ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಕ್ತಿ ಮಂದಿರಕ್ಕೆ ಹೋಗುವ ಪೂರ್ವದಲ್ಲಿ ಉಮಾ ವಿದ್ಯಾಲಯದ ಮೈದಾನದಲ್ಲಿ ಹೆಲಿಪ್ಯಾಡಿನಲ್ಲಿ ಸಾರ್ವಜನಿಕರಿಂದ ಆಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಟಾಕಪ್ಪ ಸಾತಪೂತೆ ಅವರ ನೇತೃತ್ವದಲ್ಲಿ ರೈತರು ಬರಪೀಡಿತ ಪ್ರದೇಶ ಎಂದು ಸಾರಲು ಮನವಿ ಸಲ್ಲಿಸಿದರು.