Home ಜಿಲ್ಲೆ ಕಲಬುರಗಿ ಎಸ್.ಆರ್.ಎನ್. ಮೆಹತಾ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ

ಎಸ್.ಆರ್.ಎನ್. ಮೆಹತಾ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ

ಕಲಬುರಗಿ,ಸೆ.30-ಇದೇ ತಿಂಗಳು 27 ರಂದು ನಗರದ ಎಸ್. ಆರ್. ಎನ್. ಮೆಹತಾ ಶಾಲೆಯ ಆವರಣದಲ್ಲಿ ಆಯೋಜಿಸಿದ 2026-27ನೇ ಶೈಕ್ಷಣಿಕ ಸಾಲಿನ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಎಸ್.ಆರ್.ಎನ್.ಮೆಹತಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ವಿಜೇತರಾಗಿದ್ದಾರೆ.
14 ವರ್ಷದ ಬಾಲಕಿಯರ ಸ್ಪರ್ಧೆಯಲ್ಲಿ
ಕುುಮಾರಿ ದೃಷ್ಟಿ – ಪ್ರಥಮ ಸ್ಥಾನ, ಕುಮಾರಿ ಆಯಿಷಾ- ಪ್ರಥಮ ಸ್ಥಾನ, ಕುಮಾರಿ ಸಮೃದ್ದಿ – ಪ್ರಥಮ ಸ್ಥಾನ, ಕುಮಾರಿ ಸಾನವಿ – ಪ್ರಥಮ ಸ್ಥಾನ, 14 ವರ್ಷದ ಬಾಲಕರ ಸ್ಪರ್ಧೆಯಲ್ಲಿ ಕುಮಾರ ಜಿಯಾನ್ ಜಾರ್ಜ -ಪ್ರಥಮ ಸ್ಥಾನ, ಕುಮಾರ ಅಭಿನವ ಎ.ಟಿ -ಪ್ರಥಮ ಸ್ಥಾನ, ಕುಮಾರ ಸೃಜನ -ಪ್ರಥಮ ಸ್ಥಾನ, ಕುಮಾರ ಆದಿತ್ಯಾ -ಪ್ರಥಮ ಸ್ಥಾನ, ಕುಮಾರ ಸಾಯಿಫುಲ್ -ಪ್ರಥಮ ಸ್ಥಾನ, 17 ವರ್ಷದ ಬಾಲಕ ಮತ್ತು ಬಾಲಕಿಯರ ಸ್ಪರ್ಧೆಯಲ್ಲಿ ಕುಮಾರ ಸೋಹನ್ -ಪ್ರಥಮ ಸ್ಥಾನ, ಕುಮಾರಿ ಎಸ್ತರ ರಾಣಿ- ಪ್ರಥಮ ಸ್ಥಾನ, ಕುಮಾರಿ ಜಾನವಿ- ಪ್ರಥಮ ಸ್ಥಾನ, ಕುಮಾರಿ ಸುನಿಕ್ಷಾ – ಪ್ರಥಮ ಸ್ಥಾನ, ಕುಮಾರಿ ಪ್ರೇಕ್ಷಾ ಮಾಶಾಳಕರ – ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯ ಟ್ರಸ್ಟಿಗಳಾದ ಚಕೋರ ಮೆಹತಾ, ಪ್ರಾಚಾರ್ಯರಾದ ಪ್ರೀತಿ ಮೆಹತಾ, ದೈಹಿಕ ಶಿಕ್ಷಣದ ವಿಭಾಗ ಮುಖ್ಯಸ್ಥರಾದ ಬಸವರಾಜ ತಳಕೇರಿ, ಕರಾಟೆ ತರೆಬೆತಿದಾರರಾದ ಕೃಷ್ಣಾ ಗೌಳಿ, ಕು. ಮಣಿಕಂಠ ಜುಮ್ಮಣ್ಣಾ ಹಾಗೂ ಶಿಕ್ಷಕ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.