
ಬೆಂಗಳೂರು, ಅ.೧೯: ಸ್ಟಿಂಗ್ ಕಾರ್ಯಾಚರಣೆಗಳು ಒಳ್ಳೆಯ ಬೆಳವಣಿಗೆಯಲ್ಲ ಸಾರ್ವಜನಿಕ ಜೀವನದಲ್ಲಿ ತಪ್ಪುಗಳಾಗಬಹುದು, ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಆದರೆ, ಈ ಹಂತಕ್ಕೆ ಎಂದಿಗೂ ತಲುಪಿರಲಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಸ್ಟಿಂಗ್ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿಇವೆಲ್ಲವೂ ಕೂಡ ಒಂದು ರೀತಿಯ ಅಸಹ್ಯ ಅನ್ನೋ ರೀತಿನಲ್ಲಿ ನಡೆಯುತ್ತಿದೆ.
ನಾನು ಇದಕ್ಕೆ ಹೆಚ್ಚು ಪ್ರತಿಕ್ರಿಯೆ ಕೊಡೋದಕ್ಕೆ ಕೊಡೋದ ಬದಲು, ಸುಮ್ನೆ ಇರೋದು ಅಷ್ಟೇಒಬ್ಬೊಬ್ಬರು ಒಂದೊಂದು ಪ್ರತಿಕ್ರಿಯೆ ಮಾಡ್ತಾ ಹೋದ್ರೆ, ಇದು ಎಲ್ಲಿಗೆ ತಲುಪುತ್ತೆ ಅದಕ್ಕಾಗಿ ಹೆಚ್ಚು ಇದನ್ನ ಸಾರ್ವಜನಿಕವಾಗಿ ಚರ್ಚೆ ಮಾಡೋದು ಒಳ್ಳೆಯದಲ್ಲ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸಚಿವರಾಗಿರುವವರು ತಮ್ಮ ವ್ಯಕ್ತಿತ್ವ, ಸ್ಥಾನಮಾನ ಮತ್ತು ಅದರ ಪರಿಣಾಮದ ಬಗ್ಗೆ ಯೋಚಿಸಬೇಕು. “ಇವೆಲ್ಲ ಒಂದು ರೀತಿಯ ಅಸಹ್ಯ ಎನ್ನು ರೀತಿಯಲ್ಲಿ ನಡೆಯುತ್ತಿದೆ” ಎಂದು ಪರಮೇಶ್ವರ್ ಕಿಡಿಕಾರಿದ್ದಾರೆ.
ಹೆಚ್ಚು ಸಾರ್ವಜನಿಕ ಚರ್ಚೆ ಮಾಡುವುದು ಸೂಕ್ತವಲ್ಲ. ಸರ್ಕಾರದ ಇಮೇಜ್ ರಕ್ಷಿಸಬೇಕು, ಜನರಿಗೆ ಸತ್ಯಾಂಶ ತಿಳಿಸಬೇಕು. ಕಾನೂನು ಚೌಕಟ್ಟಿನಲ್ಲಿ ಗೃಹ ಸಚಿವರು ಕ್ರಮ ಕೈಗೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳೂ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರವಾಗಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಸಮಾಧಾನವಿದೆಯೇ ಎಂಬ ಪ್ರಶ್ನೆಗೆ “ಸಿದ್ದರಾಮಯ್ಯನವರು ಸರ್ಕಾರ ಸರಿಯಾಗಿ ಇದನ್ನ ಸರಿಯಾಗಿ ನಿರ್ವಹಣೆಮಾಡಲಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಗೃಹ ಸಚಿವರು ಸಮರ್ಥರಾಗಿದ್ದು, ಅವರೇ ಕ್ರಮ ತೆಗೆದುಕೊಳ್ಳುತ್ತಾರೆ” ಸಿದ್ದರಾಮಯ್ಯಗೆ ಅಸಮಾಧಾನ ಏನು ಇಲ್ಲ ಎಂದು ಸ್ಪಷ್ಟಪಡಿಸಿದರು
ಮಧ್ಯಂತರ ಚುನಾವಣೆ ಹಾಗೂ ೨೦೨೮ರಲ್ಲಿ ಮತ್ತೊಂದು ಮುಖ ತೋರಿಸುವುದಾಗಿ ಹೇಳಿರುವ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, “ಅವರ ಹೇಳಿಕೆಗಳಿಗೆ ಉತ್ತರ ಕೊಡುತ್ತಾ ಹೋದರೆ ಕೊನೆ ಇರುವುದಿಲ್ಲ. ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ನಿರ್ವಹಣೆ ಮಾಡುತ್ತದೆ” ಎಂದರು. ಹೈಕಮಾಂಡ್ ಸಲಹೆ ಕುರಿತು “ಸಲಹೆ ಇದ್ದರೆ ಗಂಭೀರವಾಗಿ ಪರಿಗಣಿಸೋಣ” ಎಂದರು. “೨೦೨೮ಕ್ಕೆ ಯಾರು ಅಧಿಕಾರಕ್ಕೆ ಬರುತ್ತಾರೆ ಎಂದು ನಾನೂ ಹೇಳಲಾಗುವುದಿಲ್ಲ, ಅವರೂ ಹೇಳಲಾಗುವುದಿಲ್ಲ.
ಜನರೇ ಹೇಳುತ್ತಾರೆ” ಎಂದು ತಿರುಗೇಟು ನೀಡಿದರು. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ರಾಜ್ಯಕ್ಕೆ ಬಂದು ರಾಜಕಾರಣ ಮಾಡಲಿ ಯಾರು ಬೇಡ ಅಂದವರೆನಾಳೆನೇ ಅವರು ರಾಜಿನಾಮೆ ಕೊಟ್ಟು ಬಂದು, ಈಗ ರಾಜ್ಯದಲ್ಲಿ ರಾಜಕಾರಣ ಮಾಡ್ಲಿ
ಯಾರು ಯಾರಾದರೂ ರಾಜಕೀಯದಲ್ಲಿ ಯಾರನಾದರೂ ಯಾರಾದರೂ ತಡೆಯೋಕೆ ಆಗುತ್ತಾ ಎಂದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ. ಜಾನುವಾರುಗಳಿಗೆ ಮೇವು ಸಿಕ್ಕೋದಿಲ್ಲ. ಜನಗಳಿಗೆ ಊಟ ಸಿಗೋದಿಲ್ಲ ಅಂತಹ ಪರಿಸ್ಥಿತಿ ಇದಾದ ಮೇಲೆ ಕುಡಿಯೋ ನೀರು ಕೂಡ ಸಿಕ್ತಾ ಇಲ್ಲ. ಬಹಳಷ್ಟು ಕಡೆ ಈಗಾಗಲೇ ಟ್ಯಾಂಕರ್ಸ್ ಅಲ್ಲಿ ಕೊಡ್ತಾ ಇದ್ದೀವಿ. ಪ್ರೈವೇಟ್ ಬೋರ್ವೆಲ್ ಅಲ್ಲಿ ಕೊಡ್ತಾ ಇದ್ದೀವಿ.
ನೀರಿನ ಮೂಲವೇ ಬತ್ತಿ ಹೋದರೆ ನೀವು ಯಾವ ಟ್ಯಾಂಕರ್ ಇಂದ ಎಲ್ಲಿಂದ ತುಂಬಿಕೊಂಡು ಬಂದು ಕೊಡ್ತೀರಾ ಅಂತ ಪರಿಸ್ಥಿತಿ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು
ಅದಕ್ಕಾಗಿ ಬಹಳ ಗಂಭೀರವಾದಂತಹ ವಿಚಾರ ಇದು ಬರಪೀಡಿತ ಪ್ರದೇಶ ಅಂತ ಘೋಷಣೆ ಮಾಡಬೇಕು. ಕೇಂದ್ರ ಸರ್ಕಾರ ನಿಯಮಗಳ ಆಧಾರದ ಮೇಲೆ ನಾವು ಬರಪಿಡಿತ ಪ್ರದೇಶ ಅಂತ ಘೋಷಣೆ ಮಾಡ್ತೀವಿ. ಪ್ರತಿ ಸಾರಿನೂ ಕೂಡ ಇಷ್ಟು ನಷ್ಟ ಆಗಿದೆ ಅಂತ ಅಂದಾಜು ಮಾಡ್ತೀವಿ. ನಮಗೆ ಇಷ್ಟು ಹಣ ಕೊಡಿ ಅಂತ ಹೇಳಿ ಎನ್ ಡಿ ಆರ್ ಎಫ್ ನಿಯಮದಲ್ಲಿ ಕೇಳ್ತೀವಿ ಅವರು ಅದನ್ನ ಕೊಡಬೇಕು. ಹಣ ಬಂದ್ರೆ ಕೊನೆ ಪಕ್ಷ ನಮ್ಮ ರೈತರಿಗಾಗಲಿ ಯಾರು ಕಷ್ಟದಲ್ಲಿದ್ದಾರೆ ಅವರಿಗೆ ಕೊಡಬಹುದು ಎಂದು ಹೇಳಿದರು.
ಬರ ಪರಿಹಾರಕ್ಕೆ ನೆರವು ಕೋರಿ ಕೇಂದ್ರಕ್ಕೆ ಸಲ್ಲಿಸಲು ಮೂರನೇ ಪ್ರಸ್ತಾವನೆ ತಯಾರು ಮಾಡ್ತಾ ಇದ್ದೀವಿ. ಒಂದೆರಡು ದಿನದಲ್ಲಿ ರೆಡಿ ಆಗ್ತಾ ಇದೆ. ಅದನ್ನು ತಗೊಂಡು ಹೋಗಿ ಕೇಂದ್ರ ಸರ್ಕಾರಕ್ಕೆ ತಲುಪಿಸುತ್ತೇವೆ. ಮುಖ್ಯಮಂತ್ರಿಗಳು ನಾನು ಅಥವಾ ನಾವು ಡೆಲಿಗೇಶನ್ ಹೋಗೋದು ಅದನ್ನ ನಿರ್ಧಾರ ಮಾಡುತ್ತಾರೆ ಎಂದರು.
ಮುಖ್ಯಮಂತ್ರಿಗಳು ಈಗಾಗಲೇ ಸರ್ವ ಪಕ್ಷ ನಿಯೋಗ ಹೋಗೋಣ ಅಂತ ಹೇಳಿದರು. ಆದರೆ ವಿರೋಧ ಪಕ್ಷದವರು ನಾವು ಬರೋದಿಲ್ಲ ಅಂತ ಹೇಳಿದ ಮೇಲೆ ಯಾವ ರೀತಿ ಮಾಡೋದು ಅಂತ ಚರ್ಚೆ ಮಾಡ್ತೀವಿ. ನಾವು ರಾಜ್ಯ ಸರ್ಕಾರವಾಗಿ ಏನು ಮಾಡಬಹುದು?
ಕುಡಿಯೋ ನೀರಿಗೆ ಹಣ ಕೊಟ್ಟಿದ್ದೀವಿ. ಅದನ್ನು ನಿರ್ವಹಣೆ ಮಾಡಲಾಗುತ್ತಿದೆ. ಡಿಸಿ ಗಳು ಸಿಇಓ ಗಳು ನಿರ್ವಹಣೆ ಮಾಡ್ತಿದ್ದಾರೆ. ಕಾಮಗಾರಿಗಳಿಗೆ ಒಂದು ಪೈಸಾ ಕೇಂದ್ರ ಸರ್ಕಾರದಿಂದ ನಮಗೇನೂ ಬಂದಿಲ್ಲ. ಸರ್ಕಾರ ಈಗ ಬರೀ ಎರಡುವರೆ ಸಾವಿರ ಕೊಡೋದಕ್ಕೆ ೧೨೫೦ ಕೋಟಿ ಆಗಿದೆ. ಅದನ್ನ ನಾವು ನಮ್ಮ ರಾಜ್ಯ ಸರ್ಕಾರದಿಂದ ಕೊಟ್ಟುಕೊಳ್ಳುತ್ತಿದ್ದೇವೆ. ಹೀಗಾಗಿ ಪರಿಸ್ಥಿತಿ ಬಹಳ ಗಂಭೀರವಾಗಿದೆ ಅನ್ನೋದು ಅಷ್ಟೇ ಹೇಳಬೇಕು ಎಂದರು


























