Home ಜಿಲ್ಲೆ ಹುಣಸಗಿ-ಸುರಪುರ ತಾಲೂಕು ಮಹಿಳಾ ಘಟಕಕ್ಕೆ ನೂತನ ಸಾರಥಿಗಳ ಆಯ್ಕೆ

ಹುಣಸಗಿ-ಸುರಪುರ ತಾಲೂಕು ಮಹಿಳಾ ಘಟಕಕ್ಕೆ ನೂತನ ಸಾರಥಿಗಳ ಆಯ್ಕೆ

ಹುಣಸಗಿ: ಕನ್ನಡ ನಾಡು, ನುಡಿ ಹಾಗೂ ನೆಲದ ರಕ್ಷಣೆಗಾಗಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನಮ್ಮ ಕರ್ನಾಟಕ ಸೇನೆ (ನಕಸೇ) ವತಿಯಿಂದ ಹುಣಸಗಿ ಹಾಗೂ ಸುರಪುರ ತಾಲೂಕುಗಳ ನೂತನ ಮಹಿಳಾ ಪದಾಧಿಕಾರಿಗಳ ಸೇರ್ಪಡೆ ಮತ್ತು ಆಯ್ಕೆ ಕಾರ್ಯಕ್ರಮ ಹುಣಸಗಿಯ ಗುಡ್‌ಲಕ್ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು.

ನಮ್ಮ ಕರ್ನಾಟಕ ಸೇನೆಯ ರಾಜ್ಯ ಅಧ್ಯಕ್ಷರಾದ ಎಂ. ಬಸವರಾಜ ಪಡುಕೋಟೆ ಅವರ ಆದೇಶದನ್ವಯ, ರಾಜ್ಯ ಪ್ರಧಾನ ಸಂಚಾಲಕರಾದ ಭೀಮಣ್ಣ ಶಖಾಪುರ ಅವರ ಅಧ್ಯಕ್ಷತೆಯಲ್ಲಿ ಹಾಗೂ ಯಾದಗಿರಿ ಜಿಲ್ಲಾಧ್ಯಕ್ಷರಾದ ವಿಶ್ವರಾಧ್ಯ ದಿಮ್ಮೆ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ಆಯ್ಕೆ ಮಾಡಲಾಯಿತು. ಹುಣಸಗಿ ತಾಲೂಕು ಮಹಿಳಾ ಅಧ್ಯಕ್ಷರಾಗಿ ಶ್ರೀಮತಿ ಶ್ರೀದೇವಿ ಮೆಟ್ಟಿ ಹಾಗೂ ಸುರಪುರ ತಾಲೂಕು ಮಹಿಳಾ ಅಧ್ಯಕ್ಷರಾಗಿ ಶ್ರೀಮತಿ ಸಂಗೀತಾ ಕೋತಿನ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಜಿಲ್ಲಾಧ್ಯಕ್ಷರಾದ ಶ್ರೀದೇವಿ ಕಟ್ಟಿಮನಿ, ಹುಣಸಗಿ ತಾಲೂಕು ಅಧ್ಯಕ್ಷ ಭೀಮನಗೌಡ ಪೋ. ಪಾಟೀಲ, ಶಹಾಪುರ ತಾಲೂಕು ಅಧ್ಯಕ್ಷ ಸಿದ್ದು ಪಟ್ಟೇದಾರ, ಗುರುಮಠಕಲ್ ತಾಲೂಕು ಸಂಘಟನಾ ಕಾರ್ಯದರ್ಶಿ ಅಬ್ದುಲ್, ಸಂಗಮೇಶ ದೊರೆ ವಜ್ಜಲ್, ಭೀಮನಗೌಡ ಕಡದರಾಳ, ಅಂಬರೇಶನಾಯಕ ಬೈಲಕುಂಟಿ, ಶ್ರೀಶೈಲ ವಜ್ಜಲ್, ಕೆಂಭಾವಿ ಹೋಬಳಿ ಕಾರ್ಮಿಕ ಘಟಕದ ಅಧ್ಯಕ್ಷ ಗುರುರಾಜ ಅಂಗಡಿ, ರಂಗಣ್ಣ ವಡ್ಡರ (ಕಂದಿಲ್), ಹಣಮಂತ ದೂರಿ, ಅಂಬರೀಶ ಸೊನ್ನಾಪುರ, ಪರಮಣ್ಣ ಗಿಂಡಿ ಹಾಗೂ ತಿರುಪತಿ ಸಿದ್ದಾಪುರ ಸೇರಿದಂತೆ ಹುಣಸಗಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ವಿವಿಧ ಘಟಕಗಳ ಪ್ರಮುಖ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಕನ್ನಡ ನಾಡು, ನುಡಿ ಹಾಗೂ ನೆಲದ ರಕ್ಷಣೆಗಾಗಿ ಮಹಿಳಾ ಘಟಕವನ್ನು ಮತ್ತಷ್ಟು ಬಲಪಡಿಸಿ, ಮಹಿಳೆಯರು ಮುಂಚೂಣಿಯಲ್ಲಿ ನಿಂತು ಸಂಘಟಿತ ಹೋರಾಟ ರೂಪಿಸಬೇಕು ಎಂಬ ಆಶಯವನ್ನು ನಾಯಕರು ವ್ಯಕ್ತಪಡಿಸಿದರು.