Home ಜಿಲ್ಲೆ ಬೆಂಗಳೂರು ಶಿವಕುಮಾರ್ ಗೆ ಎಸ್.ಐ.ಆರ್. ಅರ್ಜಿ ವಿತರಣೆ

ಶಿವಕುಮಾರ್ ಗೆ ಎಸ್.ಐ.ಆರ್. ಅರ್ಜಿ ವಿತರಣೆ

ಕೋಲಾರ,ಜು,೩– ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್ ಅವರಿಗೆ ಗುರುವಾರ ತಾಲ್ಲೂಕಿನ ತಹಸೀಲ್ದಾರ್ ಶ್ರೀನಿವಾಸ್ ಹಾಗೂ ಕಂದಾಯ ನಿರೀಕ್ಷಕ ರಾಜೇಂದ್ರ ಪ್ರಸಾದ್ ಅವರು ಎಸ್.ಐ.ಆರ್. ಅರ್ಜಿಯನ್ನು ವಿತರಿಸಿ ಸಮಗ್ರ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ವೈ.ಶಿವಕುಮಾರ್ ಮಾತನಾಡಿ ದೇಶಾದಾದ್ಯಂತ ಎಸ್.ಐ.ಆರ್. ಪ್ರಕ್ರಿಯೆ ಬಹಳ ಮಹಾತ್ವದ್ದಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವೂದೇ ಆರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಹೊರಗೊಳಿಯ ಬಾರದು ಜಿಲ್ಲೆಯ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಸೇರಿದಂತೆ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಮುಖಂಡರುಗಳು ಜವಾಬ್ದಾರಿ ವಹಿಸಿ ಅರ್ಜಿಗಳನ್ನು ಭರ್ತಿ ಮಾಡಿಸುವಲ್ಲಿ ಪ್ರಮುಖ ಪಾತ್ರವಹಿಸ ಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಆರ್.ಐ. ಶ್ರೀನಾಥ್, ಬಿ.ಎಲ್.ಎ.೨ಚೇತನ್ ಇದ್ದರು.