Home ಜಿಲ್ಲೆ ಬೆಂಗಳೂರು ಸಿದ್ದಲಿಂಗ ಮಹಾಸ್ವಾಮೀಜಿ ಕಳ್ಳಿಪುರಕ್ಕ ಭೇಟಿ

ಸಿದ್ದಲಿಂಗ ಮಹಾಸ್ವಾಮೀಜಿ ಕಳ್ಳಿಪುರಕ್ಕ ಭೇಟಿ

ಕೋಲಾರ,ಸೆ,೬- ಧರ್ಮ ಅನ್ನುವುದು ಎಲ್ಲರಿಗೂ ಸರಿಸಮಾನವಾಗಿರುತ್ತದೆ. ಆ ಧರ್ಮದ ಹಾದಿಯಲ್ಲಿ ಎಲ್ಲರೂ ಸಾಗಬೇಕಿದೆ ಎಂದು ತುಮಕೂರಿನ ಶ್ರೀ ಸಿದ್ಧಗಂಗಾಮಠದ ಪೀಠಾಧ್ಯಕ್ಷರು ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.


ತಾಲೂಕಿನ ಕಳ್ಳಿಪುರ ಗ್ರಾಮದಲ್ಲಿ ನಡೆದ ಶಿವಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಾದಿಗಳಿಂದ ಪಾದಪೂಜೆ ಸ್ವೀಕರಿಸಿದ ಅವರು ಆಶೀರ್ವಾಚನ ನುಡಿಗಳಾಡಿ, ಮನುಷ್ಯನಲ್ಲಿ ಸಹಕಾರ ಮನೋಭಾವನೆ ಎಂಬುದು ಮುಖ್ಯವಾಗಿ ಬರಬೇಕಾಗಿದೆ. ಎಲ್ಲರ ಜೊತೆಗೂಡಿ ಬದುಕಿನ ಬಂಡಿ ಎಳಯುವಂತಹ ಕಾರ್ಯ ಮಾಡಬೇಕು. ಬದುಕಿನಲ್ಲಿ ಟೀಕೆ ನಿಂದನೆಗಳು ಬರುವುದು ಸಹಜ. ಮರ-ಗಿಡಗಳು ತನಗಾಗಿ ಬದುಕದೇ ಎಲ್ಲರಿಗಾಗಿ ಹೇಗ ಬದುಕು ಸಾಗಿಸುತ್ತವೆಯೋ ಹಾಗ ಆಸೆ ಆಮಿಷಗಳನ್ನು ದೂರ ಮಾಡಿ ಬಾಳುವ ಕಾರ್ಯ ಎಲ್ಲರೂ ಮಾಡಬೇಕಾಗಿದೆ ಎಂದರು.


ನಿಸ್ವಾರ್ಥ ಭಾವನೆ ಎಂಬುದು ಮನುಷ್ಯನಲ್ಲಿರುವ ಕಲ್ಮಷವನ್ನು ತೊಳದು ಹಾಕುತ್ತದೆ. ಸ್ವಾರ್ಥ ಭಾವನೆ ಎಂಬುದು ಅವರನ್ನು ಸುಟ್ಟು ಹಾಕುತ್ತದೆ. ಅಂತಹ ಸ್ವಾರ್ಥ ಭಾವನೆ ಬಿಟ್ಟು ಧರ್ಮದ ಹಾದಿಯಲ್ಲಿ ಎಲ್ಲರೂ ಸಾಗಬೇಕಿದೆ ಎಂದು ನುಡಿದರು.


ಕೋಲಾರ ಜಿಲ್ಲಯ ರತರು ಕಷ್ಟಜೀವಿಗಳು, ಬರಗಾಲದಲ್ಲಿ ನೀರಿನ ಕೊರತೆ ಇದ್ದರೂ ಉತ್ತಮ ಫಸಲು ಬಳದು ವಿಶ್ವದೆಲ್ಲಡೆ ಕಳಿಸಿ ಜನರ ದಾಸೋಹವನ್ನು ನೀಗಿಸುತ್ತಿದ್ದಾರ. ಬರಡು ಜಿಲ್ಲಯಾಗಿ ಸರ್ಕಾರ ಘೋಷಿಸಿದೆ, ಆದರ ದೇವರು ಕಣ್ಣು ಬಿಟ್ಟು ಉತ್ತಮ ಮಳ ಸುರಿದು ಸಮೃದ್ದಿಯಾದ ಬೆಳೆಗಳನ್ನು ಕರುಣಿಸುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ಜೆಡಿಎಸ್ ಮುಖಂಡರಾದ ಸಿ.ಎಂ.ಆರ್. ಶ್ರೀನಾಥ್ ಅವರು ಸ್ವಾಮೀಜಿಗಳಿಗೆ ಫಲಾತಾಂಬುಲಾಧಿಗಳನ್ನು ಅರ್ಪಿಸಿ ಆಶೀರ್ವಾದ ಪಡೆದರು.


ಪೂಜಾ ಕಾರ್ಯಕ್ರಮದಲ್ಲಿ ಹೊನ್ನೆನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎನ್.ನಟರಾಜ್, ಬಿಎಂಆರ್ ಚನ್ನಪ್ಪ, ಅಖಿಲ ವೀರಶೈವ ಮಹಾಸಭಾದ ಮಾಜಿ ಉಪಾಧ್ಯಕ್ಷ ಕೆ.ಬಿ. ಬೈಲಪ್ಪ, ,ಅಣ್ಣಿಹಳ್ಳಿ ಸಹಕಾರ ಸಂಘದ ಒಕ್ಕೂಟ ನಿರ್ದೇಶಕ ನಾಗರಾಜ್, ಗುತ್ತಿಗದಾರ ಶೇಖರ್, ಕಳ್ಳಿಪುರ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ್, ನಾಗಲಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಸಿ.ಒಡೆಯರ್, ವೀರಶೈವ ತಾಲೂಕು ಘಟಕದ ಅಧ್ಯಕ್ಷ ನಾಗಲಾಪುರ ಸಿದ್ದಲಿಂಗಯ್ಯ, ಪೊಲೀಸ್ ಶೇಖರ್, ಸಚ್ಚಿದಾನಂದ,ರಾಮಸಂದ್ರ ಕುಮಾರ್, ರೇಣುಕಾಚಾರ್ಯ , ಸೋಮಶೇಖರ್‌ಹಾಗೂ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.