Home ಜಿಲ್ಲೆ ನಾವದಗೇರಿ ಬಡಾವಣೆಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ನಿವಾಸಿಗಳ ಮನವಿ

ನಾವದಗೇರಿ ಬಡಾವಣೆಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ನಿವಾಸಿಗಳ ಮನವಿ

ಬೀದರ್: ನಗರದ ವಾರ್ಡ್ ನಂ. ೧೩ರ ನಾವದಗೇರಿ ಬಡಾವಣೆಯಲ್ಲಿ ಕಳೆದ ೩೦ ವರ್ಷಗಳಿಂದ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಡಾವಣೆಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಿಸಿ ನಿವಾಸಿಗಳು ಬುಧವಾರ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ ಬೀದರ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಾಲಾಜಿ ಔರಾದಕರ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಬಡಾವಣೆಯ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿ ಶೀಘ್ರದಲ್ಲೇ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸಬೇಕೆAದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಗೀತಾ ಗಂಡ ಘಾಳೆಪ್ಪಾ, ಇಂದುಮತಿ ಗಂಡ ಅನೀಲ, ಸಂಗೀತಾ ಗಂಡ ಸಂಗಪ್ಪಾ, ಕಾವೇರಿ ಗಂಡ ರವಿ, ಬುಜ್ಜಮ್ಮ ಗಂಡ ಬಾಲಾಜಿ, ಲಕ್ಷ್ಮೀ ಗಂಡ ಮಲ್ಲಿಕಾರ್ಜುನ, ಸತ್ಯಮ್ಮ ಗಂಡ ರಾಜು, ಕಾವೇರಿ ಗಂಡ ಪ್ರವೀಣ, ರಾಜು ಬಾಬುರಾವ, ಶಿರೋಮಣಿ, ಮಾರ್ಕ್ ತಂದೆ ಶಿರೋಮಣಿ, ರಾಕೇಶ್ ರಾಜಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.