Home ಜಿಲ್ಲೆ ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವ

ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವ

ಸತ್ತೂರ, ಆ೪: ಶ್ರೀ ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೆöÊತ ವೇದಾಂತವನ್ನು ತರ್ಕಬದ್ಧವಾಗಿ, ಸುಲಭವಾಗಿ ಹಾಗೂ ಪ್ರಾಮಾಣಿಕವಾಗಿ ಜಗತ್ತಿಗೆ ಪರಿಚಯಿಸಿದ ಮಹಾಮಹೋಪಾಧ್ಯಾಯರಲ್ಲಿ ಅಗ್ರಗಣ್ಯರು ಶ್ರೀ ಜಯತೀರ್ಥರು. ತಮ್ಮ ಅಸಾಧಾರಣ ವ್ಯಾಖ್ಯಾನ ಗ್ರಂಥಗಳಿAದ “ಟೀಕಾಚಾರ್ಯರು” ಎಂಬ ಬಿರುದನ್ನು ಪಡೆದ ಅವರು ಮಾಧ್ವ ಸಂಪ್ರದಾಯದ ಶ್ರೇಷ್ಠ ಆಚಾರ್ಯರಲ್ಲಿ ಒಬ್ಬರಾಗಿದ್ದಾರೆ. ಅವರ ಗ್ರಂಥಗಳ ಅಧ್ಯಯನವಿಲ್ಲದೆ ದ್ವೆöÊತ ವೇದಾಂತದ ಆಳವನ್ನು ಅರಿಯುವುದು ಕಷ್ಟವೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ ಎಂದು ಡಾ. ಪಂ. ಭೀಮಸೇನ ಆಚಾರ್ಯ ಮಳಗಿಯವರು ತಿಳಿಸಿದರು.

ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಶ್ರೀನಿವಾಸ ಪಟ್ಟಣಕೋಡಿ ಅವರ ನಿವಾಸದಲ್ಲಿ ಜರುಗಿದ ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶ್ರೀ ಜಯತೀರ್ಥರು ಕ್ರಿ.ಶ. ೧೪ನೇ ಶತಮಾನದಲ್ಲಿ ಮಹಾರಾಷ್ಟçದ ಮಂಗಳವೇಢೆ ಪ್ರದೇಶದಲ್ಲಿ ಜನಿಸಿದರು. ಬಾಲ್ಯದಿಂದಲೇ ಅವರು ಅಪೂರ್ವ ಬುದ್ಧಿಶಕ್ತಿ, ಧೈರ್ಯ ಮತ್ತು ವೈರಾಗ್ಯವನ್ನು ಹೊಂದಿದ್ದರು.

ಶ್ರೀ ಜಯತೀರ್ಥರು ಸುಮಾರು ೨೨ಕ್ಕೂ ಹೆಚ್ಚು ಮಹಾಗ್ರಂಥಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು: ನ್ಯಾಯಸುಧಾ, ತತ್ತ÷್ವಪ್ರಕಾಶಿಕಾ, ಪ್ರಮೇಯದೀಪಿಕಾ, ತತ್ತ÷್ವಸಂಖ್ಯಾನ ಟೀಕೆ, ವಿಷ್ಣುತತ್ತ÷್ವವಿನಿರ್ಣಯ ಟೀಕೆ, ಉಪಾಧಿಖಂಡನ, ಮಾಯಾವಾದಖಂಡನ. ಇವುಗಳಲ್ಲಿ ನ್ಯಾಯಸುಧಾ ದ್ವೆöÊತ ವೇದಾಂತದ ಅತ್ಯಂತ ಶ್ರೇಷ್ಠ ವ್ಯಾಖ್ಯಾನ ಗ್ರಂಥವೆAದು ಪರಿಗಣಿಸಲ್ಪಡುತ್ತದೆ.

ಕಾರ್ಯಕ್ರಮದ ಪೂರ್ವದಲ್ಲಿ ಬಳಗದ ಸದಸ್ಯರಿಂದ ಶ್ರೀ ಹರಿ ವಾಯು ಗುರುಗಳ ಸ್ತೋತ್ರಗಳ ಪಾರಾಯಣ ಜರುಗಿತು. ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಡಾ, ರವಿ ಧುಮ್ಮವಾಡ, ಡಾ. ಶ್ರೀನಾಥ, ಹನುಮಂತ ಪುರಾಣಿಕ, ಪಾಂಡುರAಗ ಕುಲಕರ್ಣಿ, ಆನಂದ ದೇಶಪಾಂಡೆ, ಕೇಶವ ಕುಲಕರ್ಣಿ, ಸಂಜೀವ ಗೊಳಸಂಗಿ, ಗಿರೀಶ್ ಶಿರೋಳ, ವಿಠಲ ಅಂಬೇಕರ, ಉದಯ ದೇಶಪಾಂಡೆ, ಎಲ್.ವಿ.ಜೋಶಿ, ಭೀಮಸೇನ್ ದಿಗ್ಗಾವಿ, ರಾಘವೇಂದ್ರ ಮುಂಡಗೋಡ, ರಂಗನಾಥ ಕಟ್ಟಿ, ರಮೇಶ್ ಅಣ್ಣಿಗೇರಿ, ಗಿರೀಶ್ ಪಾಟೀಲ್, ಬದರಿನಾಥ ಬೆಟಗೇರಿ, ಎಸ್.ಎಂ.ಜೋಶಿ ಉಪಸ್ಥಿತರಿದ್ದರು.