Home ಜಿಲ್ಲೆ ಕಲಬುರಗಿ ರೇವೂರ: ದಸರಾ ಉತ್ಸವ

ರೇವೂರ: ದಸರಾ ಉತ್ಸವ

ರೇವೂರ (ಬಿ):ಅಫಜಲಪುರ ತಾಲೂಕಿನ ರೇವೂರ (ಬಿ) ಗ್ರಾಮದಲ್ಲಿ ಶಮಿ ಪೂಜೆ ಹಾಗೂ ಬನ್ನಿ ಮುರಿಯುವ ಕಾರ್ಯಕ್ರಮ ಜರಗಿತು.

ರೇವೂರ ಗ್ರಾಮದ ಕುಲಕರ್ಣಿ ಮನೆತನದವರಾದ ಶ್ರೀ ವಿದ್ಯಾಸಾಗರ ಕುಲಕರ್ಣಿ ರೇವೂರ ಅವರು ಶಮಿ ಪೂಜೆ ಹಾಗೂ ಬನ್ನಿ ಮುರಿಯುವ ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಪ್ರಕಾಶ ಹನುಮಂತರಾವ್ ಪಾಟೀಲ್, ಮಲ್ಲಯ್ಯ ಸ್ವಾಮಿ, ಬಸಲಿಂಗ ಉಡುಗಿ, ಸಂಜೀವಕುಮಾರ ತಳವಾರ, ಲಕ್ಮಿಪುತ್ರ ತಳವಾರ, ಬಸವರಾಜ್ ಎಸ್ ಉಡಗಿ, ಶಿವಾನಂದ ಉಮ್ಮರಗಿ, ಮಲ್ಲಿನಾಥ ಉಡಗಿ, ಅಶುತೋಷ ಕುಲಕರ್ಣಿ ರೇವೂರ, ಅನಿರುದ್ಧ ಕುಲಕರ್ಣಿ ರೇವೂರ ಹಾಗೂ ಊರಿನ ಗಣ್ಯರು ಹಿರಿಯರು ಪಾಲಗೊಂಡಿದ್ದರು.