
ಗುಳೇದಗುಡ್ಡ,ಆ೧೩: ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ನಮ್ಮ ಮಕ್ಕಳಿಗೆ ಇದೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಶಕ್ತಿವಂತರನ್ನಾಗಿ ಮಾಡಬೇಕು. ಇದರಿಂದ ಸಮಾಜ ಅಭಿವೃದ್ಧಿಗೆ ಮಕ್ಕಳು ಕೈಜೋಡಿಸುತ್ತಾರೆ ಎಂದು ಕುರುಹಿನಶೆಟ್ಟಿ ಕೇಂದ್ರ ಸಂಘದ ಬೆಳಗಾವಿ ವಿಭಾಗದ ನಿರ್ದೇಶಕ ಮುರಿಗೆಪ್ಪ ಬನ್ನಿ ಹೇಳಿದರು.
ಅವರು ಸ್ಥಳೀಯ ಯುವಶಕ್ತಿ ಐಟಿಐ ಕಾಲೇಜಿನಲ್ಲಿ ಪಟ್ಟಣದ ಕುರುಹಿನಶೆಟ್ಟಿ ಸಮಾಜ ಅಭಿವೃದ್ಧಿ ಹಾಗೂ ವಿವಿಧೋದ್ದೇಶ ಸಂಘದ ವಾರ್ಷಿಕ ಸಭೆ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ನೀಡಬೇಕು. ಶಿಕ್ಷಣವೇ ಸಾಧನೆಗೆ ಸಾಧನವಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಶ್ರದ್ಧೆ ರೂಢಿಸಿಕೊಂಡಾಗ ಯಶಸ್ಸುಗಳಿಸಲು ಸಾಧ್ಯವಾಗುತ್ತದೆ. ಸಮಾಜ ಬಾಂಧವರು ನಾಲ್ಕುಗೊಡೆಗಳ ಮಧ್ಯದಿಂದ ಹೊರಬಂದು ಸಮಾಜವನ್ನು ಸಂಘಟಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕೇಂದ್ರ ಸಂಘದ ಸದಸ್ಯ ಮುರಗೇಶ ಹುನಗುಂದ ಮಾತನಾಡಿ, ಕೇಂದ್ರ ಸಂಘದಿAದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚು ಅಂಕಪಡೆಯುವ ಮೂಲಕ ಪ್ರೋತ್ಸಾಹಧನ ಪಡೆದು ಉನ್ನತ ಶಿಕ್ಷಣ ಪಡೆದು ಸಮಾಜದ ಹೆಸರು ತರಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜ ಅಧ್ಯಕ್ಷ ಬಸವರಾಜ ಗು. ಯಂಡಿಗೇರಿ, ಉಪಾಧ್ಯಕ್ಷ ಸಂಗಣ್ಣ ಹುನಗುಂದ, ಕೋಶಾಧ್ಯಕ್ಷ ವಿಜಯಕುಮಾರ ಬೆಟಗೇರಿಗೌಡ್ರ, ಈರಣ್ಣ ಯಂಡಿಗೇರಿ, ಕೇಂದ್ರ ಸಂಘದ ನಿರ್ದೇಶಕ ರಾಜು ಜಾಲಿಗಿಡದ, ಬಸವರಾಜ ರಾ. ಯಂಡಿಗೇರಿ, ಸಂಗಮೇಶ ಚಿಕ್ಕಾಡಿ, ಶಂಕರ ರಂಜನಗಿ, ಕೂಡ್ಲೆಪ್ಪ ರಂಜನಗಿ, ಸಂಗಮೇಶ ಬಂಡಿ, ಶ್ರವಣಕುಮಾರ ರಂಜನಗಿ, ಗದಿಗೆಪ್ಪ ರಂಜನಗಿ, ರಾಚಪ್ಪ ಕುರಿ, ರಾಚಪ್ಪ ಯಂಡಿಗೇರಿ, ಉಮೇಶ ಹುನಗುಂದ, ಸಂಗಮೇಶ ರಂಜನಗಿ, ಗುಂಡಪ್ಪ ಅಚನೂರ, ಪತ್ರಕರ್ತರಾದ ಬಸವರಾಜ ಯಂಡಿಗೇರಿ, ಹುಚ್ಚೇಶ ಯಂಡಿಗೇರಿ, ಪ್ರಶಾಂತ ರಂಜನಗಿ, ಅರವಿಂದ ರಂಜನಗಿ, ಮಹಾಲಿಂಗೇಶ ಯಂಡಿಗೇರಿ, ಭಾರತಿ ರಂಜನಗಿ, ವಿದ್ಯಾ ಅಚನೂರ, ಸವಿತಾ ಯಂಡಿಗೇರಿ, ದ್ರಾಕ್ಷಾಯಣಿ ಬಂಡಿ, ಪೂಜಾ ರಂಜನಗಿ, ಕಾವೇರಿ ಅಚನೂರ, ಸಮಾಜಬಾಂಧವರು ಇದ್ದರು.






























