
ಆಳಂದ,ಸೆ.18-ತಾಲೂಕಿನ ಬಂಗರಗಾ ಗ್ರಾಮದ ಚರಂತೇಶ್ವರ ಹಿರೇಮಠದಲ್ಲಿ ಸಂಗೀತ ರಸ ಋಷಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯ ಸ್ಮರಣೋತ್ಸವ ಅಂಗವಾಗ ಸ್ವರ ನಮನ ಕಾರ್ಯಕ್ರಮ ಜರುಗಿತು.
ಪಡಸಾವಳಗಿಯ ಶಂಭುಲಿಂಗ ಶಿವಾಚಾರ್ಯರು, ಅಕ್ಕಲಕೋಟ ವಿರಕ್ತ ಮಠದ ಬಸವಲಿಂಗ ಮಹಾಸ್ವಾಮಿಗಳು, ಹತ್ತಿಕಣಮಸ ವಿರಕ್ತಮಠದ ಪ್ರಭು ಶಾಂತ ಮಹಾಸ್ವಾಮಿಗಳು, ಬಂಗರಗಾ ಮಠದ ವಾಮದೇವ ಶಿವಾನಂದ ಶಿವಾಚಾರ್ಯರು, ಚಲಿಗೇರಿಯ ಶ್ರೀಮಠದ ಶಾಂತವೀರ ಶಿವಾಚಾರ್ಯರ ಸಮ್ಮುಖ ವಹಿಸಿದ್ದರು ನಾಡಿನ ಖ್ಯಾತ ಪುರಾಣ ಪ್ರವಚನಕಾರರು ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಬಂಡಯ್ಯ ಶಾಸ್ತ್ರೀಗಳು ಸುಂಟನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದರಾದ ಅನಿಲ್ ಮಠಪತಿ, ಅಭಿಷೇಕ್ ವಿಶ್ವಕರ್ಮ ಸಂಗೀತ ಸೇವೆ ಸಲ್ಲಿಸಿದರು. ಗ್ರಾಮದ ಅನೇಕ ಭಕ್ತರು ಭಾಗವಹಿಸಿದ್ದರು.




























