Home ಜಿಲ್ಲೆ ಕಲಬುರಗಿ ದಲಿತ ಸಂಘರ್ಷ ಸಮಿತಿ ಬಲವರ್ಧನೆ ಅಗತ್ಯ

ದಲಿತ ಸಂಘರ್ಷ ಸಮಿತಿ ಬಲವರ್ಧನೆ ಅಗತ್ಯ

ಜೇವರಗಿ,ಆ 19: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ ) ಸಂಘಟನೆ ಮತ್ತಷ್ಟು ಬಲಪಡಿಸಲು ಅಗತ್ಯವಿದೆಯೆಂದು ಮತ್ತು ದಲಿತರ ಮೇಲೆ ಇತ್ತೀಚಿನ ದಿನಗಳಲ್ಲಿ ದೌರ್ಜನ್ಯ ಹೆಚ್ಚಳವಾಗಿದೆ ಅದನ್ನು ಕಡಿವಾಣ ಹಾಕಲು ಸಂಘಟಿತ ಹೋರಾಟ ಅವಶ್ಯವಿದೆ ಎಂದು ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ನಾಗಣ್ಣ ಬಡಿಗೇರ್ ಹೇಳಿದರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕ ಸಮಿತಿಯ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ವಿಭಾಗೀಯ ಸಂಚಾಲಕ ಶ್ರೀನಿವಾಸ್ ಖೇಳಗಿ ಕಲಬುರಗಿ ಜಿಲ್ಲಾ ಸಂಚಾಲಕ ಸಂಜೀವ ಕುಮಾರ ಜವಳಕರ್, ಜಿಲ್ಲಾ ಸಂಘಟನಾ ಸಂಚಾಲಕರು ಗಳಾದ ಬಾಬುರಾವ್ ಶಳ್ಳಗಿ, ಶ್ರೀಹರಿ ಕರಕಳ್ಳಿ,.ತಾಲೂಕ ಸಂಚಾಲಕ ಸಿದ್ದು ಕೆರೂರ, ಸಂಘಟನಾ ಸಂಚಾಲಕರುಗಳಾದ, ರೇವಣಸಿದ್ಧ ಬೀರಾಳ,ಯಶ್ವಂತ್ರಾಯ ಬಡಗೇರ, ಜೈಭೀಮ್ ನರಿಬೋಳ,ಬಸವರಾಜ್ ವರ್ಚನಳ್ಳಿ, ಶರಣಬಸಪ್ಪ ಲಖಣಪುರ್,ಬೀರಲಿಂಗ್ ಕೆಲ್ಲೂರು,ಸಚಿನ್ ಮಂದೇವಾಲ್,ಖಲಿಪ್ ಮಂದ್ರವಾಡ,ಮಲ್ಲಿನಾಥ ಹೆಗಡೆ,ತಿಪ್ಪಣ್ಣ ಅಣಬಿ,ಯಡ್ರಾಮಿ ಸಂಚಾಲಕರಾದ ಮಾಡಿವಾಳ ಸಾಗರ್,ಮೌನೇಶ ಅಂಬರಖೇಡ್,ಯಲ್ಲಪ್ಪ ನೆದಲಗಿ,ಇನ್ನು ಅನೇಕ ಜನ ಕಾರ್ಯಕರ್ತರು ಉಪಸ್ಥಿತರಿದ್ದರು.