Home ಮುಖಪುಟ ಸುದ್ದಿ ತುರ್ತು ಲ್ಯಾಂಡಿಂಗ್ ಭಾರತೀಯ ಏರ್ ಆಂಬ್ಯುಲೆನ್ಸ್: ರೋಗಿ ಸಾವು

ತುರ್ತು ಲ್ಯಾಂಡಿಂಗ್ ಭಾರತೀಯ ಏರ್ ಆಂಬ್ಯುಲೆನ್ಸ್: ರೋಗಿ ಸಾವು

ಢಾಕಾ, ಅ.೧೯- ಭಾರತೀಯ ಮಹಿಳಾ ರೋಗಿಯನ್ನು ಹೊತ್ತು ಸಾಗಿಸುತ್ತಿದ್ದ ಏರ್‌ಆಂಬ್ಯುಲೆನ್ಸ್‌ವೊಂದು ತಾಂತ್ರಿಕ ಕಾರಣದಿಂದ ಆಕಾಶದಲ್ಲೇ ಬಾಗಿಲು ತೆರೆದ ಹಿನ್ನೆಲೆ, ಅದನ್ನು ತುರ್ತಾಗಿ ಬಾಂಗ್ಲಾದೇಶದಲ್ಲಿ ಲ್ಯಾಂಡ್ ಮಾಡಲಾಗಿದೆ. ಘಟನೆಯಲ್ಲಿ ಮಹಿಳಾ ರೋಗಿ ಸಾವನ್ನಪ್ಪಿದ್ದಾರೆ.


ವಿಟಿ-ಎಚ್‌ವೈಎ ನೋಂದಾಣಿತ ಬೀಚ್‌ಕ್ರಾಫ್ಟ್ ಕಿಂಗ್ ಏರ್ ಸಿ೯೦ಎ ಏರ್‌ಕ್ರಾಫ್ಟ್ ಮಹಿಳಾ ರೋಗಿಯನ್ನು ಹೊತ್ತು ಅಗರ್ತಲಾದಿಂದ ಕೋಲ್ಕತ್ತಾಕ್ಕೆ ಹಾರಾಟ ನಡೆಸಿತ್ತು. ೧೨,೦೦೦ ಎತ್ತರದಲ್ಲಿ ವಿಮಾನ ಹಾರಾಟ ನಡೆಸುವಾಗ ಈ ಸಮಸ್ಯೆ ಉಂಟಾಗಿದೆ ಎಂದು ವರದಿಯಾಗಿದೆ.


ಏರ್‌ಕ್ರಾಫ್ಟ್ ಮಧ್ಯಾಹ್ನ ೧.೪೦ರ ಸಮಾರಿಗೆ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಏರ್‌ಕ್ರಾಫ್‌ನಲ್ಲಿ ಏಳು ಜನರಿದ್ದು, ಇದರಲ್ಲಿ ಇಬ್ಬರು ಪೈಲಟ್‌ಗಳು, ಓರ್ವ ರೋಗಿ, ವೈದ್ಯರು ಮತ್ತು ಪ್ಯಾರಾಮೆಡಿಕ್ ಮತ್ತು ಇಬ್ಬರು ಸಹಚರರಿದ್ದರು ಎಂದು ವರದಿಯಾಗಿದೆ.


ರೋಗಿಯನ್ನು ೫೬ವರ್ಷದ ಅಂಜನಾ ಬೌಮಿಕ್ ಎಂದು ಗುರುತಿಸಲಾಗಿದೆ. ಇವರನ್ನು ಕುರ್ಮಿತೊಲಾ ಮಲ್ಟಿಕೇರ್ ಸ್ಪೇಷಲೈಸ್ಡ್ ಆಸ್ಪತ್ರೆಗೆ ತಕ್ಷಣಕ್ಕೆ ಸಾಗಿಸಲಾಗಿತ್ತು. ಈ ವೇಳೆ ರೋಗಿ ಸಾವನ್ನಪ್ಪಿದ್ದಾರೆ. ಉಳಿದೆಲ್ಲಾ ಏರ್‌ಕ್ರಾಫ್ಟ್ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ ಎಂದು ಡಾಕಾದ ಮಾಧ್ಯಮವೊಂದು ವರದಿ ಮಾಡಿದೆ