ಕಿತ್ತೂರು ಉತ್ಸವದ ಅಂಗವಾಗಿ ಕಿತ್ತೂರ ರಾಣಿ ಚನ್ನಮ್ಮ ಅವರ ವಿಜಯ ಜ್ಯೋತಿ ರಥವು ಧಾರವಾಡ ಹಾರೋಬೆಳವಡಿ ಮಾರ್ಗವಾಗಿ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಆಗಮಿಸಿದಾಗ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಕಿತ್ತೂರು ರಾಣಿ ಚನ್ನಮ್ಮ ವಿಜಯ ಜ್ಯೋತಿ ರಥವನ್ನು ಸ್ವಾಗತಿಸಿ, ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಪ್ರಭಾವತಿ ಪಕೀರಪುರ, ಎಸಿಪಿ ಪ್ರಶಾಂತ ಸಿದ್ದನಗೌಡರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಬಸವರಾಜ್ ಗೋಳಪ್ಪನವರ್, ಬಸವರಾಜ್ ನವಲಗುಂದ್, ಶಿವಶರಣ ಕಲಬ ಶೆಟ್ಟರ್, ವಿಜಯೇಂದ್ರ ಗೌಡ ಪಾಟೀಲ್, ಬಸವರಾಜ್ ಅಜ್ಜಸೂರುಗೊಂಡ, ಗೋಲಣ್ಣವರ್, ಮಡಿವಾಳಪ್ಪ ಸಿರಿಯನ್ನವರ್, ರಾಜಪ್ಪ ಗುಲಾಲ್ ದವರ, ಲಿಂಗರಾಜ್ ಕಮತರ್, ಶಾಲಿಗೌಡ್ರು ಶಿವು ಹತ್ತಿಕಾಳ, ಸುರೇಶ್ ಕಿತ್ತೂರ್, ರಾಜೇಂದ್ರ ಸಾವಳಗಿ, ಬಸವರಾಜ್ ಸೌದತ್ತಿ, ತಿಮ್ಮನ ಗೌಡ್ರ ದೇಸಾಯಿ, ಶ್ರೀರಾಮ ಈರಣ್ಣ ಜೋಗುರ, ಡಾ. ಸಂಗಪ್ಪ ಕೋಟೂರ್, ಪ್ರಕಾಶ್ ಗೌಡ ಹುಚ್ಚನಗೌಡರು ಹಾಗೂ ಸಮಸ್ತ ಚನ್ನಮ್ಮನ ಅಭಿಮಾನಿಗಳು ಇದ್ದರು.