
ಸಂಜೆವಾಣಿ ವಾರ್ತೆ
ಹುಮನಾಬಾದ್ : ಸಾಂಪ್ರದಾಯಿಕವಾಗಿ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಬಲವಾದ ಹಿನ್ನೆಲೆಯನ್ನು ಹೊಂದಿದ್ದರೂ, ಆಧುನಿಕ ದಿನಗಳಲ್ಲಿ ಆರ್ಯವೈಶ್ಯ ಸಮುದಾಯದವರು ವಿವಿಧ ಉನ್ನತ ವೃತ್ತಿಪರ ಕ್ಷೇತ್ರಗಳಲ್ಲಿ ಗಣನೀಯ ಯಶಸ್ಸನ್ನು ಸಾಧಿಸುತ್ತಿದ್ದಾರೆ ಎಂದು ಕರ್ನಾಟಕ ಆವೋಪಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಎಲ್. ಕೋರಾ ಹೇಳಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಆರ್ಯವೈಶ್ಯ ಸಮಾಜದ ಅಧಿಕಾರಿಗಳ ಹಾಗೂ ವೃತ್ತಿ ನಿರತರ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂಜಿಲ್ಲಾಮಟ್ಟದ ‘ವಾಸವಿ ಜ್ಞಾನಸಿಂಧು’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ
ಅವರು ಮಾತನಾಡಿದರು.
ಸಮುದಾಯದಯುವಜನತೆ ಕೇವಲ ಕೌಟುಂಬಿಕ ವ್ಯಾಪಾರಕ್ಕೆ ಸೀಮಿತವಾಗದೆ ಶಿಕ್ಷಣ, ತಂತ್ರಜ್ಞಾನ, ವೈದ್ಯಕೀಯ, ಆಡಳಿತ ಸೇವೆ (ಐಎಎಸ್/ ಕೆಎಎಸ್) ಹಾಗೂ ವಕೀಲ ವೃತ್ತಿಗಳಲ್ಲೂಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಿರುವುದು ಶ್ಲಾಘನೀಯ.
ಆರ್ಯವೈಶ್ಯ ಸಮುದಾಯವು ಶೈಕ್ಷಣಿಕ ಮತ್ತು ವೃತ್ತಿಪರ ಬೆಂಬಲನೀಡುವ ಮೂಲಕ ಯುವಪೀಳಿಗೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಂಘಟಿತವಾಗಿ ಶ್ರಮಿಸಬೇಕಿದೆ ಎಂದರು.
ಸಾಮಾಜಿಕ ಸಂಘಟನೆ ಹಾಗೂ ಸೇವೆಯೇ ಮೂಲ ಮಂತ್ರ: ಸಮಾಜದ ಪ್ರತಿಯೊಬ್ಬ ಸದಸ್ಯರನ್ನೂ ಒಗ್ಗೂಡಿಸಿ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ
ಉದ್ಯೋಗ ಮತ್ತು ಶಿಕ್ಷಣಕ್ಕೆ ನೆರವಾಗುವುದು ಪ್ರತಿಯೊಂದು ವೃತ್ತಿಪರ ಸಂಘಟನೆಯ ಜವಾಬ್ದಾರಿಯಾಗಿದೆ.ವಾಸವಿ ಮಾತೆಯ ತತ್ವಗಳಾದ ಅಹಿಂಸೆ, ಶಾಂತಿ ಮತ್ತು ತ್ಯಾಗದ ಮಾರ್ಗದಲ್ಲಿ ಸಾಗುತ್ತಾ, ಸಮಾಜಮುಖಿ ಕಾರ್ಯಗಳಲ್ಲಿ ನಿರತರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಲಾಯಿತು ಹಾಗೂ ವಿವಿಧ ಕ್ಷೇತ್ರಗಳಲ್ಲಿಸಾಧನೆ ಮಾಡಿದ ಗಣ್ಯರಿಗೆ ಜಿಲ್ಲಾಮಟ್ಟದ ‘ವಾಸವಿಜ್ಞಾನಸಿಂಧು’ಪ್ರಶಸ್ತಿ ನೀಡಿಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹನುಮಯ್ಯಾ ಬೇಲೂರೆ, ದತ್ತಕುಮಾರ ಚಿದ್ರಿ, ನಾರಾಯಣರಾವ ಚಿದ್ರಿ, ಸಿದ್ದಪ್ಪಾ ಜಾಜಿ, ರಾಜಶ್ರೀ ಜಾಜಿ, ಡಾ. ಚೈತೇಶ ಗಾದಾ, ಡಾ. ವಿಜಯಕುಮಾರ ಚಿದ್ರಿ, ರಮೇಶ ಗಾದಾ,ನಾಗರಾಜ ವಾಸಗಿ, ವಿನಾಯಕರಘೋಜಿ, ಸಾರಿಕಾ ಗಂಗಾ.ರಾಜಕುಮಾರ ಉಪ್ಪಲಿ,ನಾಗರಾಜರಘೋಜಿ, ಡಾ. ಗಜಾನನ, ಉದಯಶ್ರೀ ಜಾಜಿ, ಹಾರಿಕಾ ಕಲ್ಲೂರ್, ವೆಂಕಟೇಶ್‌ಐನಾಪೂರ್,ಸAದೀಪ ಕಲ್ಲೂರ್ ಸೇರಿದಂತೆ ಆರ್ಯವೈಶ್ಯ ಸಮಾಜದ ವಿವಿಧ ಹಿರಿಯ ಮುಖಂಡರು, ಸೇರಿದಂತೆ ಇನ್ನಿತರರು ಇದ್ದರು.



























