Home ಜಿಲ್ಲೆ ಬೆಂಗಳೂರು ಹೆಬ್ಬಗೋಡಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಕಾರ್ಯಕ್ರಮ

ಹೆಬ್ಬಗೋಡಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಕಾರ್ಯಕ್ರಮ

filter: 0; fileterIntensity: 0.0; filterMask: 0; captureOrientation: 0; runfunc: 0; algolist: 0; multi-frame: 1; brp_mask:8; brp_del_th:0.0045,0.0002; brp_del_sen:0.1000,0.1000; motionR: 65537; delta:1; bokeh:1; module: photo;hw-remosaic: false;touch: (-1.0, -1.0);sceneMode: 2621440;cct_value: 0;AI_Scene: (-1, -1);aec_lux: 269.52548;aec_lux_index: 0;albedo: ;confidence: ;motionLevel: 65537;weatherinfo: weather?null, icon:null, weatherInfo:100;temperature: 35;zeissColor: bright;

ಆನೇಕಲ್.ಸೆ.೬-ಸ್ವಂದನಾ ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷೆ ಹೆಬ್ಬಗೋಡಿ ಡಾ.ಮಂಜುಳ ಮನೆ ಅಂಗಳದಲ್ಲಿ ಆಯೋಜಿಸಲಾಗಿದ್ದ ವರ ಮಹಾಲಷ್ಮೀ ಹಬ್ಬ ಹಾಗೂ ಶ್ರೀ ಕೃಷ್ಣ ಜನ್ಮಾಷ್ಠಮಿಯ ಕಾರ್ಯಕ್ರಮ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಪೂಜಾ ಕಾರ್ಯಕ್ರಮ ಸಡಗರ ಸಂಭ್ರಮದಿಂದ ನೆರವೇರಿತು.


ವರ ಮಹಾಲಷ್ಮೀ ಹಬ್ಬ ಹಾಗೂ ಶ್ರೀ ಕೃಷ್ಣ ಜನ್ಮಾಷ್ಠಮಿಯ ಕಾರ್ಯಕ್ರಮದಲ್ಲಿ ಹಿಂದೂ. ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದ ಮಹಿಳೆಯರು ಒಂದೆಡೆ ಸೇರಿ ಕಾರ್ಯಕ್ರಮವನ್ನು ಆಚರಿಸಿದ್ದು ಬಹಳ ವಿಶೇಷವಾಗಿತ್ತು.ಅಲ್ಲದೆ, ಮಹಿಳೆಯರಿಗೆ ಹೆಬ್ಬಗೋಡಿ ಮಂಜುಳಾ ಬಾಗಿನ ಅರ್ಪಣೆ ಮಾಡಿದರು ಹಾಗೆಯೇ ೧೦೧ ಗಣಪತಿ ಮೂರ್ತಿಗಳನ್ನು ಉಚಿತವಾಗಿ ವಿತರಣೆ ಮಾಡಿದ ದೃಶ್ಯ ಕಂಡು ಬಂತು.


ಹೆಬ್ಬಗೋಡಿ ಮಂಜುಳಾ ಸಮಾಜ ಸೇವೆಯನ್ನು ಗುರ್ತಿಸಿ ಯೂನೈಟೆಡ್ ಅಮೇರಿಕನ್ ಯೂನಿವರ್ ಸಿಟಿಯು ಇತ್ತೀಚೆಗೆ ಗೌರವ ಡಾಕ್ಟರ್ ನೀಡಿ ಗೌರವಿಸಿದ್ದು ಇಂದು ಅಭಿಮಾನಿಗಳು ಮತ್ತು ಮಹಿಳೆಯರು ಹೆಬ್ಬಗೋಡಿ ಮಂಜುಳ ರವರಿಗೆ ಹೂವಿನ ಸುರಿಮಳೆಯನ್ನು ಸುರಿದು ಅಭಿನಂದನೆ ಸಲ್ಲಿಸಿದರು.


ಕಾರ್ಯಕ್ರಮದಲ್ಲಿ ಸ್ವಂದನಾ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಂ.ಎಪ್. ಶಾಮು. ಡಾ|| ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಬೊಮ್ಮಸಂದ್ರ ರೇಣುಕಾ. ಮಹಿಳಾ ಮುಖಂಡರಾದ ಅನುಪಮ. ಸರ್ವಮಂಗಲ. ಪ್ರೇಮ. ಗೌರಮ್ಮ ಮೊದಲಾದವರು ಭಾಗವಹಿಸಿದ್ದರು.