Home ಜಿಲ್ಲೆ ಕಲಬುರಗಿ ಜಗತ್ತಿಗೆ ಬುದ್ಧನ ಶಾಂತಿಯ ತತ್ವಗಳು ಇಂದಿನ ಅಗತ್ಯ: ಖರ್ಗೆ

ಜಗತ್ತಿಗೆ ಬುದ್ಧನ ಶಾಂತಿಯ ತತ್ವಗಳು ಇಂದಿನ ಅಗತ್ಯ: ಖರ್ಗೆ

ಕಲಬುರಗಿ,ಅ.22-ಯುದ್ಧ, ಪ್ರಕ್ಷುಬ್ಧತೆ-ಪ್ರತಿಭಟನೆಗಳಿಗೆ ಸಾಕ್ಷಿಯಾಗುತ್ತಿರುವ ಜಗತ್ತಿಗ ತಥಾಗತ ಬುದ್ಧ, ಆತನ ಶಾಂತಿಯ ತತ್ವಗಳು ಇಂದಿನ ಅಗತ್ಯವಾಗಿವೆ ಎಂದು ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಹೊರವಲಯದ ಬುದ್ಧ ವಿಹಾರದಲ್ಲಿ ವಿಜಯದಶಮಿ ಅಂಗವಾಗಿ ಸಿದ್ಧಾರ್ಥ ವಿಹಾರ ಟ್ರಸ್ಟ್‍ನಿಂದ ಮಂಗಳವಾರ ಆಯೋಜಿಸಿದ್ದ 70ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬುದ್ಧನು ಪ್ರಜ್ಞೆ ಮತ್ತು ಕರುಣೆ ಬೋಧಿಸಿದರೆ, ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ, ಹೋರಾಟದ ಹಾದಿ ತೋರಿದರು. ಬುದ್ಧ, ಬಸವ, ಅಂಬೇಡ್ಕರ್, ಫುಲೆಯಂಥ ಮಹನೀಯರು ನಮಗೆಲ್ಲ ಮಾರ್ಗದರ್ಶನ ಮಾಡಿದ್ದಾರೆ. ಅವರ ತತ್ವ, ವಿಚಾರಗಳ ಮೇಲೆ ನಾವೆಲ್ಲ ನಡೆಯಬೇಕಾಗಿದೆ ಎಂದರು.
ಆರಂಭದಲ್ಲಿ ಬಿಕ್ಕುಗಳ ಸಂಘದಿಂದ ಬುದ್ಧವಂದನೆ ನಡೆಯಿತು. ಸಾಹಿತಿ ಈಶ್ವರ ಎಂ.ಇಂಗನ್ ಸ್ವಾಗತಿಸಿದರು. ಚಂದ್ರಶೇಖರ ದೊಡ್ಡಮನಿ ನಿರೂಪಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಕಿರಣ್ ದೇಶಮುಖ, ವಿಧಾನ ಪರಿಷತ್ ಸದಸ್ಯರಾದ ವಸಂತಕುಮಾರ, ವೆಂಕಟೇಶ, ತಿಪ್ಪಣ್ಣಪ್ಪ ಕಮಕನೂರ ಹಾಗೂ ಜಗದೇವ ಗುತ್ತೇದಾರ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ ಹರವಾಳ, ಮುಖಂಡರಾದ ಅರವಿಂದ ಅರಳಿ, ನೀಲಕಂಠರಾವ ಮೂಲಗೆ, ಶರಣು ಮೋದಿ, ಸೋಮಶೇಖರ್ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
………
ಬೌದ್ಧ ಧರ್ಮ ಅಪ್ಪಣ ಆಧುನಿಕ
ಬೌದ್ಧ ಧರ್ಮ ಅಪ್ಪಟ ಆಧುನಿಕ ಧರ್ಮವಾಗಿದೆ ಎಂದು ಸಂಸ್ಕøತಿ ಚಿಂತಕ ಡಾ.ನಟರಾಜ ಹುಳಿಯಾರ್ ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಅವರು, ಅಧ್ಯಯನವೇ ಬೌದ್ಧ ಧರ್ಮದ ಪ್ರಮುಖ ಲಕ್ಷಣ. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸುವ ಮುನ್ನ ಅಧ್ಯಯನ ಮಾಡಿದರು. ಹೀಗಾಗಿ ಅಂಬೇಡ್ಕರ್ ಅವರು ಸ್ವೀಕರಿಸಿದ ಬೌದ್ಧ ಧರ್ಮ ಅಪ್ಪಟ ಆಧುನಿಕ ಧರ್ಮವಾಗಿದೆ ಎಂದು ಪ್ರತಿಪಾದಿಸಿದರು.