Home ಜಿಲ್ಲೆ ಬೆಂಗಳೂರು ಶ್ರೀ ಮುತ್ತುರಾಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಭೂಮಿ ಪೂಜೆ

ಶ್ರೀ ಮುತ್ತುರಾಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಭೂಮಿ ಪೂಜೆ

ಕನಕಪುರ, ನ,೧೩- ನಲ್ಲಹಳ್ಳಿಯ ಶ್ರೀ ಮುತ್ತುರಾಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಬೆಂಗಳೂರು ಪೋಷಕ ಯುವ ಆಹಾರ ಉತ್ಪಾದನಾ ಸಹಕಾರದ (ಬಮೂಲ್) ಅಧ್ಯಕ್ಷ ಡಿ.ಕೆ. ಸುರೇಶ್, ಮರಳಿಗವಿ ಮಠದ ಪೀಠಾಧ್ಯಕ್ಷರಾದ ಮುಮ್ಮಡಿ ಡಾ. ಶಿವರುದ್ರ ಸ್ವಾಮಿ ಹಾಗೂ ಶಿವಗಿರಿ ಕ್ಷೇತ್ರದ ಅನ್ನದಾನೇಶ್ವರ ಸ್ವಾಮಿಯವರು ಭೂಮಿಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.


ಶ್ರೀ ಮುತ್ತುರಾಯಸ್ವಾಮಿ ದೇವಾಲಯವು ನೂರಾರು ವರ್ಷಗಳಿಂದ ಇದ್ದು, ಹತ್ತಾರು ವರ್ಷಗಳಿಂದ ಭಕ್ತಾಧಿಗಳು ಹೊಸ ದೇವಾಲಯದ ನಿರ್ಮಾಣಕ್ಕೆ ಬೇಡಿಕೆಯನ್ನಿಟ್ಟಿದ್ದಾರೆ. ಅದರ ಅಂಗವಾಗಿ ಇಂದಿಗೆ ಹೊಸ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ ಎಂದು ಡಿ.ಕೆ. ಸುರೇಶ್ ತಿಳಿಸಿದರು.


ಶ್ರೀ ಮುತ್ತುರಾಯಸ್ವಾಮಿ ಸನ್ನಿಧಿಯಲ್ಲಿ ಸಾವಿರಾರು ಮದುವೆ ಶುಭಕಾರ್ಯಗಳು ನಡೆದಿದ್ದು, ಪ್ರಾಥಮಿಕವಾಗಿ ದೇವಾಲಯದ ಜೀರ್ಣೋದ್ಧಾರ ನಂತರ ೪೦ ಅಡಿ ಎತ್ತರದ ಅಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಲಾಗುವುದು. ಈ ಎಲ್ಲಾ ಕಾರ್ಯಗಳಿಗೆ ಸುಮಾರು ೫ ಕೋಟಿಗೂ ಅಧಿಕ ಹಣ ವೆಚ್ಚವಾಗಲಿದ್ದು, ಭಕ್ತಾಧಿಗಳು ಸಹ ತಮ್ಮ ತನು-ಮನ-ಧನವನ್ನು ಮುತ್ತುರಾಯಸ್ವಾಮಿ ಟ್ರಸ್ಟ್ ಮೂಲಕ ಸಲ್ಲಿಸಬಹುದಾಗಿದೆ. ಈ ಟ್ರಸ್ಟ್‌ನಲ್ಲಿ ನಲ್ಲಹಳ್ಳಿ, ಬ್ಯಾಟರಾಯನದೊಡ್ಡಿ, ಆಲಹಳ್ಳಿ, ಕೃಷ್ಣಯ್ಯನದೊಡ್ಡಿಯವರು ಭಾಗವಹಿಸಿದ್ದು ಉಸ್ತುವಾರಿ ವಹಿಸಿಕಕೊಂಡಿದ್ದಾರೆ ಎಂದರು.


ಇದೇ ಸಂದರ್ಭದಲ್ಲಿ ಗಣಪತಿ ಹೋಮ ಮೊದಲಾದ ಹೋಮ ಹವನಗಳನ್ನು ನೆರೆವೇರಿಸುವ ಮೂಲಕ ಯಾವುದೇ ವಿಘ್ನವಿಲ್ಲದೆ ದೇವಾಲಯದ ಜೀರ್ಣೋದ್ಧಾರ ಕಾರ್ಯ ನೆರವೇರಲೆಂದು ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಬಿಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕರಾದ ಹಾರೋಬಲೆ ಚಿನ್ನರಾಜು, ಹೊಸ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾಗಿ ರುವ ದೊಡ್ಡಾಲಹಳ್ಳಿ ಕೃಷ್ಣಪ್ಪ, ತಾಲೂಕು ಗ್ಯಾರಂಟಿ ಯೋಜನಾ ಅಷ್ಠಾನು ಸಮಿತಿಯ ಅಧ್ಯಕ್ಷ ಏಳಗಳ್ಳಿ ರವಿ, ಮಾಜಿ ಅಧ್ಯಕ್ಷರಾದ ಕೆ.ಎನ್. ದಿಲೀಪ್, ಬ್ಲಾಕ್ ಕ್ಯಾಂಪಸ್ ಅಧ್ಯP ರಾದ ಮುತ್ತುರಾಜು, ಎಸ್.ಜೆ. ನಾಗರಾಜು, ಮೂಲಭೂತ ಸೌಕರ್ಯ ಗಳ ಸಮಿತಿಯ ಬಸಪ್ಪ ,ನಲ್ಲಹಳ್ಳಿ ಶಿವಣ್ಣ, ಜಯರಾಮು, ಹೂಳಿತ ಹೊಸದೊಡ್ಡಿಯ ಚಂದ್ರು, ಎಸ್.ಕೆ. ಕುಮಾರ್, ದೊಡ್ಡಾಲಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಂದೀಶ್, ಒಳಗೊಂಡಂತೆ ಅನೇಕ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.