Home ಜಿಲ್ಲೆ ಬೆಂಗಳೂರು ರಾಮನಗರದಲ್ಲಿ ಸೇವಾ ಸಂಕಲ್ಪ ಸಭೆ

ರಾಮನಗರದಲ್ಲಿ ಸೇವಾ ಸಂಕಲ್ಪ ಸಭೆ

ಕನಕಪುರ.ಅ.೮- ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿ ೨೫ ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆ ರಾಮನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೇವಾ ಸಂಕಲ್ಪ ಸಭೆಗೆ ಕನಕಪುರದಿಂದ ನೂರಾರು ಬಿಜೆಪಿ ಕಾರ್ಯಕರ್ತರು ಬೈಕ್ ರ?ಯಾಲಿ ಮೂಲಕ ತೆರಳಿದರು.


ಜಿಲ್ಲಾ ಕೇಂದ್ರಗಳಲ್ಲಿ ನಡೆದ ಸೇವಾ ಸಂಕಲ್ಪ ಅಭಿಯಾನದಲ್ಲಿ ಕನಕಪುರ, ಹಾರೋಹಳ್ಳಿ ತಾಲೂಕು ಹಾಗೂ ನಗರ ಘಟಕದ ಎಲ್ಲಾ ಪದಾಧಿಕಾರಿಗಳು ಹಾಗೂ ಮುಖಂಡರು ಪಾಲ್ಗೊಂಡಿದ್ದರು.


ರಾಮನಗರದ ವಿವೇಕಾನಂದನಗರದಲ್ಲಿ ಆರ್.ವಿ.ಸಿ.ಎಸ್. ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸೇವಾ ಸಂಕಲ್ಪ ಅಭಿಯಾನ ೨೦೨೬ ರ ಅಂಗವಾಗಿ ಕನಕಪುರದಿಂದ ಬೈಕ್ ಮೂಲಕ ಸೇವಾ ಜ್ಯೋತಿ ಯಾತ್ರೆಯ ಹಾಗೂ ವಿಕಸಿತ ಭಾರತ ಸಂಕಲ್ಪ ಕಾರ್ಯಕ್ರಮಕ್ಕೆ ತಾಲೂಕು ಅಧ್ಯಕ್ಷ ಕೊತ್ತನೂರು ಕುಮಾರ್ ಹಾಗೂ ನಗರ ಘಟಕದ ಅಧ್ಯಕ್ಷ ಚೂಡಾಮಣಿ ಚಂದ್ರರವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ತಾಲೂಕು ಅಧ್ಯಕ್ಷ ಕೊತ್ತನೂರು ಕುಮಾರ್ ಮಾತನಾಡಿ, ೨೫ ವರ್ಷಗಳ ಸಮರ್ಪಿತ ಸಾರ್ವಜನಿಕ ಜೀವನಕ್ಕೆ ಮೋದಿಯವರು ತಮ್ಮ ಶಿಸ್ತು, ಪರಿಶ್ರಮದ ಮೂಲಕ ರಾಷ್ಟ್ರ ಸೇವೆಯ ಬದ್ಧತೆಯನ್ನು ಅಳವಡಿಸಿಕೊಂಡಿದ್ದರು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಶಿವಮುತ್ತು ಸೇರಿದಂತೆ ಮುಖಂಡರಾದ ಹಾರೋಹಳ್ಳಿ ಮುರಳಿ, ಗೌತಮ್‌ಗೌಡ, ಪುಟ್ಟಸ್ವಾಮಿ, ಪಿ. ದಯಾನಂದ್, ಕಲ್ಲಳ್ಳಿ ಚಂದ್ರು, ನಿಡಗಲ್‌ರಮೇಶ್, ಶಿವರಾಜು, ಕೋಟೆ ಡಿ ಶ್ರೀನಿವಾಸ್, ಕೆರಳಾಳುಸಂದ್ರ, ಶ್ರೀನಿವಾಸ್ ಏರಂದ್ಯಾಪನಹಳ್ಳಿ ಶ್ರೀನಿವಾಸ್ ಮೊದಲಾದ ಬಿಜೆಪಿ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳು ತೆರಳಿದರು.