
ಸೇಡಂ,ಸೆ.18-ಹಮಾರಾ ಬಂಧನ್ ಇ.ವಿ., ಜರ್ಮನಿ ಹಾಗೂ ಶ್ರೀ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಸೇಡಂ ತಾಲ್ಲೂಕಿನ ತೆಲ್ಕೂರು ಗ್ರಾಮದಲ್ಲಿ ಬುಧವಾರ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಲಾಯಿತು.
ಶಿಬಿರದಲ್ಲಿ ತೆಲ್ಕೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಒಟ್ಟು 157 ಜನರ ಕಣ್ಣುಗಳನ್ನು ತಪಾಸಣೆ ಮಾಡಲಾಯಿತು. ತಪಾಸಣೆಯ ಸಂದರ್ಭದಲ್ಲಿ 36 ಜನರಲ್ಲಿ ಕಣ್ಣಿನ ಪೆÇರೆ (ಕ್ಯಾಟರಾಕ್ಟ್) ಇರುವುದು ಪತ್ತೆಯಾಯಿತು. ಇವರಲ್ಲಿ 13 ಜನರಿಗೆ 16-09-2026 ರಂದು ಮತ್ತು 10 ಜನರಿಗೆ 17-09-2026 ಒಟ್ಟು 23 ಜನರಿಗೆ ಕಲಬುರಗಿಯ ಶ್ರೀ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಕಣ್ಣಿನ ಪೆÇರೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳಿಗೆ ಉಚಿತವಾಗಿ ಹೋಗಿ-ಬರುವ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.
ಶ್ರೀ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥೆ ಡಾ.ರಾಜಶ್ರೀ ರೆಡ್ಡಿ ಸೇರಿದಂತೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.




























