ಮಾಲೂರು.ಜು೫: ತಾಲೂಕಿನ ಹುಂಗೇನಹಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳೆದ ಇಂಜಿನಿಯರ್ ಹಿರಣ್ಯಗೌಡ ರಾಜ್ಯದ ಬಹುತೇಕ ಅಣೆಕಟ್ಟುಗಳ ನಿರ್ಮಾಣ ಹಾಗೂ ನಿರ್ವಹಣೆಯ ಜವಾಬ್ದಾರಿ ಹೊತ್ತು ಕೆಲಸ ನಿರ್ವಹಿಸಿದವರು ಅವರ ಜ್ಞಾಪಕರ್ತವಾಗಿ ಕುಟುಂಬ ವರ್ಗದವರು ಅಭಿಮಾನಿಗಳು ಹಿರಣ್ಣಗೌಡ ಶಿಲಾಪ್ರತಿಮೆ ಅನಾವರಣ ಮಾಡುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ತಾಲೂಕಿನ ಹುಂಗೇನಹಳ್ಳಿ ಗ್ರಾಮದಲ್ಲಿ ಹಿರಣ್ಯಗೌಡರ ಕುಟುಂಬ ಹಾಗೂ ಅವರ ಅಭಿಮಾನಿಗಳು ನಿರ್ಮಿಸಿರುವ ಸಮಾಜ ಸೇವಕರು ಹಾಗೂ ಇಂಜಿನಿಯರ್ ದಿವಂಗತ ಎಚ್.ವಿ.ಹಿರಣ್ಯಗೌಡರ ಶಿಲಾ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.
ತಾಲೂಕಿನಲ್ಲಿ ಪ್ರತಿಭಾವಂತ ವ್ಯಕ್ತಿಗಳು ಹುಟ್ಟಿ ಬೆಳೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ತಾಲೂಕಿನ ಕೀರ್ತಿಯನ್ನು ಬಾನೆತ್ತರಕ್ಕೆ ಬೆಳಗಿದ್ದಾರೆ, ಅವರು ನಮ್ಮೊಂದಿಗೆ ಇಲ್ಲದಿದ್ದರೂ ಸಹ ಅವರ ಆಡಳಿತ ಅವಧಿಯಲ್ಲಿ ಮಾಡಿರುವ ಕೆಲಸ ಕಾರ್ಯಗಳು ಶಾಶ್ವತವಾಗಿದೆ, ಇಲ್ಲಿನ ಹುಂಗೇನಹಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳೆದ ಹಿರಣ್ಯ ಗೌಡರ ಕುಟುಂಬಕ್ಕೆ ಇತಿಹಾಸವಿದೆ ಎಂದರು.
ಅವರ ಸೇವಾ ಅವಧಿಯಲ್ಲಿ ಮಾಡಿರುವ ಅಣೆಕಟ್ಟುಗಳು ಹಾಗೂ ಕೆಲಸಗಳು ಶಾಶ್ವತವಾಗಿ ಉಳಿದಿವೆ ತಾಲೂಕಿಗೆ ಮಾದರಿಯಾಗಿರುವ ಇವರು ಗ್ರಾಮದಲ್ಲಿ ಹಲವಾರು ದೇವಾಲಯಗಳ ನಿರ್ಮಾಣ ಸೇರಿದಂತೆ ಸಮಾಜ ಸೇವೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಬಡವರ ಅನಾರೋಗ್ಯಕ್ಕಾಗಿ ಆರ್ಥಿಕ ಸಹಾಯ ಹೀಗೆ ಹತ್ತಾರು ಸಮಾಜ ಸೇವೆಯನ್ನು ಮಾಡಿದ್ದರು. ತಮ್ಮ ವಂಶ ಮತ್ತು ಗ್ರಾಮದ ಬಗ್ಗೆ ಪುಸ್ತಕವನ್ನು ಸಹ ಬರೆದಿದ್ದಾರೆ ಹಿರಣ್ಯಗೌಡರವರ ನಿಸ್ವಾರ್ಥ ಸಮಾಜಸೇವೆ, ಜನಪರ ಕಾಳಜಿ ಹಾಗೂ ಅಭಿವೃದ್ಧಿಯ ದೂರದೃಷ್ಟಿಯನ್ನು ಸ್ಮರಿಸಿದರು. ಸಮಾಜಕ್ಕಾಗಿ ಬದುಕಿದ ವ್ಯಕ್ತಿತ್ವಗಳು ಎಂದಿಗೂ ಮರೆಯಾಗುವುದಿಲ್ಲ ಅವರ ಆದರ್ಶಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿರುತ್ತವೆ ಎಂಬ ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್, ರುಕ್ಮಿಣಿಯಮ್ಮ ಹಿರಣ್ಣಗೌಡ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಡಾ.ರಮೇಶ್, ಕೆಎಸ್‌ಎಫ್.ಡಿ.ಸಿ ಮಾಜಿ ಅಧಿಕಾರಿ ಕೆ.ಆರ್.ಕೃಷ್ಣಸ್ವಾಮಿ, ಹಿರಣ್ಯಗೌಡ, ಅಭಿಮಾನಿಗಳ ಬಳಗದ ಹೆಚ್.ವಿ.ಸಂಪತ್, ಎಚ್.ಜೆ.ರಘುನಾಥ್, ಎಚ್.ಜೆ.ಶ್ರೀನಿವಾಸ್, ಹೆಚ್.ವೆಂಕಟೇಶಪ್ಪ, ನವಾಜ್ ಶರೀಪ್, ಎಚ್.ವಿ.ವೆಂಕಟೇಶ್ ಎಚ್.ಆರ್.ವೆಂಕಟಚಲಪತಿ, ಡಾ.ಹೆಚ್.ಅನಂತಪದ್ಮನಾಭ್, ವೇಣುಗೋಪಾಲ ಕೃಷ್ಣ, ಎಸ್.ನಾಗರಾಜ್, ವೆಂಕಟೇಶ್ ಪ್ರಸಾದ್, ಜಯರಾಮ್, ಪ್ರಸಾದ್, ಹರಿಪ್ರಸಾದ್, ಶಿಲ್ಪಿ ಎಸ್‌ಷಣ್ಮುಖ ಪ್ರಸಾದ್, ನಿವೃತ್ತ ಶಿಕ್ಷಕರುಗಳಾದ ವೆಂಕಟಸ್ವಾಮಿ, ಜಿ.ಪಂ ಮಾಜಿ ಸದಸ್ಯ ಕನಕ ಶ್ರೀನಾಥ್, ತಾ.ಪಂ.ಮಾಜಿ ಸದಸ್ಯ ಶ್ರೀನಾಥ್ ಹಾಜರಿದ್ದರು.
































