Home ಜಿಲ್ಲೆ ಸಡಗರದಿಂದ ಆರಂಭಗೊAಡ ಶ್ರೀ ಕಿನ್ನರಿ ಬೊಮ್ಮೇಶ್ವರ ಜಾತ್ರಾ ಮಹೋತ್ಸವ

ಸಡಗರದಿಂದ ಆರಂಭಗೊAಡ ಶ್ರೀ ಕಿನ್ನರಿ ಬೊಮ್ಮೇಶ್ವರ ಜಾತ್ರಾ ಮಹೋತ್ಸವ

ಸಂಜೆವಾಣಿ ವಾರ್ತ
ಹುಮ್ನಾಬಾದ್: ಸನಾತನ ಧರ್ಮ ಕಾಪಾಡೋದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಆಂದೋಲನ ಶ್ರೀಗಳು ೫೭ನೇ ಜಾತ್ರಾ ಮಹೋತ್ಸವ ಉದ್ಘಾಟಿಸಿ. ಮಾತನಾಡುತ್ತಾ ಕರೆ ನೀಡಿದರು.
ಮಕ್ಕಳಿಗೆ ದೇಶದ ಕಲೆ ಸಂಸ್ಕೃತಿ ಕಲಿಸುವುದು ನಮ್ಮ ನಿಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದರು.
ಶಾಸಕ ಸಿದ್ದು ಪಾಟೀಲ್‌ಮಾತನಾಡಿ ಶರಣ ಕಿನ್ನರಿ ಬೊಮ್ಮಯ್ಯನವರ ಮಹಿಮೆ ಅಪಾರವಾಗಿದೆ. ಗ್ರಾಮದ ಬಸವ ಮಂಟಪ ನಿರ್ಮಾಣಕ್ಕೂ ಕೂಡ ಅನುದಾನ ನೀಡಲಾಗಿದೆ ಎಂದರು. ಗ್ರಾಮದ ರಸ್ತೆಗಳ ಅಭಿವೃದ್ಧಿ ಕೂಡ ಆದ್ಯತೆ ನೀಡಿದ್ದೇನೆ ಎಂದು ತಿಳಿಸಿದರು.
ಹುಮನಾಬಾದ್ ಪಟ್ಟಣದಲ್ಲಿ ಕೂಡ ಅವಿದ್ಯ ಮಾದರಿಯಲ್ಲಿ ರಾಮನ ಮಂದಿರ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು. ರಾಜ್ಯಪಕ ಈಶ್ವರ್ಯ ಕೊಡಂಬಲ್ ಶರಣ ಕಿನ್ನರಿ ಬೊಮ್ಮಯ್ಯನವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.