Home ಜಿಲ್ಲೆ ಲೋಕಕಲ್ಯಾಣಕ್ಕಾಗಿ ಹಿಂದೂ ಮಹಾಗಣಪತಿಗೆ ವಿಶೇಷ ಪೂಜೆ

ಲೋಕಕಲ್ಯಾಣಕ್ಕಾಗಿ ಹಿಂದೂ ಮಹಾಗಣಪತಿಗೆ ವಿಶೇಷ ಪೂಜೆ

ಯಾದಗಿರಿ: ಪ್ರಸ್ತುತ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬೆಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಸಂಕಷ್ಟಗಳು ನಿವಾರಣೆಯಾಗಲಿ, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬಂದು ರೈತರು ಸುಖ-ಸಮೃದ್ಧಿಯಿಂದ ಜೀವನ ನಡೆಸುವಂತಾಗಲಿ ಎಂಬ ಆಶಯದೊಂದಿಗೆ ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ್ ಅವರು ನಗರದ ಹಿಂದೂ ಮಹಾಗಣಪತಿಗೆ ಶುಕ್ರವಾರ ವಿಶೇಷ ಪೂಜೆ ಹಾಗೂ ಮಹಾ ಪೂಜೆ ನೆರವೇರಿಸಿದರು.
ಲೋಕಕಲ್ಯಾಣ, ರೈತರ ಒಳಿತಿಗಾಗಿ ಹಾಗೂ ಜಿಲ್ಲೆಯಲ್ಲಿ ಉತ್ತಮ ಮಳೆ-ಬೆಳೆಗಾಗಿ ಗಣಪತಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಭೀಮನಗೌಡ ಕ್ಯಾತನಾಳ, ಶರಣಗೌಡ, ಸಿದ್ದಪ್ಪಗೌಡ ನಾಯ್ಕಲ್, ಇಂಜಿನಿಯರ್‌ಗಳಾದ ವಿಶ್ವನಾಥ್ ರೆಡ್ಡಿ ನಾಯ್ಕಲ್, ಹೇಮಂತ್, ಶರಣಗೌಡ ಕಾಳಬೆಳಗುಂದಿ, ಸುರೇಶ್ ರಾಠೋಡ್, ಹಣಮಂತ ಇಟಗಿ, ಅನಿಲ್ ಕರಾಟೆ, ಶಿವರಾಜ್ ದಾಸನಕೇರಿ, ಶಿವು ಕೋಟಿಮನಿ, ವಿಶ್ವನಾಥ್ ಕಾಚಗಾರ್, ಶಾಂತಗೌಡ ಪಗಲಾಪುರ, ಮಲ್ಲಿಕಾರ್ಜುನ ಜಲ್ಲಪ್ಪನೋರ್, ಚಂದಪ್ಪ ರಾಮಸಮುದ್ರ, ಚಂದ್ರಶೇಖರ್ ಕಡೆಸೂರ್, ಭೀಮಣ್ಣ ಮಾಸ್ಕನಳ್ಳಿ ಸೇರಿದಂತೆ ಬಿಜೆಪಿ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.