Home ಜಿಲ್ಲೆ ಮೊಬೈಲ್ ಬಳಕೆ ಕಡಿಮೆ, ಕಲಾಸಕ್ತಿ ಹೆಚ್ಚಲಿ : ಸಿದ್ರಾಮ ಸಿಂಧೆ

ಮೊಬೈಲ್ ಬಳಕೆ ಕಡಿಮೆ, ಕಲಾಸಕ್ತಿ ಹೆಚ್ಚಲಿ : ಸಿದ್ರಾಮ ಸಿಂಧೆ

ಬೀದರ್ ಅ. ೦೮ : ಇಂದಿನ ಮಕ್ಕಳು ಮೊಬೈಲ್ ಬಳಕೆಗೆ ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ. ಇದರಿಂದ ಅವರ ಸೃಜನಶೀಲ ಚಟುವಟಿಕೆಗಳಿಗೆ ಕೆಲವೊಮ್ಮೆ ಹಿನ್ನಡೆಯಾಗುತ್ತಿದೆ. ಮಕ್ಕಳನ್ನು ನಮ್ಮ ಕಲೆ, ಸಂಸ್ಕೃತಿ ಹಾಗೂ ಪರಂಪರೆಯೊAದಿಗೆ ಬೆಸೆಯುವ ಅಗತ್ಯವಿದೆ. ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ‘ಚಿಗುರು’ ನಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ ಹೇಳಿದರು.
ನಗರದ ಮೈಲೂರ ರಸ್ತೆಯಲ್ಲಿರುವ ವಿದ್ಯಾಶ್ರೀ ಮಾದರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೀದರ್ ಹಾಗೂ ವಿದ್ಯಾಶ್ರೀ ಮಾದರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಚಿಗುರು-೨೦೨೬-೨೭’ ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ವಿದ್ಯಾಶ್ರೀ ಮಾದರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಪ್ರಾಂಶುಪಾಲರಾದ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಮಕ್ಕಳಿಗಾಗಿ ಇಂತಹ ವಿನೂತನ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸಲು ಇಂತಹ ವೇದಿಕೆಗಳು ಅಗತ್ಯ. ವಿವಿಧ ಕಲಾ ಪ್ರಕಾರಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಅವರಲ್ಲಿರುವ ಪ್ರತಿಭೆ ಹೊರಹೊಮ್ಮುವುದರ ಜೊತೆಗೆ ಆತ್ಮವಿಶ್ವಾಸವೂ ಹೆಚ್ಚುತ್ತದೆ ಎಂದರು
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗಣಪತಿ ಸೋಲಪೂರೆ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯರಾದ ಚೆನ್ನಬಸವ ಹೇಡೆ, ಗೋಡಂಪಳ್ಳಿಯ ಅಟಲ್ ಬಿಹಾರಿ ವಾಜಪೇಯಿ ಉಪನ್ಯಾಸಕರಾದ ದೇವಿದಾಸ್ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಕುಮಾರಿ ಕ್ಲೆöಮೆಂಟಿನಾ, ಇತರರು ವೇದಿಕೆ ಮೇಲಿದ್ದರು.
ಸರಸ್ವತಿ ಶೀಲವಂತ ಸ್ವಾಗತಿಸಿದರು. ಕುಮಾರಿ ಕ್ಲೆöÊಮೆಂಟಿನಾ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಾAತ ವಂದಿಸಿದರು.
ವೇದಿಕೆ ಏರಿದ ಪುಟ್ಟ ಕಲಾವಿದರು
ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ಕಲಾ ಪ್ರಕಾರಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆ, ಸಮೂಹ ನೃತ್ಯ, ನಾಟಕ ಹಾಗೂ ಏಕಾಭಿನಯ ಸೇರಿದಂತೆ ಹಲವು ಸಾಂಸ್ಕೃತಿಕ ಪ್ರಕಾರಗಳನ್ನು ಮಕ್ಕಳು ಆತ್ಮವಿಶ್ವಾಸದಿಂದ ಪ್ರಸ್ತುತಪಡಿಸಿದರು.
ಕು. ಯಶಸ್ವಿಕಾ ಪಾಟೀಲ ಮತ್ತು ತಂಡ ಹಾಗೂ ಕು. ವೇದ್ ಶಶಿಕಾಂತ ಬಂಬುಳಗೆ ಮತ್ತು ತಂಡದ ಶಾಸ್ತ್ರೀಯ ಸಂಗೀತ ಪ್ರದರ್ಶನ ಗಮನ ಸೆಳೆಯಿತು. ಕು. ನಂದಿನಿ ತಂಡದ ಸುಗಮ ಸಂಗೀತ, ಕು. ಭಾಗ್ಯಲಕ್ಷ್ಮಿ ಅವರ ಜಾನಪದ ಗೀತೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕು. ದೀಪಿಕಾ ಮತ್ತು ಬಗದಲ್ ತಂಡದವರ ಸಮೂಹ ನೃತ್ಯಕ್ಕೆ ಮಕ್ಕಳು ತಮ್ಮ ಹೆಜ್ಜೆ ಭಾವದ ಮೂಲಕ ವೇದಿಕೆಯಲ್ಲಿ ಚೈತನ್ಯ ತುಂಬಿದರು. ಕು. ಅಸ್ಮಿತಾ ಮತ್ತು ತಂಡ ಅಭಿನಯಿಸಿದ ‘ಪರಿವರ್ತನಾ’ ನಾಟಕವು ಸಾಮಾಜಿಕ ಸಂದೇಶದೊAದಿಗೆ ಗಮನ ಸೆಳೆಯಿತು. ಕು. ಮಾಧವ ತಾಳಮಡಗಿ ಅವರ ಏಕಾಭಿನಯವೂ ಪ್ರೇಕ್ಷಕರನ್ನು ಸೆಳೆಯಿತು.
ಕಾರ್ಯಕ್ರಮದಲ್ಲಿ ಮಕ್ಕಳ ಉತ್ಸಾಹ, ಕಲಾ ಪ್ರದರ್ಶನ ಹಾಗೂ ವೇದಿಕೆಯ ಮೇಲಿನ ಆತ್ಮವಿಶ್ವಾಸ ಗಮನ ಸೆಳೆಯಿತು. ಪೋಷಕರು, ಶಿಕ್ಷಕರು ಹಾಗೂ ಪ್ರೇಕ್ಷಕರು ಮಕ್ಕಳ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅದೇ ಸಂದರ್ಭದಲ್ಲಿ ಜನಪದ ಕಲಾವಿದರ ಬಳಗದ ಅಧ್ಯಕ್ಷರಾದ ವಿಜಯಕುಮರ ಸೋನಾರೆ, ಪತ್ರಕರ್ತ ಶಶಿಕಾಂತ ಬಂಬುಳಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿಗಳಾದ ಪ್ರವೀಣ್, ಗುರು, ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಪೋಷಕರು ಮಕ್ಕಳು ಉಪಸ್ಥಿತರಿದ್ದರು.