Home ಸುದ್ದಿ ರಾಷ್ಟ್ರೀಯ ಕೃಷ್ಣ ಜನ್ಮಾಷ್ಟಮಿ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರ ಶುಭಾಶಯ

ಕೃಷ್ಣ ಜನ್ಮಾಷ್ಟಮಿ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರ ಶುಭಾಶಯ

ನವದೆಹಲಿ,ಸೆ.೪– ಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಪ್ರಮುಖ ನಾಯಕರು ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ’ಏಕ್ಸ್’ ನಲ್ಲಿ ಪೋಸ್ಟ್ ಮಾಡಿ, “ಭಗವಾನ್ ಶ್ರೀಕೃಷ್ಣನ ದಿವ್ಯ ಸಂದೇಶಗಳಲ್ಲಿ ನಿಷ್ಕಾಮ ಕರ್ಮದ (ಫಲಾಪೇಕ್ಷೆಯಿಲ್ಲದ ಕರ್ತವ್ಯ) ಪ್ರೇರಣೆಯಿದೆ. ಇದು ಮಾನವಕುಲಕ್ಕೆ ಸದಾ ದಾರಿದೀಪವಾಗಿದೆ. ಭಕ್ತಿ ಮತ್ತು ಆರಾಧನೆಗೆ ಸಮರ್ಪಿತವಾದ ಈ ಪವಿತ್ರ ಹಬ್ಬವು ಎಲ್ಲರ ಜೀವನದಲ್ಲೂ ಧನಾತ್ಮಕ ಶಕ್ತಿ ಮತ್ತು ಶಕ್ತಿಯನ್ನು ತುಂಬಲಿ” ಎಂದು ಹಾರೈಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಸಂದೇಶದಲ್ಲಿ, “ಭಗವಾನ್ ಶ್ರೀಕೃಷ್ಣನ ಜೀವನ ಮತ್ತು ಬೋಧನೆಗಳು ಭಾರತೀಯ ಸಂಸ್ಕೃತಿ ಮತ್ತು ತತ್ತ್ವಶಾಸ್ತ್ರಕ್ಕೆ ಹೊಸ ಚೈತನ್ಯವನ್ನು ತುಂಬುತ್ತವೆ. ಅವರು ಸತ್ಯ, ಧರ್ಮ, ನ್ಯಾಯ ಮತ್ತು ಕರುಣೆಯ ಹಾದಿಯನ್ನು ತೋರಿಸಿದ್ದಾರೆ. ಕೃಷ್ಣನ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಗ್ರ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಾವೆಲ್ಲರೂ ಸಂಕಲ್ಪ ಮಾಡೋಣ” ಎಂದು ಕರೆ ನೀಡಿದ್ದಾರೆ.

ಇತರ ಗಣ್ಯರ ಶುಭಾಶಯಗಳು:
ಕೇಂದ್ರ ಗೃಹ ಸಚಿವ ಸಮಿತ್ ಶಾ ಭಗವಾನ್ ಕೃಷ್ಣನನ್ನು ಧರ್ಮ, ನೀತಿ ಮತ್ತು ಸಾರ್ವಜನಿಕ ಕಲ್ಯಾಣದ ಸಾಕಾರ ರೂಪ ಎಂದು ಬಣ್ಣಿಸಿರುವ ಅವರು, ದೇಶವಾಸಿಗಳಿಗೆ ಜನ್ಮಾಷ್ಟಮಿಯ ಶುಭಾಶಯ ಕೋರಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನದಲ್ಲೂ ಸುಖ.ಶಾಂತಿ ಸಮೃದ್ದಿ ಮತ್ತು ಇಳಿತನ್ನು ತರಲಿ ಎಂದು ಆಶಿಸಿದ್ದಾರೆ.