Home ಜಿಲ್ಲೆ ಕಲಬುರಗಿ ಮಣೂರ ಆಸ್ಪತ್ರೆಯ “ದ ವೆಲ್ ನೇಸ್ ರೆವೂಲೇಷನ್ “ಮ್ಯಾಗಝೀನ್ ಲೋಕಾರ್ಪಣೆ

ಮಣೂರ ಆಸ್ಪತ್ರೆಯ “ದ ವೆಲ್ ನೇಸ್ ರೆವೂಲೇಷನ್ “ಮ್ಯಾಗಝೀನ್ ಲೋಕಾರ್ಪಣೆ

ಕಲಬುರಗಿ,ಸೆ 4: ನಗರದ ಪ್ರತಿಷ್ಠಿತ ಮಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ವತಿಯಿಂದ ಕಲ್ಯಾಣ ಕರ್ನಾಟಕದ ಭಾಗದ ಜನರಿಗೆ ಆರೋಗ್ಯ, ಕ್ಷೇಮ, ಯೋಗ, ಸದೃಢತೆಯ ಬಗ್ಗೆ ಜಾಗೃತಿಗಾಗಿ “ದ ವೆಲ್ ನೇಸ್ ರೆವೂಲೇಷನ” ಎಂಬ ಆರೋಗ್ಯ ಕುರಿತು ಕಲ್ಯಾಣ ಕರ್ನಾಟಕ ಭಾಗದ ಪ್ರಪ್ರಥಮ ಮ್ಯಾಗಝೀನ್ ನ 5 ನೇ ಸಂಚಿಕೆಯನ್ನು ಮಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಲೋಕಾರ್ಪಣೆ ಮಾಡಿದರು.
ಕಲಬುರಗಿ ನಗರದ ಮಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಲೋಕಾರ್ಪಣೆ ಗೊಳಿಸಿ “ದ ವೆಲ್ ನೇಸ್ ರೆವೂಲೇಷನ ಮ್ಯಾಗಝೀನ್ ಅನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಓದುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.


ಕಲ್ಯಾಣ ಕರ್ನಾಟಕದ ಜನರಿಗೆ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಮಣೂರ ಆಸ್ಪತ್ರೆಯ ತಂಡ ಕಳೆದ 5 ವರ್ಷದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ, ಟ್ರಾಮಾ ಡೇ ಕುರಿತು ಜಾಗೃತಿ ಸೇರಿದಂತೆ ಅನೇಕ ಆರೋಗ್ಯದ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬಂದಿದೆವೆ. ಜೊತೆಗೆ ಜನರಿಗೆ ಇನ್ನೂ ಜಾಗೃತಿಗಾಗಿ ಆರೋಗ್ಯ ,ಕ್ಷೇಮ,ಯೋಗ, ಸದೃಢತೆಯ ಬಗ್ಗೆ ಜಾಗೃತಿಯ ಕುರಿತು ‘ದ ವೆಲ್ ನೇಸ್ ರೆವೂಲೇಷನ ‘ ಎಂಬ ಆರೋಗ್ಯ ಮತ್ತು ಕ್ಷೇಮದ ಕುರಿತು ಕಲ್ಯಾಣ ಕರ್ನಾಟಕ ಭಾಗದ ಪ್ರಪ್ರಥಮ ಮ್ಯಾಗಝೀನ್ 5 ನೇ ಸಂಚಿಕೆಯನ್ನು ಲೋಕಾರ್ಪಣೆ ಕಲ್ಯಾಣ ಕರ್ನಾಟಕ ಭಾಗದ ಪ್ರತಿ ತಾಲೂಕಿನಲ್ಲಿ ಉಚಿತ ವಾಗಿ ವಿತರಣೆ ಮಾಡಲಾಗುತ್ತಿದೆ.
-ಡಾ. ಫಾರುಕ್ ಅಹ್ಮದ ಮಣೂರ
ಮುಖ್ಯಸ್ಥರು ಮಣೂರ ಅಸ್ಪತ್ರೆ ಕಲಬುರಗಿ