
ಕಲಬುರಗಿ,ಸೆ.18: ನಗರದ ಚಂದ್ರಕಾಂತ ಪಾಟೀಲ ಸ್ಟೇಡಿಯಂ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ ಜಿಲ್ಲಾ ಮಟ್ಟದ ಈಜು ಮತ್ತು ಜೂಡೋ ಕ್ರೀಡಾ ಕೂಟದಲ್ಲಿ ನಗರದ ಎಸ್.ಆರ್.ಎನ್. ಮೆಹತಾ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಈಜು ಕ್ರೀಡಾಕೂಟಕ್ಕೆ ಮತ್ತು ಬಾಗಲಕೋಟೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಜೂಡೋ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
14 ವರ್ಷದ ವಯೋಮಿತಿಯ ಬಾಲಕರ ಈಜು ಕ್ರೀಡಾ ಕೂಟದಲ್ಲಿ
ಪ್ರೇಮಕುಮಾರ ಎಸ್. ಪಿ 200ಮೀ ಎಫ್.ಎಸ್ – ಪ್ರಥಮ ಸ್ಥಾನ, 50ಮೀ ಎಫ್.ಎಸ್ -ದ್ವೀತಿಯ ಸ್ಥಾನ,
17 ವರ್ಷದ ವಯೋಮಿತಿಯ ಬಾಲಕರ ಈಜು ಕ್ರೀಡಾ ಕೂಟದಲ್ಲಿ ಪ್ರೇಮ ಎಸ್. ಕೆ 100ಮೀ ಎಫ್.ಎಸ್ – ಪ್ರಥಮ ಸ್ಥಾನ, 50ಮೀ ಬಿ.ಆರ್- ಪ್ರಥಮ ಸ್ಥಾನ,200ಮೀ ಎಫ್.ಎಸ್ ದ್ವೀತಿಯ ಸ್ಥಾನ
17 ವರ್ಷದ ವಯೋಮಿತಿಯ ಬಾಲಕಿಯರ ಈಜು ಕ್ರೀಡಾ ಕೂಟದಲ್ಲಿ ರಷ್ಮಿ ವಿ.ಬಿ. 100ಮೀ ಫ್ಲೈ – ಪ್ರಥಮ ಸ್ಥಾನ,200ಮೀ ಬಿ.ಆರ್-ಪ್ರಥಮ ಸ್ಥಾನ,100ಮೀ ಎಫ್.ಎಸ್ – ದ್ವಿತಿಯ ಸ್ಥಾನ,
17 ವರ್ಷದ ವಯೋಮಿತಿಯ ಬಾಲಕರ ಜೂಡೋ ಕ್ರೀಡಾ ಕೂಟದಲ್ಲಿ ಸಾಯಿಪ್ರಸಾದ ಎಸ್. -40 ಕೆ.ಜಿ.- ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯ ಟ್ರಸ್ಟಿಗಳಾದ ಚಕೋರ ಮೆಹತಾ, ಪ್ರಾಚಾರ್ಯರಾದ ಪ್ರೀತಿ ಮೆಹತಾ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಬಸವರಾಜ ತಳಕೇರಿ ಹಾಗೂ ಶಿಕ್ಷಕ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.




























