
ಗುರುಮಠಕಲ್: ಪತಂಜಲಿ ಯೋಗ ಸಮಿತಿ ಯಾದಗಿರಿ ಜಿಲ್ಲಾ ವತಿಯಿಂದ, ಇಂದು ರವಿವಾರ ಗುರುಮಠಕಲ್ ನಲ್ಲಿ ಹರಿದ್ವಾರಕ್ಕೆ ಮುಖ್ಯ ಯೋಗ ಶಿಕ್ಷಕರ ತರಬೇತಿ ಪಡೆದಿರುವ ಶಿಕ್ಷಕರಿಗೆ ವಿಶೇಷವಾಗಿ ಸನ್ಮಾನವನ್ನು ನೀಡಿ ಅಭಿನಂದಿಸಲಾಯಿತು. ಹಾಗೂ ಹರಿದ್ವಾರಕ್ಕೆ ಮುಖ್ಯ ಯೋಗ ಶಿಕ್ಷಕರ ತರಬೇತಿಗೆ ಆನಂದ್ ಬೂದಿ, ದೇವಾನಂದ ಬೋಡಿಕೆ ಚಂಡರಕಿ, ವಿಜಯ್ ಪತಂಗೆ, ಚಂದ್ರಶೇಖರ್ ಪೋಬ್ಬತಿ. ಈ ನಾಲ್ಕು ಯೋಗ ಸಾಧಕರಿಗೆ ಪತಂಜಲಿ ಯೋಗ ಸಮಿತಿ ಯಾದಗಿರಿ ಜಿಲ್ಲೆಯ ಜಿಲ್ಲಾಧ್ಯಕ್ಷರು ಸಂತೋಷ್ ಕುಮಾರ್ ನವದಿ ಯವರು ವಿಶೇಷ ಸನ್ಮಾನವನ್ನು ಮಾಡಿ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು ಹಾಗೂ ಚಂಡರಕಿ ಗ್ರಾಮದಿಂದ ಮೂರು ಜನ ಯೋಗ ಶಿಕ್ಷಕರಾದ ದೇವಾನಂದ ಬೋಡಿಕೆ ಚಂಡರಕಿ, ಪತಂಜಲಿ ಯೋಗ ಸಮಿತಿ ಪ್ರಭರಿ ಹಾಗೂ ಯುವ ಭಾರತ್ ಪ್ರಭಾರಿ ವಿಜಯ್ ಪತಂಗೆ ಹಾಗೂ ಚಂದ್ರಶೇಖರ್ ಪೋಬತಿಯವರಿಗೆ ಭಾರತ ಸ್ವಾಭಿಮಾನ ದ ಪ್ರಭಾರಿ ಗಳಾಗಿ ನೇಮಿಸಿದರು. ಈವೇಳೆ ಪತಂಜಲಿ ಯೋಗ ಸಮೀತಿ ತಾಲೂಕು ಅಧ್ಯಕ್ಷರು ಎಲ್ಲಾ ಸಂಘಟನೆಯ ಸಮಿತಿಯ ಸದಸ್ಯರು ಹಾಗೂ ಯೋಗ ಸಾಧಕರು ಉಪಸ್ಥಿತರಿದ್ದರು.






















