ಕಲಬುರಗಿ:ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಕಲಬುರಗಿ ದಕ್ಷಿಣ ವಲಯದ ವತಿಯಿಂದ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿಂದು ಆಯೋಜಿಸಿದ 2026-27ನೇ ಸಾಲಿನ ಪ್ರಾಥಮಿಕ/ಪ್ರೌಢ ಶಾಲೆಗಳ ಯು-14 ಮತ್ತು ಯು-17 ವರ್ಷ ವಯೋಮಿತಿಯೊಳಗಿನ ಬಾಲಕ/ಬಾಲಕಿಯರ ತಾಲ್ಲೂಕ ಮಟ್ಟದ ಕ್ರೀಡಾಕೂಟವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ, ತಾ.ದ.ಶಿ.ಪರವೀಕ್ಷಕ ಬಸವರಾಜ ರಟಕಲ್, ಮಹೇಶ ಬಸರಕೋಡ, ಬಸವರಾಜ ಹೇರೂರ, ಮಲ್ಲಣ್ಣ ಬಿದನೂರ, ನಿಂಗರಾಜ ಪಾಟೀಲ, ಪರಮೇಶ್ವರ ದೇಸಾಯಿ, ಅಶೋಕ, ಸಿದ್ದಪ್ಪ ಗುತ್ತಾ, ರಾಜು ಜಾಧವ್, ಹಣಮಂತ ಕುಲಕರ್ಣಿ ಇದ್ದರು.