಂಗೀತ ಸರ್ವರನ್ನ ಸೆಳೆಯುವ ಶಕ್ತಿ ಇದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಖ್ಯಾತ ಜ್ಯೋತಿಷ್ಯ ಪಂಡಿತರಾದ ಪೂಜ್ಯಮಲ್ಲಯ್ಯ ಮುತ್ಯ ಕಡಗಂಚಿ, ಹಿರಿಯರಾದ ಬಸವರಾಜ್ ಕಲಬುರ್ಗಿ, ಶರಣಪ್ಪ ಕಲಬುರಗಿ, ಸಂಸ್ಥೆಯ ಅಧ್ಯಕ್ಷರಾದ ಶಿವಲಿಂಗ ಶಾಸ್ತ್ರೀ ಗರೂರು ಉಪಸ್ಥಿತರಿದ್ದರು. ಕಲಾವಿದರಾದ ಅಣ್ಣಾರಾವ ಗವಾಯಿಗಳು ಮತ್ತಿಮೂಡ್, ಆನಂದ್ ಕುಮಾರ್ ನಂದಿಕೋಲ್, ಚೇತನ್ ಕುಮಾರ್ ಬೀದಿಮನಿ, ಶಿವಯ್ಯ ಸ್ವಾಮಿ ಚಿಂಚೋಳಿ, ಶರಣು ಕುಮಾರ್ ಹಾವನೂರ್, ನಾಗಲಿಂಗಯ್ಯ ಸ್ವಾಮಿ ಸುಂಟನೂರ್, ತಬಲವಾದಕರಾದ ರೇವಣಸಿದ್ದ ದೇಸಾಯಿ ಕಲ್ಲೂರ್, ಈರಯ್ಯ ಸ್ವಾಮಿ ಮಾಡ್ಯಾಳ ಸುಗಮ ಸಂಗೀತೋತ್ಸವ ಕಾರ್ಯಕ್ರಮವನ್ನು ನಡೆಸಿಕೊಟ್ಟರೆಂದು ಬಸವರಾಜ್ ಶೀಲವಂತ ಅವರು ತಿಳಿಸಿದರು































