Home ಜಿಲ್ಲೆ ಬೆಂಗಳೂರು ಶಂಕರ್‌ನಾಗ್ ಕಪ್: ಕೆಂಗೇರಿ ಅಟೆಕಾರ್ಸ್ ತಂಡ ಪ್ರಥಮ ಬಹುಮಾನ

ಶಂಕರ್‌ನಾಗ್ ಕಪ್: ಕೆಂಗೇರಿ ಅಟೆಕಾರ್ಸ್ ತಂಡ ಪ್ರಥಮ ಬಹುಮಾನ

ಕೆಂಗೇರಿ,ಜು೨ : ನಾಗದೇವನಹಳ್ಳಿಯ ಜಿ.ತಿಮ್ಮಯ್ಯ ಬಡಾವಣೆಯ ಶ್ರೀ ಶಂಕರ್ ನಾಗ್ ವಿನಾಯಕ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಶಂಕರ್ ನಾಗ್ ಕಪ್ ೨೦೨೬. ಟೆನ್ನಿಸ್ ಬಾಲ್ ಲಾಂಗ್ ಪಿಚ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಂಗೇರಿ ಅಟೆಕಾರ್ಸ್ ತಂಡ ಪ್ರಥಮ ಬಹುಮಾನ ೫೦,೦೦೦ ನಗದು ಮತ್ತು ಟ್ರೋಫಿ.ದ್ವಿತೀಯ ಬಹುಮಾನ ಎಂಎಂ ಸಂಕೇತಿ ಇಲೆವೆನ್ಸ್ ತಂಡ ೨೫,೦೦೦ ನಗದು ಮತ್ತು ಟ್ರೋಫಿ ಯನ್ನು ಮುಡುಗೇರಿಸಿಕೊಂಡವು


ಒಕ್ಕಲಿಗರ ಸಂಘದ ನಿರ್ದೇಶಕ ಸಿ. ಎಂ.ಮಾರೇಗೌಡ ಅವರು ಬಾಲ್ ಹಾಕುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ಯಶವಂತಪುರ ಕ್ಷೇತ್ರದಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯದಲ್ಲಿ ಶಂಕರ್ ನಾಗ್ ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ಎನ್. ಸಿ.ಕುಮಾರ್ ಮತ್ತು ಅವರ ತಂಡದ ಕಾರ್ಯ ಶ್ಲಾಘನಿಯ ಎಂದರು.


ರೈತ ಮೋರ್ಚಾ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಎಂ.ರುದ್ರೇಶ್ ಅವರು ಬ್ಯಾಟ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಕೆಂಗೇರಿ ಪುರಸಭೆ ಮಾಜಿ ಉಪಾಧ್ಯಕ್ಷ ಜಿ.ಮುನಿರಾಜು ಮಾತನಾಡಿ ಕ್ರಿಕೆಟ್ ಪಂದ್ಯಾವಳಿಯನ್ನು ಅಂತರಾಷ್ಟ್ರೀಯ ಹಬ್ಬವನ್ನಾಗಿ ವೀಕ್ಷಣೆ ಮಾಡುವ ಮೂಲಕ ಜಾತಿ. ಧರ್ಮ. ಮೀರಿ ಪ್ರೋತ್ಸಾಹ ಮಾಡುವ ಮೂಲಕ ಪಂದ್ಯಾವಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ನಾವೆಲ್ಲರೂ ಸಹ ಕ್ರೀಡೆಗಳತ್ತ ಹೆಚ್ಚಿನ ಗಮನ.ಬೆಂಬಲ ನೀಡಬೇಕಾಗಿದೆ ಎಂದರು.


ಯಶವಂತಪುರ ಕ್ಷೇತ್ರದ ಗ್ರಾಮಾಂತರ ಮಂಡಲದ ಬಿಜೆಪಿ ಅಧ್ಯಕ್ಷ ಆರ್. ಪಿ. ಪ್ರಕಾಶ್. ಪಾಲಿಕೆಯ ಮಾಜಿ ಸದಸ್ಯ ರ. ಆಂಜಿನಪ್ಪ. ನಗರ ಮಂಡಳದ ಬಿಜೆಪಿ ಅಧ್ಯಕ್ಷ ಜಯರಾಮೇಗೌಡ. ಮಾಜಿ ಅಧ್ಯಕ್ಷ ಅನಿಲ್ ಚಳಗೇರಿ ವಿಜೇತರಿಗೆ ಬಹುಮಾನ ವಿತರಿಸಿದರು


ಬಿಜೆಪಿ ಮುಖಂಡರಾದ ಎಸ್ .ಆರ್. ಮೋಹನ್ ಕುಮಾರ್. ಪ್ರೇಮ ನಾಗಯ್ಯ. ಸಿ ಎಂ ಸಿ ಸತ್ಯನಾರಾಯಣ. ಪಾಲಿಕೆ ಮಾಜಿ ಸದಸ್ಯ ಮೈಲಸಂದ್ರ ಮುನಿರಾಜು. ಬಿ ಎಲ್ ಎ ಒಂದರ ಮುಖ್ಯಸ್ಥ ಆರ್. ಎಸ್. ದೀಪಕ್ ಶೆಟ್ಟಿ, ಟೊಯೋಟಾ ಕಾರ್ಮಿಕ ಸಂಘದ ಅಧ್ಯಕ್ಷ ಎಸ್. ಆರ್. ದೀಪಕ್. ದುಬಾಸಿಪಾಳ್ಯ ಕೆ. ರಾಮು. ಜೆ. ರಮೇಶ್. ಸಿ. ಎಚ್. ಕೃಷ್ಣಮೂರ್ತಿ. ಬೆಂಗಳೂರು ಉತ್ತರ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಯದುನಂದನ್. ದೊಡ್ಡ ಬಿದರಕಲು ವಾರ್ಡ್ ಅಧ್ಯಕ್ಷ ಮಂಡ್ಯ ಮಲ್ಲೇಶ್. ಕೆಂಗೇರಿ ವಾರ್ಡ್ ಅಧ್ಯಕ್ಷ ಮಹೇಶ್. ಕೋಟೆ ವಾರ್ಡ್ ಅಧ್ಯಕ್ಷ ರಾಮಚಂದ್ರ ಮತಿತ್ತರರು ಉಪಸ್ಥಿತರಿದ್ದರು