
ಬೆಂಗಳೂರು, ಸೆ. ೮- ಭವಿಷ್ಯವನ್ನು ಮಹತ್ವಾಕಾಂಕ್ಷೆ, ಜವಾಬ್ದಾರಿ ಮತ್ತು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ಬದ್ಧತೆಯೊಂದಿಗೆ ಎದುರಿಸುವಂತೆ ಡಾ. ಎ.ಸಿ. ಷಣ್ಮುಗಂ ಅವರು, ಪದವೀಧರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಆರ್‌ಆರ್‌ಎಮ್‌ಎಚ್ ಕ್ಯಾಪಸ್‌ನ ಎಸಿಎಸ್ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜು ತನ್ನ ೧೭ನೇ ಪದವಿ ಪ್ರದಾನ ಸಮಾರಂಭವನ್ನು ಸೆಂಟರ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಯುವ ವೃತ್ತಿಪರರ ಜೀವನ ಮತ್ತು ವೃತ್ತಿಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಪೋಷಕರ ಬೆಂಬಲ ಮತ್ತು ಶಿಕ್ಷಕರ ಮಾರ್ಗದರ್ಶನವನ್ನು ಸ್ಮರಿಸುವ ಅಗತ್ಯವನ್ನು ಅವರು ಒತ್ತು ನೀಡಿದರು. ಪದವೀಧರರು ಕೇವಲ ವೈಯಕ್ತಿಕ ಯಶಸ್ಸನ್ನು ಮಾತ್ರವಲ್ಲದೆ, ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕವಾದ ಪ್ರಗತಿಯನ್ನು ಸಾಧಿಸಬೇಕೆಂದು ಅವರು ಹೇಳಿದರು.
ಮುಖ್ಯ ಅತಿಥಿ ಡಾ. ಪಿ. ವೀರಮುತ್ತುವೇಲ್ ಅವರು ಮಾತನಾಡಿ ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತದ ಗಮನಾರ್ಹ ಸಾಧನೆಗಳನ್ನು, ವಿಶೇಷವಾಗಿ ಚಂದ್ರಯಾನ-೩ ರ ಯಶಸ್ಸನ್ನು ಸ್ಮರಿಸುವ ಮೂಲಕ ಪದವೀಧರರಲ್ಲಿ ಸ್ಪೂರ್ತಿ ತುಂಬಿದರು. ಇಂತಹ ಸಾಧನೆಗಳ ಹಿಂದಿರುವ ವೈಜ್ಞಾನಿಕ ಕುತೂಹಲ ಮತ್ತು ಶ್ರದ್ಧೆಯನ್ನು ಎತ್ತಿಹಿಡಿದ ಅವರು, ಸಾಂಪ್ರದಾಯಿಕ ಗಡಿಗಳನ್ನು ಮೀರಿ ಯೋಚಿಸಲು ಮತ್ತು ದೊಡ್ಡ ಕನಸುಗಳನ್ನು ಕಾಣಲು ಯುವ ಇಂಜಿನಿಯರ್‌ಗಳಿಗೆ ಕರೆ ನೀಡಿದರು. ಆವಿಷ್ಕಾರ, ದೃಢಸಂಕಲ್ಪ ಮತ್ತು ಹೊಸತನ್ನು ಅನ್ವೇಷಿಸುವ ಮನೋಭಾವವಿದ್ದರೆ, ಅಸಾಧ್ಯವಾದುದನ್ನು ಸಹ ಸಾಧಿಸಬಹುದು ಎಂದು ಹೇಳಿದರು.
ವಿಕ್ಟರ್ ಸುಂದರರಾಜ ಅವರು ಅರ್ಥಪೂರ್ಣ ಮತ್ತು ದೀರ್ಘಕಾಲೀನ ವೃತ್ತಿಜೀವನವನ್ನು ನಿರ್ಮಿಸಲು ಅಗತ್ಯವಿರುವ ಮೌಲ್ಯಗಳ ಮೇಲೆ ಗಮನ ಹರಿಸಿದರು. ಶಿಕ್ಷಣದ ಅವಧಿಯಲ್ಲಿ ಮೈಗೂಡಿಸಿಕೊಂಡ ಶಿಸ್ತು, ಬದ್ಧತೆ ಮತ್ತು ಕಲಿಯುವ ಮನೋಭಾವವನ್ನು ಮುಂದುವರಿಸಿಕೊಂಡು ಹೋಗುವಂತೆ ಅವರು ಪದವೀಧರರನ್ನು ಪ್ರೋತ್ಸಾಹಿಸಿದರು. ನಿರಂತರ ಸ್ವಯಂ-ಸುಧಾರಣೆಗೆ ಬದ್ಧರಾಗಿರಲು ಮತ್ತು ವೃತ್ತಿಪರ ಜೀವನದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಬೆಳವಣಿಗೆಯಲ್ಲೂ ಶ್ರೇಷ್ಠತೆಯನ್ನು ಸಾಧಿಸಲು ಅವರು ಕರೆ ನೀಡಿದರು.
ಅರುಣ್ ಕುಮಾರ್, ಅಧ್ಯಕ್ಷರಾದ ಲಲಿತಾ ಲಕ್ಷ್ಮಿ, ಕಾರ್ಯನಿರ್ವಾಹಕ ಈ ಸಮಾರಂಭವು ಅಧ್ಯಕ್ಷರಾದ ಡಾ. ಎ.ಸಿ. ಷಣ್ಮುಗಂ, ಕಾರ್ಯಾಧ್ಯಕ್ಷರಾದ ಶ್ರೀ ಎ.ಸಿ.ಎಸ್. ನಿರ್ದೇಶಕರಾದ ಡಾ. ಎಸ್. ವಿಜಯಾನಂದ್, ಸಿಇಒ ಶ್ರೀ ಸಿ.ಎನ್. ಸೀತಾರಾಮ್ (ಐಎಎಸ್ ನಿನ್ನತು. ವಿಶೇಷಾಧಿಕಾರಿ ಡಾ. ಎಸ್. ಜಯಬಾಲನ್, ರೆಕ್ಟರ್ ಡಾ.ಎ.ಕೆ.ಮಾರಿಯಪ್ಪನ್ ಮತ್ತು ಪ್ರಾಂಶುಪಾಲರಾದ ಡಾ. ಆರ್. ಬಾಲಕೃಷ್ಣ, ಐಎಸ್‌ಆರ್‌ಒ (ಇಸ್ರೋ) ವಿಜ್ಞಾನಿ, ಚಂದ್ರಯಾನ ಯೋಜನಾ ನಿರ್ದೇಶಕ ಮತ್ತು ಮಿಷನ್ ಡೈರೆಕ್ಟರ್ ಆಗಿರುವ ಡಾ.ಪಿ.ವೀರಮುತ್ತು ವೇಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇನ್ಫೋಸಿಸ್ ಲಿಮಿಟೆಡ್‌ನ ಸಹಾಯಕ ಉಪಾಧ್ಯಕ್ಷರಾದ ಶ್ರೀ ವಿಕ್ಟರ್ ಸುಂದರರಾಜ ಗೌರವ ಅತಿಥಿಯಾಗಿ ಹಾಗೂ ವಿಪ್ರೋ ಲಿಮಿಟೆಡ್ ಜಾಗತಿಕ ಪ್ರವೀಣ್ ಕಾಮತ್ ವಿಶಿಷ್ಟ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
































