
ಕಲಬುರಗಿ,ಸೆ.4-ನಗರದ ಜಿಮ್ಸ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞರ ಕೊಠಡಿಯಲ್ಲಿ. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಓಪಿಡಿ ಸರ್ಜನ್ ಡಾ.ಶಾಲನಿ ಸಜ್ಜನಶೆಟ್ಟಿ ಅವರು ಶ್ರೀಕೃಷ್ಣನ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ವೈದ್ಯಾಧಿಕಾರಿಗಳಾದ ಡಾ.ಜಯಮ್ಮ ಎಸ್ ಗಣಜಲಖೇಡ್, ಡಾ.ಪ್ರತಿಭಾ, ಕಚೇರಿ ಸಹಾಯಕ ಆಡಳಿತ ಅಧಿಕಾರಿ ಅಂಬಾರಾಯ ಸಂಕಾ, ಎಚ್‍ಫ್‍ಡಬ್ಲ್ಯೂ ಸಿಬ್ಬಂದಿ ಇಮ್ತಿಯಾಜ್ ಅಲಿ, ಎಫ್‍ಡಿಎ ಕಾವ್ಯ ಹನಚೇಟಕಿ, ಎನ್‍ಎಚ್‍ಎಂ ಲೆಕ್ಕಪರಿಶೋಧಕ ಸಿದ್ದಪ್ಪ ಹಾಲಪ್ಪನೂರ, ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಮಲ್ಲಪ್ಪ ಬುಕ್ಕಾ, ಸರಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ರಾಚಣ್ಣ ಬಿಸಿಗೊಂಡ, ಅವಿನಾಶ್ ಪಾಟೀಲ, ಶರಣು, ಪಾರ್ವತಿ ಭೀಮರಾವ್, ಪೃಥ್ವಿ ಹಾಗೂ ಇತರ ಅರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.






























