Home ಜಿಲ್ಲೆ ಕಲಬುರಗಿ ಶಿವಪ್ರಸಾದ ಎಸ್.ಬನ್ನಟ್ಟಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಶಿವಪ್ರಸಾದ ಎಸ್.ಬನ್ನಟ್ಟಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಕಲಬುರಗಿ,ಜು.17-ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಧನಸಹಾಯ ಅಡಿಯಲ್ಲಿ ಸೇಡಂನ ಯುವ ಚಿತ್ರಕಲಾವಿದ ಶಿವಪ್ರಸಾದ ಎಸ್. ಬನ್ನಟ್ಟಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಜು.18 ರಿಂದ 22 ರವರೆಗೆ ನಗರದ ರಾಮ ಮಂದಿರ ಹಿಂದುಗಡೆ ಇರುವ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಚಿತ್ರಕಲಾ ಪ್ರದರ್ಶನವನ್ನು ದಿನಾಂಕ 18-07-2026 ರಂದು ಸಂಜೆ 5:00 ಗಂಟೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾದ ಬಸವರಾಜ ಎಲ್. ಜಾನೆ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಲಬುರಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಬಾಲರಾಜ್ ಗುತ್ತೇದಾರ್, ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪನಿರ್ದೇಶಕರಾದ ಜಗದೀಶ್ವರಿ ಅ.ನಾಸಿ ಮತ್ತು ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಡಾ. ಪರಶುರಾಮ ಪಿ. ಅವರು ಪಾಲ್ಗೊಳ್ಳಲಿದ್ದಾರೆ.
ಶಿವಪ್ರಸಾದ ಅವರು ವಿವಿಧ ಮಾಧ್ಯಮದಲ್ಲಿ ರಚಿಸಿದ ಸುಮಾರು 15ಕ್ಕೂ ಹೆಚ್ಚು ಚಿತ್ರ ಕಲಾಕೃತಿಗಳು ಪ್ರದರ್ಶನ ಗೊಳ್ಳಲಿವೆ, ಶಿವಪ್ರಸಾದ ಅವರು ಪ್ರದರ್ಶಿಸುತ್ತಿರುವ ಚಿತ್ರಕಲಾ ಕೃತಿಗಳಲ್ಲಿ ಯುವ ಮನಸ್ಸುಗಳ ಆಲೋಚನೆ, ಪ್ರಸ್ತುತ ಸಂದರ್ಭದಲ್ಲಿ ಸಮಾಜದಲ್ಲಿ ಜರುಗುತ್ತಿರುವ ಘಟನೆಗಳು ಹೀಗೆ ಹಲವಾರು ವಸ್ತು-ವಿಷಯಗಳು ಒಳಗೊಂಡಿದೆ.
ಹೈದರಾಬಾದ್, ಸೋಲಾಪುರ್, ಬೆಂಗಳೂರು, ಗದಗ, ರಾಮನಗರ, ಕಲಬುರಗಿ ಸೇರಿದಂತೆ 10ಕ್ಕೂ ಹೆಚ್ಚು ಚಿತ್ರ-ಶಿಲ್ಪಕಲಾ ಶಿಬಿರ ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.
ದೃಶ್ಯ ಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶಿವಪ್ರಸಾದ ಅವರು ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ, ಬಾಂಬೆ ಆರ್ಟ್ ಸೊಸೈಟಿಯ ಪ್ರಶಸ್ತಿ, ಪುಣೆಯ ಲೋಕಮಾನ ತಿಲಕ ಪ್ರಶಸ್ತಿ, ಪ್ರಫುಲ್ಲಾಧಹನುಕರ್ ಪ್ರಶಸ್ತಿ, ದೃಶ್ಯ ಬೆಳಕು ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ