Home ಜಿಲ್ಲೆ ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಕನ್ನಡಿಗರ ನೇಮಕ ಮಾಡಿ; ಎಂ.ಎಸ್.ಪಾಟೀಲ ನರಿಬೋಳ ಆಗ್ರಹ

ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಕನ್ನಡಿಗರ ನೇಮಕ ಮಾಡಿ; ಎಂ.ಎಸ್.ಪಾಟೀಲ ನರಿಬೋಳ ಆಗ್ರಹ

ಕಲಬುರಗಿ,ಅ.19-ಜಿಲ್ಲೆಯ ಕಡಗಂಚಿ ಬಳಿಯಿರೋ ರಾಜ್ಯದ ಏಕೈಕ ಕೇಂದ್ರಿಯ ವಿಶ್ವವಿಧ್ಯಾಲಯದ ಕುಲಪತಿಗಳ ಸ್ಥಾನಕ್ಕೆ ಕನ್ನಡಿಗರನ್ನ ಆಯ್ಕೆ ಮಾಡಬೇಕು ಎಂದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಆಗ್ರಹಿಸಿದ್ದಾರೆ.
ಹಿಂದುಳಿದ ಭಾಗವಾದ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ 2009 ರಲ್ಲಿ ಕೇಂದ್ರಿಯ ವಿಶ್ವವಿಧ್ಯಾಲಯ ಸ್ಥಾಪನೆಯಾಗಿದೆ. ಕರ್ನಾಟಕ ಕೇಂದ್ರಿಯ ವಿಶ್ವವಿಧ್ಯಾಲಯವೂ ಈ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಸಾಕಷ್ಟು ಪ್ರಯತ್ನ ಪಡುತ್ತಿದೆ. ಹೀಗಾಗಿ ನಮ್ಮ ನಾಡಿನಲ್ಲಿರೋ ವಿಶ್ವವಿಧ್ಯಾಲಯಕ್ಕೆ ಕನ್ನಡಿಗರೇ ಕುಲಪತಿಗಳಾದರೇ ಮತ್ತಷ್ಟು ಅನೂಕುಲವಾಗುತ್ತೆ. ಇಲ್ಲಿನ ನೆಲ,ಜಲ,ಭಾಷೆ ಮತ್ತು ಮುಖ್ಯವಾಗಿ ಶೈಕ್ಷಣಿಕವಾಗಿ ಹಿಂದುಳಿದಿರೋ ಕಲ್ಯಾಣ ಕರ್ನಾಟಕ ಭಾಗವನ್ನ ಮುನ್ನಲೇಗೆ ತರುವದಕ್ಕೆ ಮತ್ತಷ್ಟು ಅನೂಕುಲವಾಗುತ್ತೆ. ಈ ಮೊದಲು ಕನ್ನಡಿಗರನ್ನೆ ಕುಲಪತಿಗಳನ್ನಾಗಿ ನೇಮಕ ಮಾಡಲಾಗುತ್ತಿತ್ತು. ಆದರೆ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಬಂದ ಮೇಲೆ ಕಳೆದ ಐದು ವರ್ಷಗಳಿಂದ ಅನ್ಯ ರಾಜ್ಯದವರನ್ನ ಕುಲಪತಿಗಳನ್ನಾಗಿ ನೇಮಿಸಲಾಗುತ್ತಿದೆ. ಇದರಿಂದ ವಿಶ್ವವಿಧ್ಯಾಲಯದಲ್ಲಿ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿರುವುದಲ್ಲದೆ ಬಹಳಷ್ಟು ಕನ್ನಡಿಗರಿಗೆ ನೇಮಕಾತಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನ್ಯಾಯವಾಗಿದೆ. ಎಲ್ಲ ಹುದ್ದೆಗಳಲ್ಲಿ ಹೊರ ರಾಜ್ಯದವರನ್ನು ನೇಮಕ ಮಾಡಲಾಗುತ್ತಿದೆ. ವಿವಿ ಹೀಗಾಗಿ ಈ ಭಾರಿಯೂ ಹೊರರಾಜ್ಯದವರನ್ನೆ ಕುಲಪತಿಗಳನ್ನಾಗಿ ನೇಮಿಸೋ ಚಿಂತನೆ ನಡೆದಿದೆ ಎಂದು ತಿಳಿದುಬಂದಿದ್ದು, ಹಾಗೊಂದು ವೇಳೆ ಕೇಂದ್ರ ಸರ್ಕಾರ ಹೊರ ರಾಜ್ಯದವರನ್ನು ಕುಲಪತಿಯಾಗಿ ನೇಮಕ ಮಾಡಿದರೆ ಮತ್ತೊಮ್ಮೆ ಕನ್ನಡಿಗರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಹೀಗಾಗಿ ಯಾರೇ ಆಗಲಿ ಕನ್ನಡಿಗರನ್ನೆ ನೇಮಕ ಮಾಡಿ . ಒಂದು ವೇಳೆ ನೇಮಕ ಮಾಡದೇ ಹೋದರೆ ಕೇಂದ್ರ ಸರ್ಕಾರದ ಕಛೇರಿಗಳಾದ ರೈಲ್ವೆ ನಿಲ್ದಾಣ, ಬಿಜೆಪಿ ಕಛೇರಿಗೆ ಮುತ್ತಿಗೆ ಸೇರಿ ರಾಜ್ಯದ ಎಲ್ಲಾ ಕನ್ನಡಪರ ಸಂಘಟನೆಗಳಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.