
ಕಲಬುರಗಿ,ಅ.22-ಇಲ್ಲಿನ ಬುದ್ಧಂಕುರ ಪ್ರಕಾಶನ ಸಂಸ್ಥೆ ವತಿಯಿಂದ ಕವಿ ಸಂತೋಷಕುಮಾರ ಕರಹರಿ ಅವರ “ನಿಜದರಿವು” ಹೈಕು ಸಂಕಲನ ಲೋಕಾರ್ಪಣೆ, ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಸಮಾರಂಭವನ್ನು ಅ.18 ರಂದು ನಗರದ ಸೇಡಂ ರಸ್ತೆಯ ಹೊಸ ಆರ್ಟಿಓ ಕಚೇರಿ ಹತ್ತಿರದ ರಂಗಾಯಣ ಸಭಾಂಗಣದಲ್ಲಿ ನಡೆಯಿತು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ನಾಡೋಜ ಡಾ.ಕುಂ.ವೀರಭದ್ರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಪುಸ್ತಕ ಬಿಡುಗಡೆ ಮಾಡಿದರು. ಬೀದರ್ನ ಹಿರಿಯ ಸಾಹಿತಿ ಶಂಭುಲಿಂಗ ವಾಲ್ದೊಡ್ಡಿ ಅವರು ಅಧ್ಯಕ್ಷತೆ ವಹಿಸಿದ್ದರು.
ಹಾವೇರಿಯ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಟಿ.ಎಂ.ಭಾಸ್ಕರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಅಫಲಪುರದ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ.ಶಿವಶರಣಪ್ಪ ಮೋತಕಪಳ್ಳಿ ಮುಖ್ಯ ಅತಿಥಿಗಳಾಗಿ, ಚಿಂಚೋಳಿ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ದೇಶಪಾಂಡೆ ಅತಿಥಿಗಳಾಗಿ ಆಗಮಿಸಿದ್ದರು.
ವಿಮರ್ಶಕ ಡಾ.ಗವಿಸಿದ್ದಪ್ಪ ಪಾಟೀಲ ಪುಸ್ತಕ ಪರಿಚಯ ಮಾಡಿದರು. ಕವಿ ಸಂತೋಷಕುಮಾರ ಎಸ್.ಕರಹರಿ ಅವರು ಉಪಸ್ಥಿತರಿದ್ದರು. ಉತ್ತಮ ದೊಡ್ಡಮನಿ ಚಿಂಚೋಳಿ ಪ್ರಶಸ್ತಿ ಪುರಸ್ಕøತರ ಪರಿಚಯ ಮಾಡಿದರು. ಡಾ.ರಾಜಕುಮಾರ ಮಾಳಗೆ ಸ್ವಾಗತಿಸಿದರು. ಮುನ್ನೆಮ್ಮ ಮೇತ್ರೆ ಕಾರ್ಯಕ್ರಮ ನಿರೂಪಿಸಿದರು. ಸಿರಿಗನ್ನಡ ವೇದಿಕೆ ಕಾರ್ಯದರ್ಶಿ ಡಾ.ಸಿದ್ದಪ್ಪ ಹೊಸಮನಿ ವಂದಿಸಿದರು. ಸಾಹಿತಿಗಳು, ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
……………
ಪ್ರಶಸ್ತಿ ಪ್ರದಾನ
ಹಿರಿಯ ಸಾಹಿತಿ ವಿ.ಆರ್.ಚಾಂಬಾಳ್, ಡಾ.ಜಯದೇವಿ ಗಾಯಕವಾಡ ಅವರಿಗೆ ಬುದ್ಧಂಕುರ ವಾರ್ಷಿಕ ಪ್ರಶಸ್ತಿ ಮತ್ತು ಗಾಯಕ ಸಿದ್ಧಾರ್ಥ ಚಿಮ್ಮಾಇದಲಾಯಿ, ಕು.ಪೃಥ್ವಿ ದೇವಿಂದ್ರಪ್ಪ ಕಪನೂರ ಅವರಿಗೆ ಸನ್ನತಿ ಪ್ರೇರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.























