
ಕಲಬುರಗಿ,ಸೆ.30-ನಗರ ಹೊರವಲಯದ ರೆಹಮತ್ ನಗರ ಕಾಲೋನಿಯ ಮನೆಯೊಂದರಲ್ಲಿ ಸಾರ್ವಜನಿಕರ ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿಂiÀiನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಮೇಲೆ ಆಹಾರ ನಿರೀಕ್ಷಕರಾದ ವಿದ್ಯಾಶ್ರೀ ಪಾಟೀಲ, ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಎಎಸ್‍ಐ ಅನೀಲ್, ಸಿಬ್ಬಂದಿ ವಿಠ್ಠಲ್ ಅವರು ದಾಳಿ ನಡೆಸಿ 1,53,680 ರೂ.ಮೌಲ್ಯದ 105 ಚೀಲ ಅಕ್ಕಿ ಜಪ್ತಿ ಮಾಡಿದ್ದಾರೆ.
ಮನೆಯ ಮಾಲಿಕ ರೆಹಮತ್ ನಗರ ಕಾಲೋನಿಯ ಮಹಮ್ಮದ್ ಫಾರುಕ್ ಪರಾರಿಯಾಗಿದ್ದು, ಅವರ ವಿರುದ್ಧ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















