
ಕಲಬುರಗಿ: ಖಾಜಾ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಆಫೀಜ್ ಜನಾಬ್ ಡಾ. ಸೈಯದ್ ಮುಹಮ್ಮದ್ ಅಲಿ ಅಲ್-ಹುಸೈನಿ ಸಾಹೇಬ್ ಅವರಿಗೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವು (ಎಎಂಯು) ಕೊಡಮಾಡುವ ಪ್ರತಿಷ್ಠಿತ ‘ಸರ್ ಸೈಯದ್ ಎಕ್ಸಲೆನ್ಸ್ 20226 ಅವಾರ್ಡ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಉತ್ತರ ಪ್ರದೇಶದ ಅಲಿಘರ್ನಲ್ಲಿ 2026ರ ಅಕ್ಟೋಬರ್ 17ರಂದು ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಿಕ್ಷಣ, ಸಾಮಾಜಿಕ ಉನ್ನತಿ, ಅಲ್ಪಸಂಖ್ಯಾತರ ಸಬಲೀಕರಣ, ಕೋಮುಸೌಹಾರ್ದತೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ಮೂಲಕ ಜ್ಞಾನ ಪ್ರಸಾರಕ್ಕೆ ನೀಡಿರುವ ನಿರಂತರ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
1958ರಲ್ಲಿ ಗುಲ್ಬರ್ಗಾದ ಐತಿಹಾಸಿಕ ಸೂಫಿ ದರ್ಗಾ ಖುಜಾ ಬಂದಾ ನವಾಜ್ (ಗೇಸು ದರಾಜ್) ಅವರ ಸ್ಪೂರ್ತಿಯಿಂದ ಆರಂಭಗೊಂಡ ಖಾಜಾ ಎಜ್ಯುಕೇಶನ್ ಸೊಸೈಟಿ ಸಾಂಪ್ರದಾಯಿಕ ಶಿಕ್ಷಣ ಸಂಸ್ಥೆಗಳ ಪುನರುಜ್ಜೀವನದೊಂದಿಗೆ ಕಾಲಕ್ರಮೇಣ ನೈತಿಕ ಮತ್ತು ಮಾನವಿ?ಯ ಮೌಲ್ಯಗಳಿಗೆ ಒತ್ತು ನೀಡುತ್ತ್ ಆಧುನಿಕ, ವೈಜ್ಞಾನಿಕ ಹಾಗೂ ತಾಂತ್ರಿಕ ಶಿಕ್ಷಣಕ್ಕೂ ಒತ್ತು ನೀಡಿದೆ.
ಪ್ರಸ್ತುತ ಈ ಸೊಸೈಟಿಯು ಬಾಲಕ-ಬಾಲಕಿಯರ ಶಾಲೆಗಳು, ಮಹಿಳಾ ಕಾಲೇಜುಗಳು, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳು, ಇಂಜಿನಿಯರಿಂಗ್, ವೈದ್ಯಕೀಯ ಮತ್ತು ನಸಿರ್ಂಗ್ ಸಂಸ್ಥೆಗಳನ್ನು ನಡೆಸುತ್ತಿದೆ.
ಇದರ ಶೈಕ್ಷಣಿಕ ಸೇವೆಯ ಮೈಲಿಗಲ್ಲಾಗಿ 2018ರಲ್ಲಿ ‘ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯ’ ಸ್ಥಾಪನೆಯಾಗಿದ್ದು, ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ.
ಅಲ್ಲದೇ, ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಹಬ್, ಕ್ರೀಡಾ ಹಬ್ ಮತ್ತು ಬಡುವರ ಸೇವೆಯಲ್ಲಿ ನಿರತವಾದ ಕೆಬಿಎನ್ ಆಸ್ಪತ್ರೆಯಿಂದ ಆರೋಗ್ಯ ಹಬ್ ಕೂಡ ನಿರ್ಮಾಣವಾಗಿದೆ.























