Home ಜಿಲ್ಲೆ ಕಲಬುರಗಿ ಶ್ರೀಚಂದ ಪ್ರೌಢಶಾಲೆ ಮಕ್ಕಳ ಕ್ರೀಡಾ ಸಾಧನೆ, ತಾಲೂಕು ಮಟ್ಟಕ್ಕೆ ಆಯ್ಕೆ

ಶ್ರೀಚಂದ ಪ್ರೌಢಶಾಲೆ ಮಕ್ಕಳ ಕ್ರೀಡಾ ಸಾಧನೆ, ತಾಲೂಕು ಮಟ್ಟಕ್ಕೆ ಆಯ್ಕೆ

ಆಳಂದ: ಎಲೆ ಮರೆ ಕಾಯಿಯಂತೆ ಪ್ರಚಾರದಿಂದ ದೂರವಾಗಿ ಉಳಿದಿದ್ದ ಸರ್ಕಾರಿ ಪ್ರೌಢಶಾಲೆ ಶ್ರೀಚಂದ ಶಾಲೆಯ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ-೨೦೨೬-೨೭ನೇ ಸಾಲಿನ ನರೋಣಾ ವಲಯ ಮಟ್ಟದ ಕ್ರೀಡಾಕೂಟದ ಸ್ಪಂರ್ಧೆಯಲ್ಲಿ ವಿವಿಧ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ದೈಹಿಕ ಶಿಕ್ಷಣದ ಶಿಕ್ಷಕ ಶ್ರೀಶೈಲ ದೇವರಾಯ ಅವರು ತಿಳಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ನರೋಣಾ ವಲಯಮಟ್ಟದ ಕ್ರೀಡಾಕೂಟದಲ್ಲಿ ೧೪ ವರ್ಷದೊಳಗಿನ ಶ್ರೀಚಂದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಬಾಲಕಿಯರ ಹಾಗೂ ಬಾಲಕರ ಕಬ್ಬಡಿಯಲ್ಲಿ ಪ್ರಥಮ, ಅಲ್ಲದೇ ಬಾಲಕ ಹಾಗೂ ಬಾಲಕಿಯರ ಥ್ರೋಬಾಲ್‌ನಲ್ಲೂ ಎರಡೂ ತಂಡಗಳು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಜೊತೆಯಲ್ಲಿ ಓಟ ಸ್ಪರ್ಧೆಯಲ್ಲಿ ೨೦೦ ಮೀಟರ್ ಓಟದಲ್ಲೂ ಚೈತ್ರಾ ವಿದ್ಯಾರ್ಥಿನಿ ಪ್ರಥಮ ಪಡೆದರೆ, ಅಂಬಿಕಾ ವಿದ್ಯಾರ್ಥಿನಿಯು ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೆ, ಈ ೪೦೦ ಮೀಟರ್, ೬೦೦ ಮೀಟರ್ ಓಟದಲ್ಲಿ ಇನ್ನಿತರ ವಿದ್ಯಾರ್ಥಿಗಳು ಸಹ ದ್ವೀತಿಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಸಲ್ಲದೆ, ೧೭ ವರ್ಷದೊಳಗಿನ ಕ್ರೀಡೆಯಲ್ಲಿ ಈ ಶಾಲೆಯ ಬಾಲಕಿಯರ ಹಾಗೂ ಬಾಲಕರು ಎರಡೂ ತಂಡವು ಕಬ್ಬಡಿಯಲ್ಲೂ ಪ್ರಥಮ ಹಾಗೂ ಬಾಲಕರ ಥ್ರೋಬಾಲನಲ್ಲಿ ಪ್ರಥಮಸ್ಥಾನ ಮತ್ತು ೪೪೦೦ಮೀಟರ್ ಬಾಲಕರ ರೀಲೆಯಲ್ಲಿ ಪ್ರಥಮ, ೪೧೦೦ಮೀಟರ್ ರಿಲೆಯಲ್ಲೂ ಬಾಲಕಿಯರ ದ್ವೀತಿಯ ಸ್ಥಾನ, ೧೦೦ ಮೀಟರ್ ಓಟದಲ್ಲಿ ಶ್ರೀಕಾತ ಹಾಗೂ ದಿವ್ಯಾ ದ್ವತೀಯ ಸ್ಥಾನ, ೪೦೦ ಮೀಟರ್ ಓಟದಲ್ಲಿ ಸೃಷ್ಟಿ ದ್ವೀತಿಯಸ್ಥಾನ ೩ ಸಾವಿರ ಮೀಟರ್ ಓಟದಲ್ಲಿ ದಿವ್ಯಾ ವಿದ್ಯಾರ್ಥಿನಿ ಪ್ರಥಮ ಹಾಗೂ ಜಾವೇಲಿನ್ ಎಸೇತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಕ್ರೀಡಾಂಗಣದಲ್ಲಿ ಕ್ರೀಡಾ ಸಾಧನೆಗೆ ಸಂಭ್ರಮಿಸಿದರು, ದೈಹಿಕ ಶಿಕ್ಷಣದ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ಪ್ರಾಥಮಿಕ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹಾದೇವ ಗುಣಕಿ, ಪ್ರೌಢಶಾಲೆ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದತ್ತು ಬಡಿಗೇರ, ಶಿಕ್ಷಕ ಶರಣಬಸಪ್ಪ ವಡಗಾಂವ ಅವರು ಪ್ರಮಾಣ ಪತ್ರ ನೀಡಿ ಗೌರವಿಸಿದರು.
ವಿದ್ಯಾರ್ಥಿಗಳ ಸಾಧನೆಗೆ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಅನಿಲಕುಮಾರ ಮೇತ್ರೆ, ಮುಖ್ಯ ಶಿಕ್ಷಕಿ ಸುನಿತಾ ಸಂಗಪ್ಪ ಲೋಣಿ, ದೈಹಿಕ ಶಿಕ್ಷಣ ಶಿಕ್ಷಕ ಶ್ರೀಶೈಲ ದೇವರಾಯ ಸೇರಿ ಶಾಲಾ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹರ್ಷವ್ಯಕ್ತಪಡಿಸಿ ಹೆಚ್ಚಿನ ಸಾಧನೆಗೆ ಶುಭಕೋರಿದ್ದಾರೆ.