
ಕಲಬುರಗಿ,ಅ.22-ಕರುನಾಡಿನ ಹೆಮ್ಮೆಯ ಹಿರಿಯ ಚಿತ್ರಕಲಾವಿದ, ನಾಡೋಜ ಡಾ. ಜಿ.ಎಸ್. ಖಂಡೇರಾವ್ ಅವರ ಜೀವನ ಹಾಗೂ ಕಲಾ ಜಗತ್ತಿಗೆ ಕೊಡುಗೆ ಕುರಿತ ಅಮೂರ್ತ ಧ್ಯಾನ ಗ್ರಂಥ ಬಿಡುಗಡೆ ಹಾಗೂ ಚಿತ್ರಕಲಾ ಪ್ರದರ್ಶನ ಇದೇ ಅ. 24 ರಂದು ಬೆಳಿಗ್ಗೆ 10.30 ಕ್ಕೆ ನಗರದ ಸೇಡಂ ರಸ್ತೆಯ ಎಂಆರ್ ಎಂಸಿ ಸ್ಯಾಕ್ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದೆ.
ಪುಸ್ತಕ ಲೋಕದಲ್ಲಿ ದಾಖಲೆ ಎನ್ನುವಂತೆ ಅದರಲ್ಲೂ ಯುವ ಕಲಾವಿದರಿಗೆ ಪ್ರೇರಣೆ ನೀಡುವ ಜತೆಗೆ ಸಂಶೋಧನಾ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಕೃತಿ ಇದಾಗಿದೆ ಎಂದು ನಾಡೋಜ ಡಾ. ಜೆ.ಎಸ್. ಖಂಡೇರಾವ್ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಖಂಡೇರಾವ್ ಹಾಗೂ ಗ್ರಂಥದ ಲೇಖಕ ಡಾ. ಅಶೋಕ ಶಟಕಾರ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.
ಮೌನಯೋಗಿ ಜಡೇ ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಸಮಾಧಾನ ಹಾಗೂ ನಾಡೋಜ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥಾನ ಭಾಲ್ಕಿ ಮತ್ತು ಶರಣಬಸವೇಶ್ವರ ದಾಸೋಹ ಸಂಸ್ಥಾನದ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪ ಇವರ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಎಂ.ಎಸ್. ಮೂರ್ತಿ ಉದ್ಘಾಟಿಸುವರು. ಸಂಸದ ರಾಧಾಕೃಷ್ಣ ದೊಡ್ಡಮನಿ ಗ್ರಂಥ ಬಿಡುಗಡೆಗೊಳಿಸುವರು.ಚಿತ್ರಕಲಾ ಪ್ರದರ್ಶನ ಉದ್ಘಾಟನೆ ಸಚಿವ ಡಾ. ಶರಣಪ್ರಕಾಶ ಪಾಟೀಲ ನೆರವೇರಿಸುವರು. ಹಿರಿಯ ಚಿತ್ರಕಲಾವಿದ ಡಾ. ಸಿ. ಚಂದ್ರಶೇಖರ ಅಧ್ಯಕ್ಷತೆ ವಹಿಸುವರು ಎಂದು ವಿವರಣೆ ನೀಡಿದರು.
ನಾಡೋಜ ಡಾ.ಜೆ.ಎಸ್.ಖಂಡೇರಾವ್ ಗೌರವ ಉಪಸ್ಥಿತರಿರುವರು. ಪೆÇ್ರ.ಆರ್.ಕೆ. ಹುಡಗಿ ಪ್ರಾಸ್ತಾವಿಕ ಮಾತನಾಡುವರು. ಪೆÇ್ರ. ವಿಕ್ರಮ್ ವಿಸಾಜಿ ಗ್ರಂಥದ ಕುರಿತು ಮಾತನಾಡುವರು. ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ,ಮುಂಬೈನ ಹಿರಿಯ ಚಿತ್ರಕಲಾವಿದ ಸುಹಾಸ ಬಹೂಲಕರ್ ಮುಖ್ಯ ಅತಿಥಿಗಳಾಗಿ, ಹಿರಿಯ ವೈದ್ಯ ಸಾಹಿತಿ ಡಾ. ಪಿ.ಎಸ್ ಶಂಕರ, ಹಿರಿಯ ಶಿಲ್ಪ ಕಲಾವಿದ ವೆಂಕಟಾಚಲಪತಿ, ಖ್ಯಾತ ಚಿತ್ರಕಲಾವಿದ ಡಾ.ವಿ.ಜಿ.ಅಂದಾನಿ ಅತಿಥಿಗಳಾಗಿ ಹಾಗೂ ನಾಡೋಜ ಡಾ.ಜೆ.ಎಸ್.ಖಂಡೇರಾವ್ ಪ್ರತಿಷ್ಠಾನ ಅಧ್ಯಕ್ಷ ಡಾ. ಪ್ರಭುರಾವ ಬಿ.ಕಾಂತಾ ಹಾಗೂ ಅಮೂರ್ತ ಧ್ಯಾನ ಗ್ರಂಥದ ಡಾ.ಅಶೋಕ ಶಟಕಾರ ಉಪಸ್ಥಿತರಿರುವರು.
ನಾಡೋಜ ಡಾ.ಜೆ.ಎಸ್.ಖಂಡೇರಾವ್ ಒಡನಾಡಿಗಳು ಹಾಗೂ ಕಲಾವಿದರಾದ ಚಿರಂಜೀವಿ ಸಿಂಗ್, ಜಸ್ಟೀಸ್ ಶಿವರಾಜ ಪಾಟೀಲ್, ಲಲಿತ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ, ಡಾ. ಸಂಜೀವ ಕಿಶೋರ ಗೌತಮ, ಪದ್ಮಶ್ರೀ ಅದ್ವೈತ ಚರಣ ಗಡನಾಯಕ, ಪದ್ಮಶ್ರೀ ವಾಸುದೇವ ಕಾಮತ್, ಮ.ಗು. ಬಿರಾದಾರ, ಡಾ. ಎಸ್. ಸಿ.ಪಾಟೀಲ್, ಎ.ಕೆ.ರಾಮೇಶ್ವರ , ಡಾ. ಎ.ಎಸ್. ಪಾಟೀಲ್, ಎ.ಕೆ. ರಾಮೇಶ್ವರ, ಡಾ.ಎ.ಎಸ್.ಪಾಟೀಲ್, ಎಸ್.ಜಿ. ವಾಸುದೇವ, ಕೆ.ವಿ. ಸುಬ್ರಹ್ಮಣ್ಯಮ್, ಅನೀಲ ನಾಯ್ಕ್, ರಾಜೇಂದ್ರ ಪಾಟೀಲ್, ಪೆÇ್ರ.ವಿಶ್ವನಾಥ ಸಾಬಳೆ, ರೇಖಾ ಹೆಬ್ಬಾರ್ ರಾವ್, ಡಾ.ಸುಜಾತಾ ಪಿ. ಶಾಂತಾ, ಎನ್.ಎಸ್. ದೇವರಕಲ್, ಟಿ.ವಿ. ಶಿವಾನಂದನ್, ಅಜಿಂಕ್ಯಾ ಚಾವೂಲ್ಕರ್, ಕೃಷ್ಣ ರಾಯಚೂರು ವಿಶೇಷ ಆವ್ಹಾನಿತರಾಗಿ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಗ್ರಂಥ ಲೇಖಕ ಡಾ.ಅಶೋಕ ಶೆಟಕಾರ, ಓಂ ಪ್ರಿಂಟರ್ಸ್ ನೀಲಕಂಠ ಸಿ. ಬಿರಾದಾರ, ರಾಮಲಿಂಗ ಬೆಳಕೋಟೆ, ಹಿರಿಯ ಶಿಲ್ಪ ಕಲಾವಿದ ಮಾನಯ್ಯ ಬಡಿಗೇರ ಅವರನ್ನು ವಿಶೇಷ ವಾಗಿ ಸನ್ಮಾನಿಸಲಾಗುತ್ತಿದೆ ಎಂದು ಬಸವರಾಜ ಖಂಡೇರಾವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಡೋಜ ಡಾ. ಜೆ.ಎಸ್. ಖಂಡೇರಾವ್ ಪ್ರತಿಷ್ಠಾನ ಅಧ್ಯಕ್ಷ ಡಾ. ಪ್ರಭುರಾಜ ಬಿ.ಕಾಂತ, ಸಮಾರಂಭ ಆಯೋಜನಾ ಸಮಿತಿ ಅಧ್ಯಕ್ಷ ಮೋಹನ ಸೀತನೂರ, ಚಿತ್ರಕಲಾ ವಿದರಾದ ನಾರಾಯಣ ಜೋಶಿ , ಡಾ.ಪರಶುರಾಮ ಪಿ ಉಪಸ್ಥಿತರಿದ್ದರು.






















