
ಲಕ್ಷೆ÷್ಮÃಶ್ವರ,ಆ೪: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು ವಿದ್ಯಾರ್ಥಿಗಳು ಸಾರ್ವಜನಿಕರು ಭೀತಿಯಲ್ಲಿಯೇ ಅಡ್ಡಾಡುವ ಸ್ಥಿತಿ ನಿರ್ಮಾಣವಾಗಿದೆ ಪಟ್ಟಣದಾದ್ಯಂತ ಎಲ್ಲೆಂದರಲ್ಲಿ ಹಿಂಡು ಹಿಂಡು ನಾಯಿಗಳು ಕಂಡುಬರುತ್ತವೆ.
ಪಟ್ಟಣದಲ್ಲಿ ನಿನ್ನೆ ದರ್ಗಾ ಸಮೀಪ ಹೋಗುತ್ತಿದ್ದಾಗ ಏಕಾಏಕಿ ನಾಯಿ ಬಾಲಕಿಯ ಮೇಲೆ ದಾಳಿ ಮಾಡಿ ತಲೆ ಮೇಲೆ ಕಚ್ಚಿದ್ದು ವಿಪರೀತ ಗಾಯದಿಂದ ಬಾಲಕಿ ಒದ್ದಾಡುತ್ತಿದ್ದಾಗ ಸಾರ್ವಜನಿಕರು ನಾಯಿಯನ್ನು ಓಡಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.
ಬಾಲಕಿ ಹೋಗುತ್ತಿದ್ದಾಗ ಏಕಏಕಿ ದಾಳಿ ಮಾಡಿದ ನಾಯಿ ಬಾಲಕೀಯ ತಲೆ ಕೂದಲನ್ನು ಹಿಡಿದು ಜಗ್ಗಾಡಿ ಕಚ್ಚಿದ್ದು ತಲೆಯ ಮೇಲೆ ವಿಪರೀತ ಗಾಯವಾಗಿದೆ ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪುರಸಭೆಯವರು ಈ ಕೂಡಲೇ ಬೀದಿ ನಾಯಿಗಳನ್ನು ಹಿಡಿದು ಬೇರಡೆಗೆ ಸಾಗಿಸಬೇಕು ಎಂಬ ಕೂಗು ಕೇಳುತ್ತಿದೆ ಇದೆ ಪಟ್ಟಣದಲ್ಲಿ ನಾಯಿಗಳ ದಾಳಿಯಿಂದ ಕುರಿಗಳು ಸಹ ಸಾವನ್ನಪ್ಪಿದ ಘಟನೆ ಜರುಗಿವೆ.
ಪಟ್ಟಣದ ಬಸ್ ನಿಲ್ದಾಣ ಶಿಗ್ಲಿ ಕ್ರಾಸು ಆಸ್ಪತ್ರೆ ಕ್ರಾಸು ಸೇರಿದಂತೆ ಅನೇಕ ಕಡೆ ವಿಪರಿತವಾದ ನಾಯಿಗಳ ಹಾವಳಿ ಇದ್ದು ಕೂಡಲೇ ಪುರಸಭೆ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.






























